ರಾಜ್ ಕುಂದ್ರಾ ಟೆರರಿಸ್ಟಾ ? ವಕೀಲರ ಹೊಸ ವಾದ
- ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು ಇಲ್ಲ
- ಉದ್ಯಮಿ ರಾಜ್ ಭಯೋತ್ಪಾದಕನಾ ? ವಕೀಲರ ಹೊಸ ವಾದ
ಮುಂಬೈ ಪೊಲೀಸರ ಅಪರಾಧ ಶಾಖೆ ತನಿಖೆ ನಡೆಸುತ್ತಿರುವ ಅಶ್ಲೀಲ ದಂಧೆಗೆ ಸಂಬಂಧಿಸಿದಂತೆ ಬಂಧಿತ ಉದ್ಯಮಿ ರಾಜ್ ಕುಂದ್ರಾ ಅವರ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ತಿರಸ್ಕರಿಸಿದೆ.
ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿ ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲು ಈ ಹಿಂದೆ ಆದೇಶಿಲಾಗಿತ್ತು. ಅವರ ಕಸ್ಟಡಿ ಮುಗಿಯುತ್ತಿದ್ದಂತೆ ಅವರನ್ನು ಮತ್ತೊಮ್ಮೆ 14 ದಿನಗಳ ಕಸ್ಟಡಿಗೆ ಕಳುಹಿಸಲಾಗಿದ್ದು, ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ಮಾಡಲಾಗಿದೆ.
ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಜಾಮೀನು ಮನವಿಯನ್ನು ವಿರೋಧಿಸಿದ್ದಾರೆ. ಅವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರು ಸಾಕ್ಷಿಯನ್ನು ಬೆದರಿಸಬಹುದು, ಅದು ತನಿಖೆಯ ದಾರಿ ತಪ್ಪಿಸುತ್ತದೆ. ಇದಕ್ಕೆ ಕುಂದ್ರಾ ಅವರ ವಕೀಲರು ರಾಜ್ ಕುಂದ್ರಾ ಭಯೋತ್ಪಾದಕರೇ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಏಪ್ರಿಲ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಅನೇಕ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಕುಂದ್ರಾ ಅವರ ವಕೀಲರು ಹೇಳಿದ್ದಾರೆ. ಆದರೆ ಪ್ರಾಸಿಕ್ಯೂಷನ್ ಆಕ್ಷೇಪ ವ್ಯಕ್ತಪಡಿಸಿತು. ಕುಂದ್ರಾ ಈ ಪ್ರಕರಣದ ಪ್ರಮುಖ ವ್ಯಕ್ತಿ ಎಂದು ಹೇಳಿದ್ದಾರೆ. ಕುಂದ್ರಾ ಮತ್ತು ಅವರ ಬ್ಯುಸಿನೆಸ್ ಪಾರ್ಟ್‌ನರ್ ರಿಯಾನ್ ಥೋರ್ಪ್ ಇಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ರಾಜ್ ಕುಂದ್ರಾ ವಿರುದ್ಧದ ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಹೊಸ ಎಫ್ಐಆರ್ ದಾಖಲಿಸಲಾಗಿದ್ದು, ಇದರಲ್ಲಿ ನಟ ಗೆಹಾನಾ ವಶಿಷ್ಠ ಅವರ ಹೆಸರನ್ನು ಸಹ ಉಲ್ಲೇಖಿಸಲಾಗಿದೆ. ಮೋಸ ಮಾತ್ರವಲ್ಲದೆ ದರೋಡೆ ಆರೋಪಗಳನ್ನು ಈ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.