Asianet Suvarna News Asianet Suvarna News

Salman Khan Expensive Gifts: ಮಾಜಿ ಬಾಯ್‌ಫ್ರೆಂಡ್ ಬರ್ತ್‌ಡೇಗೆ ದುಬಾರಿ ಗಿಫ್ಟ್ ಕೊಟ್ಟ ನಟಿಯರು

Salman Khan Birthday: ಬಾಲಿವುಡ್ ನಟ ಸಲ್ಮಾನ್ ಖಾನ್ ಬರ್ತ್‌ಡೇ ದಿನ ಬಹಳಷ್ಟು ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ. ನಟನ ಮಾಜಿ ಪ್ರೇಯಸಿಯರು ನಟನಿಗಾಗಿ ಲಕ್ಷುರಿ ಗಿಫ್ಟ್ಸ್ ಕೊಟ್ಟಿದ್ದಾರೆ.

Salman Khan received Gold bracelet from Katrina Kaif luxe watch from Jacqueline Fernandez and more expensive gifts on Birthday dpl
Author
Bangalore, First Published Dec 28, 2021, 11:56 PM IST
  • Facebook
  • Twitter
  • Whatsapp

ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಬಾಲಿವುಡ್ ಭಾಯ್ ಬರ್ತ್‌ಡೇ ದಿನ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳ ತನಕ ಬಹಳಷ್ಟು ಜನರು ವಿಶ್ ಮಾಡಿದ್ದಾರೆ. ಇವರಲ್ಲಿ ನಟನ ಮಾಜಿ ಪ್ರೇಯಸಿಯರಾದ ಕತ್ರೀನಾ ಕೈಫ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಸೇರಿದ್ದಾರೆ. ಹೌದು. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರೀನಾ ಕೈಫ್ ಸಲ್ಲು ಬರ್ತ್‌ಡೇಗೆ ಮಿಸ್ ಮಾಡದೆ ಗಿಫ್ಟ್ ಕೊಟ್ಟಿದ್ದಾರೆ. ಹಾಗೆಯೇ ಜಾಕ್ವೆಲಿನ್ ಸುಕೇಶ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಸಲ್ಲು ಬರ್ತ್‌ಡೇಗೆ ತಪ್ಪದೆ ವಿಶ್ ಮಾಡಿ ಉಡುಗೊರೆ ಕೂಡಾ ಕೊಟ್ಟಿದ್ದಾರೆ.

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಡಿಸೆಂಬರ್ 27ರಂದು 56ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ಹ್ಯಾಂಡ್ಸಂ ನಟ ತಮ್ಮ ವಿಶೇಷ ದಿನವನ್ನು ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಆಚರಿಸಿದ್ದಾರೆ. ಪಾನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಬರ್ತ್‌ಡೇ ಆಚರಿಸಿದ್ದು ನಟನ ಪಡೆದ ದುಬಾರಿ ಉಡುಗೊರೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಟೈಗರ್‌ ಹಾಗೂ ಹಾವು ಎರಡೂ ಚೆನ್ನಾಗಿವೆ ಎಂದ ಸಲ್ಮಾನ್‌ ಖಾನ್‌

ನಟಿ ಕತ್ರೀನಾ ಕೈಫ್ ಬಾಲಿವುಡ್‌ನಲ್ಲಿ ಬೆಳೆದಿರುವುದರ ಹಿಂದೆ ಸಲ್ಮಾನ್ ಭಾಯ್ ನೆರಳಿದೆ. ಹೌದು, ಸಲ್ಲು ನೆರಳಿನಲ್ಲಿಯೇ ಬಾಲಿವುಡ್ ನಲ್ಲಿ ಬೆಳೆದ ನಟಿ ಈಕೆ. ನಟಿ ಸಲ್ಲುಗೆ 2-3 ಲಕ್ಷ ಬೆಲೆ ಬಾಳುವ ಚಿನ್ನದ ಬ್ರೇಸ್ಲೆಟ್ ಉಡುಗೊರೆಯಾಗಿ ಕೊಟ್ಟಿದ್ದಾರೆ. ನಟಿ ಜಾಕ್ವೆಲಿನ್‌ಗೆ ಕೂಡಾ ಗಾಡ್‌ಫಾದರ್‌ನಂತೆ ಇದ್ದಿದ್ದು ಸಲ್ಲು ಮಾತ್ರ. ಶ್ರೀಲಂಕಾ ಸುಂದರಿಯನ್ನು ಬಾಲಿವುಡ್‌ಗೆ ಪರಿಚಯಿಸಿದ ಸಲ್ಮಾನ್ ಖಾನ್ ಹಾಗೂ ಜಾಕಿ ಅತ್ಮೀಯರು. ಅವರಿಬ್ಬರು ಡೇಟ್ ಮಾಡುತ್ತಿದ್ದಾರೆಂದೂ ಸುದ್ದಿ ಇತ್ತು. ನಟಿ ಲಾಕ್‌ಡೌನ್ ಸಂದರ್ಭ ನಟನೊಂದಿಗೆ ಇದ್ದಳು. ಅಲ್ಲಿ ಒಂದು ಆಲ್ಬಂ ಸಾಂಗ ಶೂಟಿಂಗ್ ಕೂಡಾ ನಡೆದಿತ್ತು. ನಟಿ ಆತ್ಮೀಯ ಗೆಳೆಯನಿಗೆ 10-12 ಲಕ್ಷ ಬೆಲೆ ಬಾಳುವ ಚೊಪಾರ್ಡ್ ಬ್ರಾಂಡ್ ವಾಚ್ ಗಿಫ್ಟ್ ಮಾಡಿದ್ದಾರೆ.

ಸಂಜಯ್ ದತ್ ಸಲ್ಮಾನ್ ಖಾನ್‌ಗೆ 7-8 ಲಕ್ಷ ಬೆಲೆ ಬಾಳುವ ವಜ್ರದ ಬ್ರೇಸ್ಲೆಟ್ ಉಡುಗೊರೆಯಾಗಿ ಕೊಟ್ಟಿದ್ದಾರೆ. ಸಲ್ಮಾನ್ ಅವರ ಸಹೋದರ ಸೋಹೈಲ್ ಸಲ್ಲುಗೆ 23-25 ಲಕ್ಷ ಬೆಲೆಯ ಬಿಎಂಡಬ್ಲ್ಯೂ ಎಸ್ 1000 ಆರ್‌ಆರ್ ಗಿಫ್ಟ್ ಮಾಡಿದ್ದಾರೆ. ಸಲ್ಮಾನ್ ಸಹೋದರ ಅರ್ಬಾಝ್ ನಟನಿಗೆ 2-3 ಕೋಟಿ ಬೆಲೆಯ ಆಡಿ ಗಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ನಟ ಅನಿಲ್ ಕಪೂರ್ 27-29 ಲಕ್ಷ ಬೆಲೆ ಬಾಳುವ ಜಾಕೆಟ್ ಗಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ನಟಿ ಶಿಲ್ಪಾ ಶೆಟ್ಟಿ ಸಲ್ಮಾನ್ ಖಾನ್‌ಗೆ ಚಿನ್ನ ಹಾಗೂ ವಜ್ರದ ಬ್ರೇಸ್ಲೆಟ್ ಗಿಫ್ಟ್ ಮಾಡಿದ್ದು ಇದರ ಬೆಲೆ 16-17 ಲಕ್ಷ ರೂಪಾಯಿ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಜುಹುವಿನಲ್ಲಿ 12-13 ಕೋಟಿಯ ಅಪಾರ್ಟ್‌ಮೆಂಟ್ ಗಿಫ್ಟ್ ಮಾಡಿದ್ದಾರೆ. ಭಾವ ಆಯುಷ್ ಶರ್ಮಾ 73,000-75,000 ಬೆಲೆಯ ಗೋಲ್ಡ್ ಚೈನ್ ಗಿಫ್ಟ್ ಮಾಡಿದ್ದಾರೆ. ನಟನ ಸಹೋದರಿ ಅರ್ಪಿತಾ ಖಾನ್ ಅಣ್ಣನಿಗೆ 15-17 ಲಕ್ಷ ಬೆಲೆಯ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟಿದ್ದಾರೆ.  

ಹಾವು ಕಡಿತ:

ನಟನಿಗೆ ಪಾನ್ವೆಲ್ ಫಾರ್ಮ್ ಹೌಸ್‌ನಲ್ಲಿ ಹಾವು ಕಚ್ಚಿತ್ತು. ಬಾಲಿವುಡ್ ಸ್ಟಾರ್ ನಟ, ಬಿಗ್‌ಬಾಸದ ಹೋಸ್ಟ್‌ಗೆ ಪಾನ್ವೆಲ್ ಫಾರ್ಮ್ ಹೌಸ್‌ನಲ್ಲಿ ಹಾವು ಕಚ್ಚಿತ್ತು. ಅದೃಷ್ಟವಶಾತ್ ನಟ ಅಪಾಯದಿಂದ ಪಾರಾಗಿದ್ದರು. ನಟನಿಗೆ ಕಚ್ಚಿರುವ ಹಾವು ವಿಷಕಾರಿ ಅಲ್ಲ ಎಂದು ಹೇಳಲಾಗಿದೆ. ಎಬಿಪಿ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. ನಟನನ್ನು ಚಿಕಿತ್ಸೆಗಾಗಿ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

Follow Us:
Download App:
  • android
  • ios