ಟ್ಯಾಲೆಂಟೆಡ್‌ ನಟ ಡ್ಯಾನ್ಸರ್ ಹಾಗೂ ನಿರ್ದೇಶಕ ಪ್ರಭುದೇವ ಎರಡನೇ ಮದುವೆಗೆ ಸೈ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನು ಕೆಲವರು ಮಾಜಿ ಪ್ರೇಯಸಿ ಹಾಗೂ ಪತ್ನಿ ಬಗ್ಗೆ ಮಾತನಾಡುತ್ತಿದ್ದಾರೆ.

ಕನ್ನಡ ಸಿನಿಮಾದಲ್ಲಿ ಕಾಲಿವುಡ್ ನಟ: ಟಗರು ಜೊತೆ ಇಂಡಿಯಾದ ಮೈಕಲ್ ಜಾಕ್ಸನ್ 

1995ರಲ್ಲಿ ರಾಮಲತಾ ಜೊತೆ ವಿವಾಹವಾದ ಪ್ರಭುದೇವಗೆ ಮೂರು ಮಕ್ಕಳಿವೆ. ಆದರೆ ಕಾರಣಾಂತರಗಳಿಂದ ಮೊದಲ ಮದುವೆ ಮುರಿದು ಬಿತ್ತು, ಮೊದಲ ಮಗನೂ ಕ್ಯಾನ್ಸರ್‌ನಿಂದ ಅಸುನೀಗಿದೆ. ವಿಚ್ಛೇದನ ಪಡೆದು, ಒಂಟಿಯಾಗಿದ್ದ ಪ್ರಭುದೇವಾ ಕಾಲಿವುಡ್‌ ಹಾಟ್‌ ನಟಿ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು.

ಒಂದು ಕಡೆ ಪ್ರಭುದೇವ ಪತ್ನಿ ತಮಿಳುನಾಡಿನಲ್ಲಿ ಸತ್ಯಗ್ರಹ ಮಾಡಿ ಧರಣಿ ಮಾಡುತ್ತಿದ್ದರೆ, ಮತ್ತೊಂದು ಕಡೆ ನಯನತಾರಾ ಜೊತೆ ಪ್ರಭುದೇವ ಸುತ್ತಾಡುತ್ತಿದ್ದಾರೆ ಎಂದು ಕೇಳಿ ಬಂದಿತ್ತು. ಇವೆಲ್ಲಾ ಆದ ಕೆಲವೇ ವರ್ಷಗಳಲ್ಲಿ ನಯನತಾರಾ ಹೆಸರು ನಿರ್ದೇಶಕ ವಿಘ್ನೇಶ್ ಜೊತೆ ಕೇಳಿ ಬಂದಿತ್ತು. ಹಲವು ವರ್ಷಗಳಿಂದ ಒಂಟಿಯಾಗಿರುವ ಪ್ರಭು ಈಗ ಮದುವೆಯಾಗುವ ಮನಸ್ಸು ಮಾಡಿದ್ದಾರೆ.

ನಯನ್‌ತಾರಾ ಕೈಯಲ್ಲಿದ್ದ ಪ್ರಭುದೇವ್ ಟ್ಯಾಟೂ ಮಾಯ, ಹೊಸದಾಗಿ ಏನಿದೆ ನೋಡಿ 

ಹೌದು! ಖಾಸಗಿ ಪತ್ರಿಕೆಯೊಂದು ಪ್ರಕಟಿಸಿದ ಎಕ್ಸ್‌ಕ್ಲೋಸಿವ್ ವರದಿ ಪ್ರಕಾರ ಪ್ರಭುದೇವ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹುಡುಗಿ ಹೆಸರು ರಿವೀಲ್ ಆಗಿಲ್ಲವಾದರೂ ಸಂಬಂಧಿ ಎಂದು ತಿಳಿದು ಬಂದಿದೆ. ಇಬ್ಬರೂ ಈಗಾಗಲೇ ಪ್ರೀತಿಸುತ್ತಿದ್ದು, ಕುಟುಂಬಗಳ ಒಪ್ಪಿಗೆ ಸಿಕ್ಕಿ ಮೇಲೆ ಮದುವೆ ಶಾಸ್ತ್ರ ನಡೆಸಲಾಗುವುದು, ಎನ್ನಲಾಗಿದೆ.