ಕಾಲಿವುಡ್-ಟಾಲಿವುಡ್‌ ಮಿಲ್ಕ್‌ ಬ್ಯೂಟಿ ತಮನ್ನಾ 15 ವರ್ಷವಿದ್ದಾಗಲೇ  ಬಾಲಿವುಡ್‌ 'ಚಂದ್ ಸಾ ರೋಶನ್ ಚೆಹ್ರಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದಲೂ ತಮನ್ನಾ ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ ಅಭಿನಯದ 'ಕೆಜಿಎಫ್' ಚಿತ್ರದಲ್ಲಿ 'ಜೋಕೆ' ಎನ್ನುವ ರಿಮೀಕ್ಸ್  ಹಾಡಿಗೆ ಹೆಜ್ಜೆ  ಹಾಕುವ ಮೂಲಕ ಕನ್ನಡ ಚಿತ್ರರಂಗದಲ್ಲಿ  ತನ್ನ ಛಾಪು ಮೂಡಿಸಿದ್ದಾರೆ .  30 ವರ್ಷವಾದರೂ ಸಿಂಗಲ್ ಅಗಿರುವ ತಮನ್ನಾ ಹೆಸರು  ಇದುವರೆಗೂ ಯಾವ ಗಾಸಿಪ್‌ನಲ್ಲಿಯೂ ಕೇಳಿ ಬಂದಿರಲಿಲ್ಲ ಆದರೆ ಇದೇ ಮೊದಲ ಬಾರಿ ಕೇಳಿಬಂದಿದ್ದು ಮದುವೆ ವಿಚಾರದಲ್ಲಿ.

ಹಿರಿಯ ನಟ ಬಾಲಕೃಷ್ಣಗೆ ನಾಯಕಿ ಆಗೋಕೆ ತಮನ್ನಾ ಕೋಟಿ ಬೇಡಿಕೆ...?

ಲವ್‌ ಈಸ್‌ ಬ್ಲೈಂಡ್‌ or ಲವರ್ಸ್‌ ಆರ್ ಬ್ಲೈಂಡ್‌ ಎಂಬುದು ಇದುವರೆಗೂ ಯಾರಿಗೂ ಕ್ಲಾರಿಟಿ ಸಿಗದ ಸ್ಟೇಟ್ಮೆಂಟ್‌.  ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಎಂದು ಹಾಡುಗಳಲ್ಲಿ ಸಿನಿಮಾಗಳಲ್ಲಿ ನೋಡಿದ್ದೇವೆ , ಕೇಳಿದ್ದೇವೆ. ಆದರೆ ಇದು ನಿಜವೆಂದು ಸಾಬೀತು ಮಾಡುತ್ತಿದ್ದಾರಾ ತಮನ್ನಾ?

ಪಾಕ್‌ ದೇಶದ ಸೋಸೆ:

'ಬಾಹುಬಲಿ-2' ಚಿತ್ರದ ನಂತರ ತಮನ್ನಾ ಮದುವೆ ವಿಚಾರ ತುಂಬಾನೇ ಸುದ್ದಿಯಲ್ಲಿದೆ ಇದಕ್ಕೆ ಕಾರಣ ಪಾಕ್‌ ಕ್ರಿಕೆಟಿಗ ಅಬ್ದುಲ್ ರಜಾಕ್‌ ಜೊತೆ ಕಾಣಿಸಿಕೊಂಡ ಫೋಟೋ. ವೈರಲ್ ಆಗುತ್ತಿರುವ ಫೋಟೋದಲ್ಲಿ ತಮನ್ನಾ ಹಾಗೂ ಅಬ್ದುಲ್ ಆಭರಣದ ಅಂಗಡಿಯಲ್ಲಿದ್ದಾರೆ. ಕೆಲವರು ಇದು ಜಾಹಿರಾತು ಪೋಟೋ ಎಂದರೆ ಇನ್ನು ಕೆಲವರು ಅವರು ಸೈಲೆಂಟ್‌ ಮದುವೆ ತಯಾರಿಯಲ್ಲಿದ್ದಾರೆ  ಎನ್ನುತ್ತಿದ್ದಾರೆ.

ಪಾಕ್‌ ಸೊಸೆ ಸಾನಿಯಾ: 

ವರ್ಷಗಳ ಹಿಂದೆ ಟೆನ್ನಿಸ್‌ ಸೆನ್ಸೇಷನ್‌  ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟರ್ ಶೋಯೆಬ್‌ ಮಲಿಕ್‌ ಒಬ್ಬರನ್ನೊಬ್ಬರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು . ಇವರ ಮದುವೆ ಸಮಯದಲ್ಲೂ ಇಂತದೇ ಗಾಸಿಪ್‌ಗಳು ಹರಿದಾಡುತ್ತಿದ್ದು ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಜೋಡಿಗೆ ಈಗ ಮುದ್ದಾದ ಮಗನಿದ್ದಾನೆ.

ತಮನ್ನಾ ಕೈ ಸೇರಿತು ರಾಮ್ ಚರಣ್ ಪತ್ನಿ ವಜ್ರದುಂಗುರ?

ಕ್ರಿಕೆಟಿಗ ಅಬ್ದುಲ್‌ ರಜಾಕ್‌ಗೆ ಮದುವೆಯಾಗಿದೆ: ಕ್ರಿಕೆಟರ್‌ ಅಬ್ದುಲ್‌ ಹಾಗೂ ತಮನ್ನಾ ವಿಚಾರ ಕೇಳಿ ಪಾಕ್‌ ಪ್ರೇಕ್ಷಕರಿಗೆ ಶಾಕ್‌ ಆಗಿದೆ.ಏಕೆಂದರೆ ಅಬ್ದುಗೆ ಈಗಾಗಲೇ  ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.  

ಪೋಟೋ ಹಿಂದಿನ ಫ್ಯಾಕ್ಟ್: ಈ ಫೋಟೋ ವೈರಲ್ ಆಗುತ್ತಿದಂತೆ ನಟಿ ತಮನ್ನಾ ಪ್ರತಿಕ್ರಿಯಿಸಿದ್ದಾರೆ. 'ಈ ಫೋಟೋ ತುಂಬಾನೇ ಹಳೆಯದು. ನಾನು ಅಬ್ದುಲ್  ಆಭರಣದ ಅಂಗಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಸೆರೆ ಹಿಡಿಯಲಾಗಿತ್ತು. ಏನೂ ಸುದ್ದಿ ಇಲ್ಲದ ಕಾರಣ ಈಗ ಇದನ್ನು ವೈರಲ್ ಮಾಡುತ್ತಿದ್ದಾರೆ' ಎಂದು ಸ್ಪಷ್ಟನೆ ನೀಡಿದ್ದಾರೆ.