Asianet Suvarna News Asianet Suvarna News

Trisha Krishnan @40: ಎವರ್​ಗ್ರೀನ್​ ಬ್ಯೂಟಿ ಸೈಕಾಲಜಿ ಓದಿ ನಟಿಯಾದದ್ದೇ ಕುತೂಹಲ...

ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ತ್ರಿಶಾ ಕೃಷ್ಣನ್​ ಅವರ ಹುಟ್ಟುಹಬ್ಬವಿಂದು. ಈ ಸಮಯದಲ್ಲಿ ಅವರ ಜೀವನದ ಮೇಲೊಂದು ನೋಟ...
 

Reasons why fans call  Trisha Krishnan an evergreen South queen Evergeeen Beauty
Author
First Published May 4, 2023, 3:30 PM IST | Last Updated May 4, 2023, 3:30 PM IST

ತಮಿಳು, ತೆಲಗು ಸೇರಿದಂತೆ ಕನ್ನಡದಲ್ಲಿಯೂ ಮಿಂಚಿರುವ ನಟಿ ತ್ರಿಶಾ ಕೃಷ್ಣನ್ ( Trisha Krishnan).  ಪ್ರಮುಖವಾಗಿ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಪವರ್ ಚಿತ್ರದಲ್ಲಿ ನಟಿಸಿದ್ದಾರೆ. 1983 ಮೇ 4 ರಂದು ಚೆನ್ನೈನಲ್ಲಿ ಜನಿಸಿದ ತ್ರಿಶಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ತ್ರಿಶಾ,  ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ತ್ರಿಷಾ 1999 ರಲ್ಲಿ ಮಿಸ್ ಮದ್ರಾಸ್ ಪ್ರಶಸ್ತಿಗೆ ಭಾಜನರಾದರು.  ಅವರು 1999 ರಲ್ಲಿ 'ಜೋಡಿ' ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2003 ರಲ್ಲಿ ವಿಕ್ರಮ್ ಅವರ 'ಸಾಮಿ' ಸಿನಿಮಾ ತ್ರಿಶಾ ಕೆರಿಯರ್​ನಲ್ಲಿ ಅವರನ್ನು ಸ್ಟಾರ್ ನಟಿಯಾಗಿ ಬದಲಾಯಿಸಿತು. ಅವರು 'ಗಿಲ್ಲಿ' ಮತ್ತು 'ಆರು' ನಂತಹ ಕೆಲವು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ತಮಿಳಿನಲ್ಲಿ ಬಂದ ಗಿಲ್ಲಿ , ಸಾಮಿಯಂತೆಯೇ ತೆಲುಗುವಿನಲ್ಲಿ ಬಂದ `ವರ್ಷಂ'  (Varsham) ತ್ರಿಶಾ ಕಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.  

ಇಂತಿಪ್ಪ ಸೌಂದರ್ಯದ ಘನಿ ಅಂತಿರಾ ನಟಿಗೆ 40 ವರ್ಷ ಎಂದರೆ ನಂಬುವುದು ತುಸು ಕಷ್ಟವೇ. ಇದೇ ಕಾರಣಕ್ಕೆ ಈಕೆಯನ್ನು ದಕ್ಷಿಣದ ಎವರ್​ಗ್ರೀನ್​ ಬ್ಯೂಟಿ (Evergeeen Beauty) ಎನ್ನುತ್ತಾರೆ ಫ್ಯಾನ್ಸ್​. ಇವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಎರಡನೇ ಭಾಗ ಕಳೆದ ತಿಂಗಳು ಏಪ್ರಿಲ್ 28 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಐಶ್ವರ್ಯ ರೈ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಮೇಲೆ ತ್ರಿಶಾ ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆಯೇ, ಸದ್ಯದಲ್ಲೇ ತ್ರಿಶಾ ರಾಷ್ಟ್ರೀಯ ಪಕ್ಷ (political) ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವೆಲ್ಲವೂ ವದಂತಿ ಎಂದು ತ್ರಿಶಾ ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Bahubali ನಟ ರಾಣಾ ದುಗ್ಗುಬಾಟಿ ಜೊತೆ ನಟಿ ತ್ರಿಶಾ ಬೆಡ್​ರೂಂ ಫೋಟೋ ಲೀಕ್​

ಅಂದಹಾಗೆ ತ್ರಿಶಾ  ಜೀವನದ ಕೆಲವೊಂದು ಘಟನೆಗಳು ಕುತೂಹಲಕಾರಿಯಾಗಿವೆ. ಇವರು ಓದಿದ್ದು ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ (Business Administration). ಎಥಿರಾಜ್ ಮಹಿಳಾ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ರಿಮಿನಲ್ ಸೈಕಾಲಜಿ ಕೂಡ ಅಧ್ಯಯನ ಮಾಡಿದ್ದಾರೆ. ಒಂದೋ ಬಿಜಿನೆಸ್​ ಕ್ಷೇತ್ರದಲ್ಲೋ ಅಥವಾ ಸೈಕಾಲಜಿ ಕ್ಷೇತ್ರದಲ್ಲೋ ಭವಿಷ್ಯ ಕಂಡುಕೊಳ್ಳಬೇಕಿದ್ದ ನಟಿ ಚಿತ್ರರಂಗಕ್ಕೆ ಬಂದದ್ದೇ ಕುತೂಹಲಕರವಾದದ್ದು.  ತ್ರಿಶಾ ಕೃಷ್ಣನ್ ತೆಲುಗು ಚಿತ್ರರಂಗಕ್ಕೆ 'ನೀಮನಸು ನಕ್ಕಿಯಾ' ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಆ ನಂತರ ಪ್ರಭಾಸ್ ಅಭಿನಯದ ‘ವರ್ಷಂ’ ಸಿನಿಮಾ ತೆರೆಗೆ ಬಂದು ತೆಲುಗು ಪ್ರೇಕ್ಷಕರ ಮನಗೆದ್ದಿತ್ತು. ಈ ಸಿನಿಮಾದ ಮೂಲಕ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ವರ್ಷಂ ನಂತರ ತ್ರಿಶಾ ಸಿನಿಮಾಗಳಿಗಾಗಿ ಕಾಯಲಿಲ್ಲ. ಕೆಲ ವರ್ಷಗಳಿಂದ ತೆಲುಗಿನಲ್ಲಿ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದ ತ್ರಿಶಾ ಅವರ 'ವರ್ಷಂ', 'ನುವ್ವಸ್ಥಾನಂತೆ ನೇನೊದಂತನಾ' ಮತ್ತು 'ಅತ್ತಾಡು' ಚಿತ್ರಗಳು ಸೂಪರ್ ಹಿಟ್ ಆದ ನಂತರ ತೆಲುಗಿನಲ್ಲಿ ಸ್ಟಾರ್ ಆದರು. ತೆಲುಗಿನ ‘ನುವ್ವೋಸ್ತಾನಂತೇ ನೆನೊಡ್ಡಂತಾನಾ’ ಚಿತ್ರಕ್ಕಾಗಿ ತ್ರಿಶಾ ಅತ್ಯುತ್ತಮ ನಟಿಯಾಗಿ ನಂದಿ ಪ್ರಶಸ್ತಿಯನ್ನೂ ಪಡೆದರು. ನಾಯಕಿಯಾಗುವ ಮುನ್ನ ಪ್ರಶಾಂತ್ ಮತ್ತು ಸಿಮ್ರಾನ್ ಅಭಿನಯದ 'ಜೋಡಿ' ಚಿತ್ರದಲ್ಲಿ ನಟಿಸಿದ್ದರು. ಸದ್ಯ ತಮಿಳು ಚಿತ್ರಗಳ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ.
 
ಇವರ ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ. 2015ರಲ್ಲಿ  ಚೆನ್ನೈ ಮೂಲದ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡದರೂ ಅದೇ ವರ್ಷವೇ  ನಿಶ್ಚಿತಾರ್ಥವನ್ನು ಕೊನೆಗೊಳಿಸಿ ಭಾರಿ ಸುದ್ದಿಯಾಗಿದ್ದರು. ಅವರ ಮುರಿದ ನಿಶ್ಚಿತಾರ್ಥದ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದ್ದವು.  ನಟಿಯನ್ನು ಮದುವೆಯಾಗುವ ಬಗ್ಗೆ ವರುಣ್ ಕುಟುಂಬದವರಿಗೆ ಇಷ್ಟವಿರಲಿಲ್ಲ ಎನ್ನಲಾಗುತ್ತಿತ್ತು, ಮದುವೆಯಾದ ಬಳಿಕ ನಟನೆಯನ್ನು ಬಿಡುವಂತೆ  ವರುಣ್ ಅವರು ತ್ರಿಷಾರಿಗೆ ಕಂಡೀಷನ್​ ಹಾಕಿದ್ದರು ಎನ್ನಲಾಗಿದೆ. ಆದರೆ ಇದೇ ಸಮಯದಲ್ಲಿ ಇನ್ನೊಂದು ಕಾರಣವನ್ನೂ ನೀಡಲಾಗುತ್ತಿದೆ. ಅದೇನೆಂದರೆ ಅವರ ನಿಶ್ಚಿತಾರ್ಥದ (Engagement) ಸಮಯದಲ್ಲಿ ನಟ ಧನುಷ್ (Dhanush) ಅವರು ಉಪಸ್ಥಿತರಿದ್ದುದು ವರುಣ್​ ಅವರ ಆಕ್ರೋಶಕ್ಕೆ  ಕಾರಣವಾಗಿತ್ತು ಎನ್ನಲಾಗಿದೆ. ಏಕೆಂದರೆ, ಧನುಷ್​ ಮತ್ತು ತ್ರಿಷಾ ನಡುವಿನ ಸಂಬಂಧದ ಕುರಿತು ಬಹಳ ಗುಲ್ಲೆದಿದ್ದರಿಂದ ನಿಶ್ಚಿತಾರ್ಥದ ಸಮಯದಲ್ಲಿ ವರುಣ್ ಸಹನೆ ಕಳೆದುಕೊಂಡು ಜಗಳವಾಡಿದ್ದರು ಎಂದೂ ವರದಿಯಾಗಿದೆ.

ಸಮಂತಾರಿಂದ ದೂರವಾದ್ಮೇಲೆ KISS ಕೊಟ್ಟವರೆಷ್ಟು? ನಾಗಚೈತನ್ಯ ಬಾಯಿಬಿಟ್ಟ ರಹಸ್ಯ
 

Latest Videos
Follow Us:
Download App:
  • android
  • ios