ನಟಿ ರಚಿತಾ ರಾಮ್ ಶಾರ್ಟ್ ಮಿನಿ ಡ್ರೆಸ್‌ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಹ್ಯಾಟ್ ಧರಿಸಿ, ಕೂದಲು ಫ್ರೀ ಬಿಟ್ಟು, ಗಾಗಲ್ಸ್ ಧರಿಸಿ ಸ್ಟೈಲಾಗಿ ಪೋಸ್ ಕೊಟ್ಟಿದ್ದಾರೆ. ಸೀರೆ, ಕುರ್ತಾ, ಸಲ್ವಾರ್‌ನಲ್ಲೇ ಕಾಣಿಸ್ಕೊಳ್ಳೋ ನಟಿ ಈಗ ಮಾಡರ್ನ್ ಲುಕ್‌ನಲ್ಲಿ ಕಾಣಿಸಿದ್ದಾರೆ.

ಗ್ರೀನ್ ಹ್ಯಾಟ್, ಯೆಲ್ಲೋ ಗ್ರೀನ್ ಕಾಂಬಿನೇಷನ್‌ನ ಮಿನಿ ಡ್ರೆಸ್‌ನಲ್ಲಿ ಕ್ಯೂಟ್ ಅಗಿ ಕಾಣಿಸಿದ್ದಾರೆ ನಟಿ. ಸಿಂಪಲ್ ಮೇಕಪ್‌ನಲ್ಲಿ ಕಾಣಿಸ್ಕೊಂಡ ನಟಿ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದಾರೆ.

ಮತ್ತೆ ದಪ್ಪಗಾದ್ರಾ ರಚಿತಾ ರಾಮ್..? ಈ ಲೇಟೆಸ್ಟ್ ಫೋಟೋ ನೋಡಿ

ಫೋಟೋಗೆ ಕ್ಯಾಪ್ಶನ್ ಕೊಟ್ಟ ನಟಿ ಇದು ಮ್ಯಾಟಿನಿ ಟೈಂ ಎಂದು ಹೇಳಿದ್ದಾರೆ. ಹಾಗೆಯೇ ಸೀರೆಯಲ್ಲಿಯೂ ಫೋಟೋ ಶೇರ್ ಮಾಡಿದ್ದಾರೆ ನಟಿ. ಅರಶಿನ ಮತ್ತು ಕೆಂಬಣ್ಣದ ಕಾಂಬಿನೇಷನ್‌ನಲ್ಲಿರೋ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ ನಟಿ.

ಎರಡು ಲವ್ ಎಮೋಜಿ ಹಾಕಿರುವ ಫೋಟೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ನಟಿಯ ಫೋಟೋ ನೋಡಿ ಡ್ಯಾನ್ಸ್ ಫ್ಲೋರು ರೆಡಿ, ಒಂದು ಬ್ರೇಕು ಡ್ಯಾನ್ಸ್ ಬಿಡಿ ಎಂದು ಕಮೆಂಟ್ ಮಾಡಿದ್ದಾರೆ ಫ್ಯಾನ್ಸ್