ಶ್ರೇಯಾ ಘೋಷಾಲ್ ಬಾಲಿವುಡ್ ಪಯಣಕ್ಕೆ ಭರ್ತಿ 19 ವರ್ಷ ಬನ್ಸಾಲಿ ಸಿನಿಮಾ ದೇವದಾಸ್ ಮೂಲಕ ಡಿಬಟ್ ಕೊಟ್ಟಿದ್ದ ಗಾಯಕಿ
ಸಂಜಯ್ ಲೀಲಾ ಭನ್ಸಾಲಿ ಅವರ ಅದ್ಭುತ ಸಿನಿಮಾ ದೇವದಾಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಜನಪ್ರಿಯ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಶಾಲ್ ಸೋಮವಾರ ಚಿತ್ರದ 19 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ತಮ್ಮ 16 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ ಶ್ರೇಯಾ. ಆ ವಯಸ್ಸಿನಲ್ಲಿ ತಮ್ಮನ್ನು ನಂಬಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಲುಂಗಿ ಜಾರುತ್ತಿತ್ತು ಎಂದ ಶಾರೂಖ್: ದೇವದಾಸ್‌ಗೆ 19 ವರ್ಷ
"19 ವರ್ಷಗಳ ಹಿಂದೆ ಈ ದಿನದಂದು ನಾನು ಹಿಂದಿ ಫಿಲ್ಮ್‌ಗಳಲ್ಲಿ ಪಾದಾರ್ಪಣೆ ಮಾಡಿದ್ದೇನೆ. ದೇವದಾಸ್ ಸಿನಿಮಾದ ಸಂಗೀತದ ನೆನಪುಗಳಲ್ಲಿ ಇನ್ನೂ ಎದ್ದುಕಾಣುತ್ತದೆ. ಸಂಜಯ್ ಲೀಲಾ ಭನ್ಸಾಲಿ ಸರ್ ಆ 16 ವರ್ಷದ ಹುಡುಗಿಯನ್ನು ನಂಬಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ ಶ್ರೇಯಾ. ದಿವಂಗತ ನಟ ದಿಲೀಪ್ ಕುಮಾರ್ ಅವರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶ್ರೇಯಾ ಗೌರವ ಸಲ್ಲಿಸಿದ್ದಾರೆ.
ಜುಲೈ 7 ರಂದು ಮುಂಬೈನಲ್ಲಿ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದ ನಟ, 1955 ರ ದೇವದಾಸ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.
ಶ್ರೇಯಾ ಭಾರತದ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು ಮತ್ತು ಚಲನಚಿತ್ರಗಳಿಗೆ ಹಾಡುಗಳನ್ನು, ವಿವಿಧ ಭಾಷೆಗಳಲ್ಲಿ ಆಲ್ಬಮ್‌ಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವರ ಕಾರ್ಯಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
