ತೆಲುಗು ಭಾಷೆಯಲ್ಲಿ ಆದಿಪುರುಷ್‌ ಸಿನಿಮಾ ರಿಲೀಸ್. ಕರ್ನಾಟಕದಲ್ಲಿ ಕನ್ನಡ ಸಿನಿಮಾಗೆ ಶೋ ಇಲ್ಲ ಎಂದು ಬೇಸರ....  

ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಜ್ಯೂನ್ 16ರಂದ ದೇಶಾದ್ಯಂತ ಬಿಡುಗಡೆ ಕಾಣುತ್ತಿದೆ. 550 ಕೋಟಿ ರೂಪಾಯಿ ಮೊತ್ತದಲ್ಲಿ ತಯಾರಾಗಿರುವ ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಸಖತ್ ಟ್ರೋಲ್ ಆಗಿತ್ತು. ಪ್ರಭಾಸ್ ರಾಮನ ಪಾತ್ರದಲ್ಲಿ ಕೃತಿ ಸನೂನ್ ಸೀತೆ ಪಾತ್ರದಲ್ಲಿ ಮಿಂಚಿದ್ದಾರೆ. ರಾವಣನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಟೀಕೆ, ಟ್ರೋಲ್‌ಗಳನ್ನು ಎದುರಿಸಿದ್ದ ಆದಿಪುರುಷ್ ಸಿನಿಮಾ ಈಗ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದೆ. 

ಕರ್ನಾಟಕದಲ್ಲಿ ಪ್ರಭಾಸ್ ಆದಿಪುರುಷ್ ಸಿನಿಮಾ ವಿತರಣೆ ಹಕ್ಕನ್ನು ಕಾರ್ತಿಕ್ ಗೌಡ ಅವರ ಕೆಆರ್‌ಜೆ ಸ್ಟುಡಿಯೋ ಪಡೆದುಕೊಂಡಿದೆ. ಚಿತ್ರದ ಅಡ್ವಾನ್ಸ್‌ ಬುಕ್ಕಿಂಗ್ ಆರಂಭವಾಗಿದೆ ಬೆಂಗಳೂರಿನಲ್ಲಿ ಕನ್ನಡ ಭಾಷೆಯ 9 ಶೋಗಳು, ತೆಲುಗು ಭಾಷೆಯಲ್ಲಿ 285 ಶೋಗಳು, ಹಿಂದಿಯಲ್ಲಿ 35 ಶೋಗಳು ಹಾಗೂ ತಮಿಳಿನಲ್ಲಿ 3 ಶೋಗಳಿದೆ. ಮೈಸೂರು, ಕೋಲಾರ, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಕಲಬುರಗಿ, ತುಮಕೂರು, ಕುಂದಾಪುರದಲ್ಲಿ ಕನ್ನಡ ಶೋಗಳು ಇಲ್ಲವೇ ಇಲ್ಲ. ಆದರೆ ಪ್ರತಿ ಜಿಲ್ಲೆಯಲ್ಲೂ ತೆಲುಗು ಮತ್ತು ತಮಿಳು ಶೋ ಹೊಂದಿದೆ. ಒಟ್ಟಾರೆ ಆದಿಪುರುಷ್ ಸಿನಿಮಾದ 423 ಶೋಗಳು ಕರ್ನಾಟಕದಲ್ಲಿ ಇರಲಿದೆ. 

ಟ್ರೋಲ್‌ಗಳಿಗೆ ಹೆದರಿದ್ರಾ? 'ಆದಿಪುರುಷ್' ಪ್ರಮೋಷನ್‌ನಿಂದ ದೂರಸರಿದಿದ್ದೇಕೆ ಸೈಫ್?

ಕೆಆರ್‌ಜಿ ಸ್ಟುಡಿಯೋ ಅವರು ಕನ್ನಡಕ್ಕೆ ಮತ್ತು ಪರಭಾಷೆಗೆ ಕೊಡುತ್ತಿರುವ ಪ್ರಮುಖ್ಯತೆ ನೋಡಿ ಕನ್ನಡಿಗ| Kannadiga ಎನ್ನುವ ಟ್ವಿಟರ್ ಖಾತೆಯವರು 'ಕನ್ನಡ ಅವತರಣಿಕೆ ಬುಕ್ಕಿಂಗ್ ತೆರೆಯದೆ ತೆಲುಗು ಮತ್ತು ಹಿಂದಿ ಅವತರಣಿಕೆಗಳಿಗೆ ಊರು ತುಂಬ ಲೆಕ್ಕವಿಲ್ಲದಷ್ಟು ಪ್ರದರ್ಶನ ಕೊಟ್ಟಿದ್ದಾರೆ. ಕನ್ನಡ ಅವತರಣಿಕೆಗೆ ಬಿಡುಗಡೆಯ ಹಿಂದಿನ ದಿನ ಬಂದೆರಡು ಪ್ರದರ್ಶನ ಕೊಟ್ಟು ಕನ್ನಡ ಅವತರಣಿಕೆಗೆ ಬೇಡಿಕೆ ಇಲ್ಲ.ಅತೀ ಹೊಲಸು ಇರೋ ಚಿತ್ರರಂಗ ಅಂದ್ರೆ ಬಹುಶಃ ಕರ್ನಾಟಕದ್ದೇ ಇರಬೇಕು' ಎಂದು ಟ್ವೀಟ್ ಮಾಡಿದ್ದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಕಾರ್ತಿಕ್ ಗೌಡ 'ತಾಳ್ಮೆ ಇರಲಿ ಸರ್. ರಾತ್ರೋರಾತ್ರಿ ಏನನ್ನು ಬದಲಾಯಿಸಲು ಆಗಲ್ಲ ಬಹಳ ಪುನರಾವರ್ತನೆಗಳು ಇರುತ್ತದೆ. ಆದಿಪುರುಷ್ ಕನ್ನಡ ಭಾಷೆ ಶೋಗಳು ಹೆಚ್ಚಾಗಲಿದೆ ಅನ್ನೋ ಮಾತು ನಿಮಗೆ ಕೊಡುವೆ. ದಯವಿಟ್ಟು ಡೇರ್‌ಡೆವಿಲ್ ಮುಸ್ತಫಾ ಸಿನಿಮಾ ನೋಡಿ' ಎಂದು ಹೇಳಿದ್ದಾರೆ. 

ಆದಿಪುರುಷ್ ಪ್ರಚಾರದ ವೇಳೆ ಪ್ರಭಾಸ್ 10 ಲಕ್ಷ ನೀಡಿದ ದೇವಸ್ಥಾನದ ವಿಶೇಷತೆ ಏನು?

ಅಲ್ಲಿಗೆ ಸುಮ್ಮನಾಗದ ಕನ್ನಡಿಗ ಪೇಜ್ 'ತಾಳ್ಮೆ" ಅಂತ ಹೇಳಿದ್ರಲ್ಲ !!! ಇದನ್ನ ನೋಡಿದ ಮೇಲೆ ತಾಳ್ಮೆ ಕಾಯ್ಕೊಳೋದು ಹೇಗೆ ಹೇಳಿ ಸರ್. ಇದು ಇವತ್ತಿನ , ಈ ಸಿನಿಮಾದ ವಿಷಯವಾಗಷ್ಟೇ ಉಳಿದಿಲ್ಲ. ಪ್ರತಿ ಸರ್ತಿ ಇದೇ ರೀತಿನೇ ನಡೀತಿರೋದು. ಒಂದು ದೊಡ್ಡ ಪರಭಾಷೆಯ ಸಿನಿಮಾ ಕನ್ನಡದಲ್ಲಿ ಕೂಡ ತೆರೆ ಕಾಣ್ತಿದೇ ಅಂದಾಗಲೆಲ್ಲ ಇದೆ ವರಸೆ. ಸಿನಿಮ ಬಿಡುಗಡೆಗೆ ೧೦ ದಿನ ಮುಂಚೆ ಕನ್ನಡ ಹೊರತು ಪಡಿಸಿ ಮಿಕ್ಕೆಲ್ಲ ಭಾಷೆಯಲ್ಲಿ ಮುಂಗಡ ಬುಕಿಂಗ್ ತೆರೆಯೋದು , ಸೆನ್ಸಾರ್ ಸರ್ಟಿಫಿಕೇಟ್ ಬಂದಿಲ್ಲ ಅಂತಾನೋ ಅಥವಾ ಇನ್ನೊಂದು ನೆಪ ಹೇಳ್ಕೊಂಡು ಕನ್ನಡ ಅವತರಣಿಕೆ ಬುಕಿಂಗ್ ಬಿಡುಗಡೆಯ ಹಿಂದಿನ ರಾತ್ರೀನೋ ಅಥವಾ ಕಾಡುವ ದೇವರ ಕಾಟದಿಂದ ತಪ್ಪಿಸಿಕೊಳ್ಳೋಕೆ ಅಂತ ಊರಿನ ಯಾವುದೇ ಮೂಲೆಯಲ್ಲಿ ಬುಕಿಂಗ್ ತೆರೆಯೋದು. ಕನ್ನಡ ಅಂದ್ರೆ ನಿಮಗೆ ವ್ಯಾಪಾರ ಆಗಿರಬಹುದು ಆದರೆ ನಮಗಲ್ಲ' ಎಂದಿದ್ದಾರೆ. ಅದಕ್ಕೂ ಕಾರ್ತಿಕ್ ರಿಪ್ಲೈ ಮಾಡಿದ್ದಾರೆ. 'ರಾತ್ರಿ ಏನೂ ಬದಲಾಯಿಸಲು ಆಗಲ್ಲ ಎಂದು ನಾನು ಹೇಳಿರುವೆ ಮತ್ತೆ ಅದೇ ಕೇಳುತ್ತಿದ್ದೀರಿ. ಗಾರ್ಗಿ ಸಿನಿಮಾ ಕೂಡ ತಮಿಳು ಭಾಷೆಗಿಂತ ಹೆಚ್ಚಾಗಿ ಕನ್ನಡದಲ್ಲಿ ರಿಲೀಸ್ ಮಾಡಿರುವೆ. ಕನ್ನಡದಲ್ಲಿ ಶೋ ಹೆಚ್ಚಿಸುವ ಕೆಲಸ ಮಾಡುತ್ತಿರುವೆಎ ಶೀಘ್ರದಲ್ಲಿ ಒಳ್ಳೆ ಪತ್ರಿಕ್ರಿಯೆ ಸಿಗಲಿದೆ' ಎಂದು ಕಾರ್ತಿಕ್ ಹೇಳಿದ್ದಾರೆ.

Scroll to load tweet…