Ranveer singh startup superyou : ಬಾಲಿವುಡ್ ನಟ ರಣವೀರ್ ಸಿಂಗ್ ಸಿನಿಮಾ ಜೊತೆ ಬ್ಯುಸಿನೆಸ್ ನಲ್ಲೂ ಯಶಸ್ಸು ಕಾಣ್ತಿದ್ದಾರೆ. ಒಂದೇ ವರ್ಷದಲ್ಲಿ ಅವರ ಪ್ರಾಡೆಕ್ಟ್ ಜನಮೆಚ್ಚುಗೆ ಗಳಿಸಿದೆ. ಕೋಟಿ ಕೋಟಿ ಲಾಭದಲ್ಲಿ ಉದ್ಯಮ ಸಾಗಿದೆ.

ಚಿತ್ರವಿಚಿತ್ರ ಡ್ರೆಸ್ ಹಾಕ್ತಾ, ಸದಾ ತಮಾಷೆ ಮಾಡ್ತಾ, ಜೀವನವನ್ನು ಚಿಲ್ ಆಗಿ ತೆಗೆದುಕೊಂಡ ಕಲಾವಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಪತಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh). ಬಾಲಿವುಡ್ ಹಿಟ್ ಆಕ್ಟರ್ ಪಟ್ಟಿಯಲ್ಲಿ ಸೇರಿರುವ ರಣವೀರ್ ಸಿಂಗ್, ಬರೀ ಸಿನಿಮಾದಲ್ಲಿ ಮಾತ್ರವಲ್ಲ ಬ್ಯುಸಿನೆಸ್ (Business) ನಲ್ಲೂ ಸಕ್ಸಸ್ ಕಾಣ್ತಿದ್ದಾರೆ. ಬಾಲಿವುಡ್ ನ ಬಹುತೇಕ ಕಲಾವಿದರು ಒಂದಲ್ಲ ಒಂದು ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಶಾರುಕ್ ಖಾನ್, ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ ಹೀಗೆ ಅನೇಕ ಕಲಾವಿದರು ಬ್ಯುಸಿನೆಸ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಈ ಪಟ್ಟಿಗೆ ರಣವೀರ್ ಸಿಂಗ್ ಸೇರ್ಪಡೆಯಾಗಿದೆ. ರಣವೀರ್ ಸಿಂಗ್ ಒಂದು ವರ್ಷದ ಹಿಂದೆ ಶುರು ಮಾಡಿದ್ದ ಬ್ಯುಸಿನೆಸ್ ಲಾಭದಲ್ಲಿ ಓಡ್ತಿದೆ. ಸ್ನ್ಯಾಕಿಂಗ್ ಉದ್ಯಮದಲ್ಲಿ ಹೊಸ ಅಲೆ ಸೃಷ್ಟಿಸಿದೆ. ನಾಲ್ಕೇ ನಾಲ್ಕು ಉತ್ಪನ್ನ ಇಟ್ಕೊಂಡು, 100 ಕೋಟಿಗಿಂತ ಹೆಚ್ಚು ಲಾಭ ಮಾಡಿರುವ ನಟನ ಸಾಧನೆ ನೋಡಿ ಬಾಲಿವುಡ್ ಬೆರಗಾಗಿದೆ.

ಬ್ಯುಸಿನೆಸ್ ನಲ್ಲಿ ಸಕ್ಸಸ್ ಕಂಡ ರಣವೀರ್ ಸಿಂಗ್ :

ಉದ್ಯಮಿ ನಿಕುಂಜ್ ಬಿಯಾನಿ ಜೊತೆ ಸೇರಿ ರಣವೀರ್ ಸಿಂಗ್ ವೇಫರ್ ಬ್ರ್ಯಾಂಡ್ ಸೂಪರ್ಯೂ ಶುರು ಮಾಡಿದ್ದರು. 2024ರಲ್ಲಿ ಈ ಬ್ರ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ನಾಲ್ಕು ಉತ್ಪನ್ನಗಳು ಕೇವಲ ಒಂದು ವರ್ಷದಲ್ಲಿ 100 ಕೋಟಿ ಆದಾಯದ ಗಡಿ ದಾಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಹೊಸ ಮಲ್ಟಿಗ್ರೇನ್ ಪ್ರೋಟೀನ್ ಚಿಪ್ಗಳನ್ನು ಬಿಡುಗಡೆ ಮಾಡಿರುವ ಬ್ರ್ಯಾಂಡ್, ಐದು ವರ್ಷಗಳಲ್ಲಿ 500 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ. ವಿಶೇಷವೆಂದ್ರೆ ಕಂಪನಿ ಶುರು ಆದ 90 ದಿನಗಳಲ್ಲಿ 1.6 ಮಿಲಿಯನ್ ಯೂನಿಟ್ ಮಾರಾಟವಾಗಿತ್ತು. ಇದು ಕಂಪನಿಯ ಸ್ಥಾನವನ್ನು ಮಾರುಕಟ್ಟೆಯಲ್ಲಿ ಬಲಗೊಳಿಸಿತ್ತು. ಕ್ರಿಯಾತ್ಮಕ ತಿಂಡಿಗಳ ಬೇಡಿಕೆಯಿಂದಾಗಿ ಸೂಪರ್ಯು ತಿಂಗಳಿಂದ ತಿಂಗಳಿಗೆ ಶೇಕಡಾ 25-30 ರಷ್ಟು ಬೆಳವಣಿಗೆಯನ್ನು ಕಾಣ್ತಿದೆ.

ಮಾರುಕಟ್ಟೆಗೆ Groww ಗ್ರ್ಯಾಂಡ್‌ ಎಂಟ್ರಿ, ನಾಲ್ಕೇ ದಿನದಲ್ಲಿ ಬಿಲಿಯನೇರ್‌ ಕ್ಲಬ್‌ ಸೇರಿದ ರೈತನ ಮಗ!

ಡಿಸೆಂಬರ್ 2024 ರಲ್ಲಿ, ಸೂಪರ್ಯು ಜೆರೋಧಾದ ರೇನ್ಮ್ಯಾಟರ್ ಕ್ಯಾಪಿಟಲ್ನಿಂದ ಹೂಡಿಕೆ ಪಡೆದಿದೆ. ಇದು ತನ್ನ ವ್ಯಾಪ್ತಿ ವಿಸ್ತರಿಸಲು ನೆರವಾಗಿದೆ. ಆದ್ರೆ ಎಷ್ಟು ಹೂಡಿಕೆ ನಡೆದಿದೆ ಎಂಬುದು ಬಹಿರಂಗವಾಗಿಲ್ಲ. ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತಿಂಡಿಗಳನ್ನು ನೀಡುವುದು ನಮ್ಮ ಗುರಿ ಆಗಿದೆ. ಜನರು ಪ್ರೋಟೀನ್ ಭರಿತ ತಿಂಡಿಗಳನ್ನು ಎಂಜಾಯ್ ಮಾಡ್ಲಿ, ಯಾವುದೇ ಭಯವಿಲ್ಲದೆ ಸೇವನೆ ಮಾಡ್ಲಿ ಎಂಬುದು ನಮ್ಮ ಉದ್ದೇಶ. ಪ್ರೋಟೀನ್ ಭರಿತ ತಿಂಡಿಗಳನ್ನು ಮುಖ್ಯ ವಾಹಿನಿಗೆ ತರುವತ್ತ ಇದು ಒಂದು ಹೆಜ್ಜೆ ಎಂದು ರಣವೀರ್ ಸಿಂಗ್ ಹೇಳಿದ್ದಾರೆ.

ಬೀದಿ ಬದಿ ಮೋಮೋಸ್ ಮಾರುವ ಈ ಯುವಕನ ದಿನದ ಗಳಿಕೆ 100000 ಲಕ್ಷ: ನೆಟ್ಟಿಗರ ರಿಯಾಕ್ಷನ್ ಏನು?

ಸಿನಿಮಾ ಶೂಟಿಂಗ್ ನಲ್ಲಿ ರಣವೀರ್ ಸಿಂಗ್ ಬ್ಯುಸಿ :

ಸದ್ಯ ರಣವೀರ್ ಸಿಂಗ್ ಧುರಂಧರ್ ಸಿನಿಮಾ ಪ್ರಚಾರದ ತಯಾರಿ ನಡೆಸ್ತಿದ್ದಾರೆ. ಶೂಟಿಂಗ್ ಈಗಾಗಲೇ ಮುಗಿದಿದ್ದು, ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ. ಚಿತ್ರಕ್ಕೆ ಈಗಾಗಲೇ ಪಾಸಿಟಿವ್ ರಿಯಾಕ್ಷನ್ ಸಿಕ್ಕಿದೆ. ಆದಿತ್ಯ ಧಾರ್ ಅವರ ಆಕ್ಷನ್-ಎಂಟರ್ಟೈನರ್ ಚಿತ್ರ ಧುರಂಧರ್. ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್, ಮಾಧವನ್ ಮತ್ತು ಅಕ್ಷಯ್ ಖನ್ನಾ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 5, 2025 ರಂದು ಬಿಡುಗಡೆಯಾಗಲಿದೆ. 2018ರಲ್ಲಿ ದೀಪಿಕಾ ಪಡುಕೋಣೆ ಕೈ ಹಿಡಿದಿರುವ ರಣವೀರ್, ಮುದ್ದಾದ ಹೆಣ್ಣು ಮಗು ದುವಾಗೆ ತಂದೆಯಾಗಿದ್ದಾರೆ.