ಮುಂಬೈ (ಏ. 03): ಕೊರೋನಾ ಲಾಕ್‌ಡೌನ್‌ನ ಜನರ ಬೇಸರ ತಣಿಸಲು ಪುನಃ ಪ್ರಸಾರ ಮಾಡಲಾಗುತ್ತಿರುವ 3 ದಶಕಗಳ ಹಿಂದಿನ ಪೌರಾಣಿಕ ರಾಮಾಯಣ ಧಾರಾವಾಹಿಯು ಮತ್ತೊಮ್ಮೆ ಸೂಪರ್‌ಹಿಟ್‌ ಆಗಿದೆ.

ಫ್ಯಾಮಿಲಿ ಜೊತೆ ಸೀರಿಯಲ್ ನೋಡಿದ 'ರಾಮಾಯಣ'ದ ರಾಮ..!

ಕಳೆದ ಶನಿವಾರ ಮತ್ತು ಭಾನುವಾರ ಪ್ರಸಾರವಾದ ಒಟ್ಟು 4 ಎಪಿಸೋಡ್‌ಗಳನ್ನು ಭರ್ಜರಿ 17 ಕೋಟಿ ಜನ ವೀಕ್ಷಿಸಿದ್ದಾರೆ. ರಾಮಾಯಣವನ್ನು ಪುನಃ ಪ್ರಸಾರ ಮಾಡಿದ ಪ್ರಸಾರ ಭಾರತಿಯ ಕ್ರಮವು ಅತ್ಯುತ್ತಮವಾಗಿದ್ದು, ಈ ಧಾರಾವಾಹಿ ಅತಿಹೆಚ್ಚು ಜನ ವೀಕ್ಷಕರನ್ನು ತನ್ನತ್ತ ಸೆಳೆದಿದೆ ಎಂದು ಬಾರ್ಕ್ ಕಾರ್ಯಾಕಾರಿ ಮುಖ್ಯಸ್ಥ ಸುನಿಲ್‌ ಲುಲ್ಲಾ ಹೇಳಿದ್ದಾರೆ. ಶನಿವಾರ ಬೆಳಗ್ಗೆ 3.4 ಕೋಟಿ, ಅದೇ ದಿನ ಸಂಜೆ 4.5 ಕೋಟಿ ಜನರು ರಾಮಾಯಣ ಧಾರಾವಾಹಿಯನ್ನು ವೀಕ್ಷಿಸಿದ್ದಾರೆ. ಭಾನುವಾರ ಈ ಪ್ರಮಾಣ ಕ್ರಮವಾಗಿ 4 ಕೋಟಿ ಮತ್ತು 5.1 ಕೋಟಿಗೆ ಏರಿತ್ತು ಎಂದು ಅವರು ತಿಳಿಸಿದ್ದಾರೆ.

ರಾಮಾಯಣ ಈಗ ವಿಶ್ವದಲ್ಲೇ ನಂ.1 ಶೋ

 80ರ ದಶಕದಲ್ಲಿ ಜನರನ್ನು ಮೋಡಿ ಮಾಡಿದ್ದ ರಾಮಾಯಣ ಧಾರಾವಾಹಿ, ಇದೀಗ ಮರು ಪ್ರಸಾರದ ವೇಳೆಯೂ ಹೊಸ ಇತಿಹಾಸ ಸೃಷ್ಟಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಡಿಡಿ ವಾಹಿನಿಯಲ್ಲಿ ರಾಮಾಯಣ ಧಾರಾವಾಹಿ ಮರು ಪ್ರಸಾರ ಆಗುತ್ತಿದ್ದು, ಏ.16ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ಕಂತನ್ನು 7.7 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಭಾರತವಷ್ಟೇ ಅಲ್ಲ, ವಿಶ್ವದಲ್ಲೇ ಅತಿ ಹೆಚ್ಚು ಜನರು ವೀಕ್ಷಿಸಿದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.