Asianet Suvarna News Asianet Suvarna News

ಗಂಡ ಜೈಲಲ್ಲಿ: ಮನೆಗೆ ಗಣೇಶನ ತಂದ ಶಿಲ್ಪಾ ಶೆಟ್ಟಿ ಮುಖದಲ್ಲಿ ನಗು

  • ಪತಿ ಜೈಲಲ್ಲಿದ್ದರೂ ಪ್ರತಿ ವರ್ಷದಂತೆ ಗಣಪನ ಮನೆಗೆ ತಂದ ಶಿಲ್ಫಾ ಶೆಟ್ಟಿ
  • ಬೇಸರದಲ್ಲೇ ಇದ್ದ ನಟಿಯ ಮುಖದಲ್ಲಿ ಹಬ್ಬದ ಸಮಯದಲ್ಲಿ ಕಿರುನಗು 

 

Shilpa Shetty welcomes Lord Ganesha home with a smile ahead of Ganesh Chaturthi dpl
Author
Bangalore, First Published Sep 10, 2021, 3:47 PM IST

ಬಾಲಿವುಡ್ ನಟ ನಟಿಯರು ಧರ್ಮ, ಜಾತಿಯ ಭೇದವಿಲ್ಲದೆ ಗಣೇಶನ ಹಬ್ಬವನ್ನು ಸಂಭ್ರಮಿಸುತ್ತಾರೆ. ಇದಕ್ಕೆ ಶಿಲ್ಪಾ ಶೆಟ್ಟಿಯೂ ಹೊರತಲ್ಲ. ಪತಿ ಮಕ್ಕಳು ಅತ್ತೆ, ಅಮ್ಮ, ತಂಗಿ ಜೊತೆ ಪ್ರತಿ ವರ್ಷ ಭಾರೀ ಸಂಭ್ರಮದಿಂದ ಹಬ್ಬ ಮಾಡುತ್ತಾರೆ ನಟಿ. ಆದರೆ ಈ ಬಾರಿ ಹಾಗಲ್ಲ. ಪ್ರತಿ ವರ್ಷದಂತಿಲ್ಲ ನಟಿಯ ಪರಿಸ್ಥಿತಿ. ಆದರೆ ಹಬ್ಬದ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಶಿಲ್ಪಾ. ಸಂಭ್ರಮದಿಂದ ಪುಟ್ಟ ಗಣಪನ ಮನೆಗೆ ಕರೆ ತಂದಿದ್ದಾರೆ.

ಅಶ್ಲೀಲ ಪ್ರಕರಣದಲ್ಲಿ ಆಕೆಯ ಪತಿ ರಾಜ್ ಕುಂದ್ರಾ ಬಂಧನದ ನಡುವೆ, ನಟಿ ಶಿಲ್ಪಾ ಶೆಟ್ಟಿ ಪ್ರತಿವರ್ಷದಂತೆ ಗಣೇಶನ ಮೂರ್ತಿಯನ್ನು ತಮ್ಮ ನಿವಾಸದಲ್ಲಿ ತಂದಿದ್ದಾರೆ. ಗಣೇಶ ಚತುರ್ಥಿಯ ಮುನ್ನ, ನಟಿ ಗಣೇಶನನ್ನು ನಗುಮುಖದೊಂದಿಗೆ ಸ್ವಾಗತಿಸುತ್ತಿರುವುದು ಕಂಡುಬಂದಿತು.

ಶಿಲ್ಪಾ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವಾಗ ಪಾಪರಾಜಿಗಾಗಿಗಳು ಫೋಟೋ ಕ್ಲಿಕ್ಕಿಸಿದ್ದಾರೆ. ಪತಿಯ ಬಂಧನದ ನಂತರ ಇದೇ ಮೊದಲ ಬಾರಿ ಸ್ವಲ್ಪ ನಗುವನ್ನು ಚೆಲ್ಲಿದ ನಟಿಯ ಸಂತೋಷದ ಫೋಟೋ ಕ್ಲಿಕ್ಕಿಸಲಾಗಿದೆ. ನಟಿ ಗಣೇಶನನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ.

ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾನ ಮದ್ವೆಯಾದಾಗ ಡಿಪ್ರೆಷನ್‌ಗೊಳಗಾಗಿದ್ದ ಶಮಿತಾ

ಶಿಲ್ಪಾ ತನ್ನ ಪತಿಯ ಬಂಧನದ ನಂತರ ತನ್ನ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋನ ಸೆಟ್‌ಗಳಿಗೂ ನಟಿ ಮರಳಿ ಬಂದಿದ್ದಾರೆ. ಅಶ್ಲೀಲ ವಿಡಿಯೋ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂಧಿಸಲಾಯಿತು. ಬಂಧನದ ನಂತರ, ಶಿಲ್ಪಾ ಕುಟುಂಬದ ಪರವಾಗಿ ಹೇಳಿಕೆಯನ್ನು ಕೊಡುವ ಮೂಲಕ ಮೌನ ಮುರಿದಿದ್ದಾರೆ.

Follow Us:
Download App:
  • android
  • ios