Asianet Suvarna News Asianet Suvarna News

ನೀಲಿ ಸೀರೆ, ಮಲ್ಲಿಗೆ ಹೂವಲ್ಲಿ ಸಿಂಪಲ್ ಬ್ಯೂಟಿ

  • ನೀಲಿ ಸೀರೆಯಲ್ಲಿ ಮಿಂಚಿದ ಪ್ರೇಮಂ ಚೆಲುವೆ
  • ಮಲ್ಲಿಗೆ ಹೂ ಮೂಡಿದ ಮಲರ್ ಫೋಟೋ ವೈರಲ್
Sai Pallavis Natural Beauty In Blue Saree And Jasmine Flowers Is A Style Statement In Simplicity dpl
Author
Bangalore, First Published Aug 4, 2021, 1:33 PM IST
  • Facebook
  • Twitter
  • Whatsapp

ಸೌತ್ ನಟಿ ಸಾಯಿ ಪಲ್ಲವಿ ಸೋಷಿಯಲ್ ಮಿಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಇಲ್ಲ. ಆದರೆ ಯಾವಾಗ ಪೋಸ್ಟ್ ಮಾಡಿದರೂ ಅವರ ಪೋಸ್ಟ್ ವೈರಲ್ ಆಗುತ್ತದೆ. ವಿಡಿಯೋ, ಫೋಟೋ ಅಥವಾ ಯಾವುದೇ ಪೋಸ್ಟ್ ಕೂಡಾ ವೈರಲ್ ಆಗುತ್ತವೆ. ಇದೀಗ ನಟಿ ನೀಲಿ ಬಣ್ಣದ ಸೀರೆಯಲ್ಲಿ ಚಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಮಲರ್ ಸಿಂಪಲ್ ಬ್ಯೂಟಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸಾಯಿ ಪಲ್ಲವಿ ಮಾರಿ 2 ಮತ್ತು ಪಾವ ಕದೈಗಳಂತಹ ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಅನೇಕ ಸಿನಿಪ್ರಿಯರ ಮನಸು ಗೆದ್ದಿದ್ದಾರೆ. ಈಗ ನಟಿ ತನ್ನ ನೈಸರ್ಗಿಕ ಸೌಂದರ್ಯ ಮತ್ತು ಸರಳವಾದ ಆದರೆ ಸಂವೇದನಾಶೀಲ ಫ್ಯಾಷನ್ ಪ್ರಜ್ಞೆಯಿಂದ ಅಭಿಮಾನಿಗಳನ್ನು ಮಮ್ಮೊಮ್ಮೆ ಫಿದಾ ಮಾಡಿದ್ದಾರೆ. ತನ್ನ ಅಜ್ಜನ 85 ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಇತ್ತೀಚಿನ ಫೋಟೋಗಳಲ್ಲಿ ಸಾಯಿ ಪಲ್ಲವಿ ತನ್ನದೇ ಸಿಂಪಲ್ ಲುಕ್‌ನಲ್ಲಿ ಆರಾಮವಾಗಿ ಕಂಡುಬಂದಿದ್ದಾರೆ.

Sai Pallavis Natural Beauty In Blue Saree And Jasmine Flowers Is A Style Statement In Simplicity dpl

ರೌಡಿ ಬೇಬಿ ನಂತ್ರ ರೆಕಾರ್ಡ್ ಸೆಟ್ ಮಾಡಿದ ಸಾರಂಗದರಿಯಾ..! ಸಾಯಿ ಪಲ್ಲವಿ ಡ್ಯಾನ್ಸ್‌ ಮತ್ತೊಮ್ಮೆ ಹಿಟ್

ಮುಗ್ಧ ನಗು ನಟಿಯ ಕೆನ್ನೆಯ ಮೇಲಿನ ಸಹಜವಾದ ಬ್ಲಶ್ ಗಿಂತ ಯಾವುದೂ ಬೆಸ್ಟ್ ಇಲ್ಲ ಎನ್ನುವಂತಿದೆ ಫೋಟೋ. ಫೋಟೋಗಳಲ್ಲಿ ನಟಿಯನ್ನು ಝರಿಯಂಚಿನ ಅಲ್ಟ್ರಾಮರೀನ್ ನೀಲಿ ಬಣ್ಣದ ಹತ್ತಿ ಸೀರೆಯಲ್ಲಿ ಕಾಣಬಹುದು. ಸಾಯಿ ಪಲ್ಲವಿ ತನ್ನ ಸಣ್ಣ ಚಿನ್ನದ ಕಿವಿಯೋಲೆಗಳು, ಕೆಲವು ಚಿನ್ನದ ಬಳೆಗಳು ಮತ್ತು ಮಲ್ಲಿಗೆ ಹೂವುಗಳನ್ನು ಮುಡಿದು ಸಿಂಪಲ್ ಆಗಿ ತನ್ನನ್ನು ಅಲಂಕರಿಸಿಕೊಂಡಿದ್ದಾರೆ. ಒಂದು ಸಣ್ಣ ಗಂಧದ ಬೊಟ್ಟು ಮತ್ತು ಹಣೆಯ ಮೇಲೆ ಒಂದು ಸಣ್ಣ ಬಿಂದಿ ಮಾತ್ರ ಇದೆ.

Sai Pallavis Natural Beauty In Blue Saree And Jasmine Flowers Is A Style Statement In Simplicity dpl

ನಟಿಯ ಸಾರಂಗ ದರಿಯಾ ಹಾಡಂತೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮತ್ತೊಂದು ಡ್ಯಾನ್ಸ್ ನಂಬರ್ ಮೂಲಕ ಅಭಿಮಾನಿಗಳ ಮನಸು ಗೆದ್ದಿದ್ದಾರೆ ಸಾಯಿ ಪಲ್ಲವಿ. ಪ್ರೇಮಂ ಸಿನಿಮಾ ಮೂಲಕ ಸೌತ್‌ನಲ್ಲಿ ಸಖತ್ ಹಿಟ್ ಆದ ನಟಿ ಟಾಲಿವುಡ್‌ನಲ್ಲಿ ತುಂಬಾ ಫೇಮಸ್. ಕಾಲಿವುಡ್‌ನಲ್ಲಿ ಸಿನಿಮಾ ಮಾಡಿ ಈಗ ಮತ್ತೆ ಟಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ ಸಾಯಿ ಪಲ್ಲವಿ. ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಸಾಯಿ ಪಲ್ಲವಿ ನಂತರ ನಟನೆಗೆ ಪಾದಾರ್ಪಣೆ ಮಾಡಿದರು. ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ನಟಿ ಸದ್ಯ ಸೌತ್‌ನಲ್ಲಿ ಬಹು ಬೇಡಿಕೆಯ ನಟಿಯರಲ್ಲೊಬ್ಬರು.

Follow Us:
Download App:
  • android
  • ios