ಹಿಜಾಬ್​ ಧರಿಸಿದ ಫೋಟೋ ಶೇರ್​ ಮಾಡಿದ ಸಮಂತಾ: ಫ್ಯಾನ್ಸ್ ಶಾಕ್​!

ನಟ ನಾಗ ಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ ಇದೀಗ ನಟಿ ಸಮಂತಾ ಹಿಜಾಬ್​ ಧರಿಸಿ ಸುದ್ದಿಯಲ್ಲಿದ್ದಾರೆ. ಆಗಿದ್ದೇನು?
 

Samantha shared a photo wearing hijab fans shocked

ಇದಾಗಲೇ ಕೆಲವು ನಟಿಯರು ಮುಸ್ಲಿಂ ನಟ, ರಾಜಕಾರಿಗಳ  ಜೊತೆ ಮದುವೆಯಾಗಿದ್ದಾರೆ.  ಕೆಲವರು ಮೊದಲ ಪತ್ನಿಯಾಗಿದ್ದರೆ, ಇನ್ನು ಕೆಲವರು ಎರಡನೇ, ಮೂರನೆಯ ಪತ್ನಿಯಾಗಿಯೂ ಹೋಗಿದ್ದಾರೆ. ಕೆಲವರು ಇದಾಗಲೇ ವಿಚ್ಛೇದನ ಪಡೆದಿದ್ದರೆ ಇನ್ನು ಕೆಲವರು ಸುಖಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಈ ಸುದ್ದಿ ಮುನ್ನೆಲೆಗೆ ಬಂದಿರುವುದು ಕೇರಳದ ಕರಾಳ ಕಹಿ ಘಟನೆಯನ್ನು ಬಿಚ್ಚಿಟ್ಟ ದಿ ಕೇರಳ ಸ್ಟೋರಿ ಚಿತ್ರದ (The Kerala Story) ಬಿಡುಗಡೆಯ ನಂತರ. ದಿ ಕೇರಳ ಸ್ಟೋರಿ ಚರ್ಚೆಯಾಗುತ್ತಿರುವ ನಡುವೆಯೇ ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ನಟಿ ಸಮಂತಾ ರುತ್​ ಪ್ರಭು ಬುರ್ಖಾ ಧರಿಸಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಅದನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಇದೇನೆಂದು ತಿಳಿಯದೇ ಹಲವರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದೇನಾಯ್ತು ನಿಮಗೆ ಎಂದು ಕೆಲವರು ಪ್ರಶ್ನಿಸಿದರೆ, ನಾಗ ಚೈತನ್ಯ ಅವರಿಂದ ಬೇರ್ಪಟ್ಟ ಮೇಲೆ ಮತಾಂತರಗೊಂಡಿರುವಿರಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಅಯ್ಯೋ ಸಮಂತಾರವರೇ, ಹೀಗೆ ಏಕೆ ಮಾಡಿದ್ದೀರಿ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಆದರೆ  ನಟಿ ಸಮಂತಾ ಹಿಜಾಬ್​ ಧರಿಸುವುದಕ್ಕೆ ಕಾರಣವೂ ಇದೆ. ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಸಮಂತಾ-ವಿಜಯ್ ಕಾಂಬಿನೇಷನಲ್ಲಿ ಲವ್​ಸ್ಟೋರಿ ಒಂದು ಶುರುವಾಗಿದೆ. ಅದೇ ಕಾರಣಕ್ಕೆ ಸಮಂತಾ ಹಿಜಾಬ್​ ಹಾಕಿದ್ದಾರೆ!  ಖುಷಿ ಸಿನಿಮಾಕ್ಕಾಗಿ ಈ ವೇಷ.  ಶಾಕುಂತಲಂ ಸೋಲಿನ ಬಳಿಕ ನಟ ವಿಜಯ್ ದೇವರಕೊಂಡ ಜೊತೆ ನಟಿ ಸಮಂತಾ, ಖುಷಿ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಖುಷಿ ಸಿನಿಮಾ ಶೂಟಿಂಗ್ ವೇಳೆ ಕಳೆದ ಖುಷಿ, ಖುಷಿ ಕ್ಷಣದ ಫೋಟೋಗಳನ್ನು ಸಮಂತಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದಲ್ಲಿ ಖುಷಿ ಸಿನಿಮಾ ಮೂಡಿ ಬರುತ್ತಿದೆ.  

Naga Chaitanya: ಸೀಕ್ರೆಟ್ ಕ್ರಶ್​ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಸಮಂತಾ ಮಾಜಿ ಪತಿ!

ಈ ಚಿತ್ರದಲ್ಲಿ ಸಮಂತಾ ಮುಸ್ಲಿಂ ಹುಡುಗಿಯಾಗಿ  ಕಾಣಿಸಿಕೊಂಡಿದ್ದಾರೆ. ಕಾಶ್ಮೀರದಲ್ಲೇ ಸಿನಿಮಾದ ಬಹುತೇಕ ಶೂಟಿಂಗ್ ನಡೆದಿದೆ. ಶೂಟಿಂಗ್ ವೇಳೆ ಕಾಶ್ಮೀರದಲ್ಲಿ ತೆಗೆದ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಕಾಶ್ಮೀರದ ಬೆಟ್ಟ-ಗುಡ್ಡಗಳ ಸುಂದರ ತಾಣದಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಕಾಶ್ಮೀರ ಅನೇಕರ ನೆಚ್ಚಿನ ತಾಣವಾಗಿದೆ. ಅನೇಕ ಸಿನಿಮಾ ಶೂಟಿಂಗ್ ಕೂಡ ಅಲ್ಲೇ ನಡೆಯುತ್ತದೆ. ಕಾಶ್ಮೀರದ ದ್ರಾಕ್ಷಿ ಫೋಟೋಗಳನ್ನು ಕೂಡ ನಟಿ ಹಂಚಿಕೊಂಡಿದ್ದಾರೆ.

ಶಿವ ನಿರ್ವಾಣ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ರೊಮ್ಯಾಂಟಿಕ್ ಲವ್ ಎಂಟರ್ಟೈನರ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ.  ಮೇ 9ರಂದು ಖುಷಿ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದ ಬಹಳಷ್ಟು ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ಹಾಗೂ ವಿಜಯ್ ನಡುವಿನ ರೊಮ್ಯಾಂಟಿಕ ರಿಲೇಷನ್​ಶಿಪ್ ಈ ಹಾಡಿನ ದೃಶ್ಯಗಳಲ್ಲಿ ರಿವೀಲ್ ಆಗಿದೆ. ಇದರಲ್ಲಿ ಸಮಂತಾ ಹಿಜಾಬ್ (Hijab) ಧರಿಸಿದ್ದನ್ನು ನೋಡಿ ನೆಟ್ಟಿಗರು ಅಚ್ಚರಿಪಡುತ್ತಿದ್ದಾರೆ. ಅಂತೂ ಈ ಸಿನಿಮಾ ಕೂಡಾ ಒಂದು ಅಂತರ್​ಧರ್ಮೀಯ ಲವ್​ಸ್ಟೋರಿ (Love Story) ಎನ್ನುವ ಹಿಂಟ್ ಸಿಕ್ಕಿದೆ. ಇದರಲ್ಲಿ ಸಮಂತಾ ಅವರ ಮುಸ್ಲಿಂ ಲುಕ್ ಅನ್ನು ಕಾಣಬಹುದು. ನಟಿ ಸಮಂತಾ ರುತ್ ಪ್ರಭು ಇದಕ್ಕಿಂತ ಮೊದಲು ಅಂಜನ್ ಸಿನಿಮಾದಲ್ಲಿ ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಮುಸ್ಲಿಂ ಯುವತಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಯುವ ಪ್ರೇಕ್ಷಕರಿಗೆ ಇಷ್ಟವಾಗುವ ಸಾಕಷ್ಟು ದೃಶ್ಯಗಳನ್ನು ಈ ಸಿನಿಮಾದಲ್ಲಿ ಇರುವಂತೆ ನಿರ್ದೇಶಕ ಶಿವ ನಿರ್ವಾಣ ಪ್ಲಾನ್ ಮಾಡಿದ್ದಾರೆ. ಸಮಂತಾ ಹಾಗೂ ವಿಜಯ್ ಲವ್ ಕೆಮಿಸ್ಟ್ರಿ ಟಾಲಿವುಡ್ ಪ್ರೇಕ್ಷಕರಿಗೆ ಇಷ್ಟವಾಗೋದು ಗ್ಯಾರಂಟಿ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.

Naga Chaitanya: ಸೀಕ್ರೆಟ್ ಕ್ರಶ್​ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಸಮಂತಾ ಮಾಜಿ ಪತಿ!  

 

 

Latest Videos
Follow Us:
Download App:
  • android
  • ios