Asianet Suvarna News Asianet Suvarna News

ಮಾನಸಿಕ ಹಿಂಸೆ ನೀಡಿ ಮಹಿಳೆ ಪಾತ್ರ ಮಾಡಿಸಿದ್ದರು: ಕಾರಂಜಿತ್ ಅನ್ಮೋಲ್

ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡ ಪಾತ್ರದ ಬಗ್ಗೆ ಪಂಜಾಬಿ ನಟ ಕಾರಂಜಿತ್ ಅನ್ಮೋಲ್ ಮಾತನಾಡಿದ್ದಾರೆ. 
 

Pollywood actor Karamjit Anmol talks about female role in Mr Mrs 420 returns vcs
Author
Bangalore, First Published May 23, 2021, 1:27 PM IST

ಗಾಯಕ, ಚಿತ್ರ ನಿರ್ಮಾಪಕ ಹಾಗೂ ಹಾಸ್ಯ ಕಲಾವಿದ ಕಾರಂಜಿತ್ ಅನ್ಮೋಲ್ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ 'Mr & Mrs 420 Return' ಸಿನಿಮಾದಲ್ಲಿ ಬೇಡ ಬೇಡ ಎಂದರೂ ಮಾನಸಿಕ ಹಿಂಸೆಯಿಂದ ಮಾಡಿದ ಪಾತ್ರದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.

' ನನಗೆ ಮಹಿಳೆ ಪಾತ್ರ ಮಾಡಲು ಅಥವಾ ಮಹಿಳಾ ವಸ್ತ್ರ ಧರಿಸಲು ಅಷ್ಟು ಆರಾಮದಾಯಕ ಇರಲಿಲ್ಲ.'Mr & Mrs 420 Return' ತಂಡದವರು  ನಾನು ಆ ಪಾತ್ರ ಮಾಡದಿದ್ದರೆ ಸಿನಿಮಾ ಕಂಪ್ಲೀಟ್ ಆಗುವುದಿಲ್ಲ ಎಂದು ಹೇಳಿದ್ದರು. ಈ ಪಾತ್ರ ಮಾಡಲು ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಆದರೂ ಮಾಡಿದೆ'ಎಂದು ಅನ್ಮೋಲ್ ಹೇಳಿದ್ದಾರೆ.  ಹಾಸ್ಯ ಕಲಾವಿದನಾಗಿ ನಟನಾಗಿ ಮಿಂಚುತ್ತಿರುವ ಕಾರಂಜಿತ್‌ 'ಮಂಜೆ ಬಿಸ್ಟ್ರೆ' ಚಿತ್ರದಲ್ಲಿ ಮಾಡಿದ ಸಾಧು ಪಾತ್ರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಎಂದು ಹೇಳಿದ್ದಾರೆ. 

ಸೈಕ್ಲೋನ್ ತೌಕ್ಟೆಯಿಂದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ಗೆ ಖಿನ್ನತೆ 

ಸುಮಾರು 26ಕ್ಕೂ ಹೆಚ್ಚು ಪಂಜಾಬಿ ಸಿನಿಮಾಗಳಿಗೆ ಕಾರಂಜಿತ್ ಸೌಂಡ್ ಟ್ರ್ಯಾಕ್ ಮಾಡಿದ್ದಾರೆ. 73ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ, 4 ಸಿನಿಮಾಗಳಿಗೆ ನಿರ್ಮಾಣ ಮತ್ತು 10 ಸಿನಿಮಾಗಳಿಗೆ ಹಾಡು ಹಾಡಿದ್ದಾರೆ.

Follow Us:
Download App:
  • android
  • ios