ನವದೆಹಲಿ [ಫೆ.08] : ಕಳೆದ ಎರಡು ವರ್ಷಗಳಿಂದ ಬಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌ ಪ್ರೇಮ ಕಡೆಗೂ ವಿವಾಹ ಹಂತಕ್ಕೆ ಬಂದಿದೆ. 

ಮೂಲಗಳ ಪ್ರಕಾರ ಬಾಲಿವುಡ್‌ನ ಈ ಜೋಡಿ ಡಿಸೆಂಬರ್‌ನಲ್ಲಿ ಮದುವೆಯಾಗಲು ನಿಶ್ಚಯಿಸಿವೆ ಎನ್ನಲಾಗಿದೆ. 

ಕನ್ನಡದಲ್ಲಿಯೂ ಬರಲಿದೆ ಅಲಿಯಾ -ರಣಬೀರ್ 'ಬ್ರಹ್ಮಾಸ್ತ್ರ'?...

ಡಿಸೆಂಬರ್‌ 4ರಂದು ‘ಬ್ರಹ್ಮಾಸ್ತ್ರ’ ಚಿತ್ರ ಬಿಡುಗಡೆಯಾದ ಬಳಿಕ ವಿವಾಹ ಸಮಾರಂಭಕ್ಕೆ ರಣಬೀರ್‌ ಮತ್ತು ಅಲಿಯಾ ಈಗಾಗಲೇ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. 

ಮಗು ಹುಟ್ಟೋ ಮುಂಚೆ ಕುಲಾವಿ ಹೊಲೀತಿದಾರೆ ರಣಬೀರ್-ಆಲಿಯಾ...

ಬಾಲಿವುಡ್‌ ಮಂದಿಗೆ ಮದುವೆ ಸಂದರ್ಭದಲ್ಲಿ ಬೇರಿನ್ನಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳದಂತೆ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.