ಸುಲಕ್ಷಣಾ ಪಂಡಿತ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಹಲವಾರು ಮಧುರ ಗೀತೆಗಳಿಗೆ ಧ್ವನಿ ನೀಡಿದ್ದರು. ಅಷ್ಟೇ ಅಲ್ಲ, ನಟಿಯಾಗಿ ಕೂಡಾ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಅವರ ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಹಸಿರಾಗಿವೆ. ಇದೀಗ 71ನೇ ವರ್ಷದಲ್ಲಿ ಅವರು ಅಸುನೀಗಿದ್ದಾರೆ.
ಖ್ಯಾತ ಗಾಯಕಿ-ನಟಿ ಸುಲಕ್ಷಣಾ ಪಂಡಿತ್ ನಿಧನ: ಬಾಲಿವುಡ್‌ನಿಂದ ಸಂಗೀತ ಕುಟುಂಬಕ್ಕೊಂದು ದೊಡ್ಡ ನಷ್ಟ!
ಬಾಲಿವುಡ್‌ನ 70 ಮತ್ತು 80ರ ದಶಕದ ಖ್ಯಾತ ಗಾಯಕಿ ಮತ್ತು ನಟಿ ಸುಲಕ್ಷಣಾ ಪಂಡಿತ್ ಅವರು ನವೆಂಬರ್ 6, 2025 ರಂದು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಚಿತ್ರರಂಗ ಮತ್ತು ಸಂಗೀತ ಲೋಕದಲ್ಲಿ ಆಳವಾದ ಸಂತಾಪ ವ್ಯಕ್ತವಾಗಿದೆ.
ಸುಲಕ್ಷಣಾ ಪಂಡಿತ್ ಅವರು ಹಿಂದಿ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿ ಮತ್ತು ನಟಿ
ಸುಲಕ್ಷಣಾ ಪಂಡಿತ್ ಅವರು ಹಿಂದಿ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿ ಮತ್ತು ನಟಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಂದಿನ ಜನಪ್ರಿಯ ನಾಯಕಿಯರಲ್ಲಿ ಅವರೂ ಒಬ್ಬರು. ಅತ್ಯಂತ ಪ್ರತಿಷ್ಠಿತ ಸಂಗೀತ ಕುಟುಂಬದಿಂದ ಬಂದವರು ಸುಲಕ್ಷಣಾ. ಅವರು ಸಂಗೀತ ದಿಗ್ಗಜ ಪಂಡಿತ್ ಜಸರಾಜ್ ಅವರ ಸೋದರ ಸೊಸೆಯಾಗಿದ್ದರು ಮತ್ತು ಖ್ಯಾತ ಸಂಗೀತ ನಿರ್ದೇಶಕ ಜೋಡಿ ಜತಿನ್-ಲಲಿತ್ ಅವರ ಸಹೋದರಿಯಾಗಿದ್ದರು. ಈ ಸಂಗೀತ ಪರಂಪರೆ ಸುಲಕ್ಷಣಾ ಅವರ ವೃತ್ತಿಜೀವನವನ್ನು ಇನ್ನಷ್ಟು ಶ್ರೀಮಂತಗೊಳಿಸಿತ್ತು.
ಆತ್ಮಕ್ಕೆ ಶಾಂತಿ ಸಿಗಲಿ
ಸುಲಕ್ಷಣಾ ಪಂಡಿತ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಹಲವಾರು ಮಧುರ ಗೀತೆಗಳಿಗೆ ಧ್ವನಿ ನೀಡಿದ್ದರು. ಅಷ್ಟೇ ಅಲ್ಲ, ನಟಿಯಾಗಿ ಕೂಡಾ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಅವರ ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಹಸಿರಾಗಿವೆ. ಸುಲಕ್ಷಣಾ ಅವರ ನಿಧನವು ಬಾಲಿವುಡ್ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ.
