ಎಲ್ಲರೂ ಜೊತೆಯಲ್ಲಿ ಕೂತು, ಒಂದಷ್ಟು ಸ್ನ್ಯಾಕ್ಸ್ ಹಿಡಿದುಕೊಂಡು ಚೆನ್ನಾಗಿರೋ ಸಿನಿಮಾ ನೋಡಬೇಕು ಎಂದೆಲ್ಲಾ ಪ್ಲಾನ್ ಮಾಡುತ್ತಿರುತ್ತೀರಿ. ಲಾಕ್‌ಡೌನ್ ಇದೆ. ಎಲ್ಲೂ ಹೋಗೋಕಾಗಲ್ಲ. ಮನೆಯಲ್ಲಿದ್ದು ಒಂದೊಳ್ಳೆ ಸಿನಿಮಾ ನೋಡೋಣ ಎಂದುಕೊಳ್ಳುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ಡಿ. ಸತ್ಯಪ್ರಕಾಶ್ ನಿರ್ದೇಶನದ 'ರಾಮ ರಾಮ ರೇ' ಸಿನಿಮಾ ನೋಡುವ ಒಳ್ಳೆಯದೊಂದು ಅವಕಾಶ ನಿಮಗಿದೆ. ಸಿನಿಮಾ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.

ಈ ಸಿನಿಮಾ ಸತ್ಯಪಿಕ್ಷರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿತ್ತು. ಇದೀಗ ಈ ಸಿನಿಮಾ ಬಹಳಷ್ಟು ವೀಕ್ಷಕರನ್ನು ಆಕರ್ಷಿಸುತ್ತಿದೆ.  ಕನ್ನಡ ಕಲರ್‌ ಸಿನಿಮಾ ಬ್ಯಾನರ್‌ನಡಿಯಲ್ಲಿ 2016 ಅಕ್ಟೋಬರ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.

ಫ್ಯಾಮಿಲಿ ಜೊತೆ ಸೀರಿಯಲ್ ನೋಡಿದ 'ರಾಮಾಯಣ'ದ ರಾಮ..!

ಇದರಲ್ಲಿ ಮರಣದಂಡನೆಯಲ್ಲಿ ಅಪರಾಧಿಯೊಬ್ಬನ ಕಥೆ, ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗೆ ಅವನ ಮುಖಾಮುಖಿ ಮತ್ತು ಅಪರಾಧಿ ಮತ್ತೆ ಜೈಲಿಗೆ ಬರುವ ಕಥೆ ಇದೆ.
ಸಿನಿಮಾದಲ್ಲಿ ಕೆ ಜಯರಾಮ್, ನಟರಾಜ್, ಧರ್ಮನ್ನ ಕಡೂರ್ ಸೇರಿ ಪ್ರಮುಖರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 2018ರಲ್ಲಿ ಈ ಸಿನಿಮಾ ಅಟಗಾಧರ ಶಿವ ಎಂದು ತೆಲುಗು ಭಾಷೆಯಲ್ಲೂ ರಿಮೇಕ್ ಆಗಿತ್ತು. ಇದನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದರು. ನೋಬಿನ್ ಪೌಲ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.