ಸಂಭ್ರಮದಿಂದ ನಡೆದ ಅಮೆರಿಕನ್ ನಟ ಪೌಲ್ ವಾಕರ್ ಪುತ್ರಿಯ ವಿವಾಹ ತಂದೆಯ ಸ್ಥಾನ ತುಂಬಿದ್ದು ಪೌಲ್ ಗೆಳೆಯ, ಸಹ ನಟ ವಿನ್ ಡಿಸೆಲ್
ಫಾಸ್ಟ್ & ಫ್ಯೂರಿಯಸ್ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಮೆರಿಕನ್ ನಟ ಪೌಲ್ ವಾಕರ್ ಪುತ್ರಿ ವಿವಾಹ ಸಂಭ್ರಮದಿಂದ ನಡೆದಿದೆ. ಸುಂದರಿ ಮೆಡೋ ವಾಕರ್ ವಧುವಾಗಿ ವೆಡ್ಡಿಂಗ್ ಗೌನ್‌ನಲ್ಲಿ ನಡೆದು ಬರುವುದನ್ನು ನೋಡುವುದಕ್ಕೆ ಮಾತ್ರ ಪೌಲ್ ವಾಕರ್ ಇಲ್ಲ. ಆದರೆ ಮೆಡೋ ವಾಕರ್‌ಗೆ ತಂದೆ ಇಲ್ಲ ಎನ್ನುವ ಕೊರಗು ಕಾಡದಂತೆ ನೋಡಿಕೊಂಡಿದ್ದು ಪೌಲ್ ಗೆಳೆಯ ಹಾಗೂ ಸಹನಟ ವಿನ್ ಡಿಸೆಲ್.
ಎಲ್ಲರ ನೆಚ್ಚಿನ ಫಾಸ್ಟ್ ಮತ್ತು ಫ್ಯೂರಿಯಸ್ ಸ್ಟಾರ್ ಪಾಲ್ ವಾಕರ್ ಅವರ ಮಗಳು ಮೆಡೋ ವಾಕರ್ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ನಡೆದ ಅದ್ಭುತ ಸಮಾರಂಭದಲ್ಲಿ ಲೂಯಿಸ್ ಥಾರ್ನ್ಟನ್-ಅಲ್ಲನ್ ಅವರನ್ನು ವಿವಾಹವಾಗಿದ್ದಾರೆ. ಆಕೆಯ ದಿವಂಗತ ಫಾಸ್ಟ್ ಅಂಡ್ ಫ್ಯೂರಿಯಸ್ ಸಹ-ನಟ ವಿನ್ ಡೀಸೆಲ್ ಅವಳ ಪಕ್ಕದಲ್ಲಿ ಅವಳ ಜೀವನದ ವಿಶೇಷವಾದ ದಿನದಂದು ಜೊತೆಗೇ ಇದ್ದರು.
ಮಿಷನ್ ಇಂಪಾಸಿಬಲ್ ನಟ ಬಾಲ್ಡ್‌ವಿನ್ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ: ಶೂಟಿಂಗ್ ಮಧ್ಯೆ ಅವಘಡ
22 ವರ್ಷದ ಮಾಡೆಲ್ ಮದುವೆಯ ಫೋಟೋ ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ತನ್ನ ಫಾಲೋವರ್ಸ್ ಜೊತೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 2013 ರಲ್ಲಿ ನಿಧತನ್ನ ತಂದೆ ಪೌಲ್ ವಾಕರ್ ಸ್ಥಾನದಲ್ಲಿ ಮೆಡೋವ್‌ನ ಗಾಡ್‌ಫಾದರ್ ಆಗಿರುವ ವಿನ್ ಡೀಸೆಲ್ವಧುವನ್ನು ವರನ ಬಳಿ ಕರೆತರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮೆಡೋ ವಾಕರ್ ಅಕ್ಟೋಬರ್ 23 ರಂದು ತನ್ನ ಬೀಚ್ ಸೈಡ್ ಮದುವೆಯಿಂದ ಬ್ಲಾಕ್ & ವೈಟ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿವಾಹದ ಸುದ್ದಿಯನ್ನು ಘೋಷಿಸಿ ನಾವು ಮದುವೆಯಾಗಿದ್ದೇವೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಮೆಡೊ ವಾಕರ್ ತನ್ನ ವಿಶೇಷ ದಿನಕ್ಕಾಗಿ ಗಿವೆಂಚಿ ಹಾಟ್ ಕೌಚರ್ ವಿವಾಹದ ಉಡುಪನ್ನು ಆರಿಸಿಕೊಂಡಿದ್ದರು. ರೇಷ್ಮೆ ಕ್ಯಾಡಿಯಲ್ಲಿ ಮಾಡಿದ ಉಡುಗೆ ಬ್ಯಾಕ್‌ಲೆಸ್ ವಿನ್ಯಾಸದೊಂದಿಗೆ ಬರುತ್ತದೆ. ಸರಳವಾದ ಮುಸುಕು ಮತ್ತು ಟಿಫಾನಿ ಆಭರಣದೊಂದಿಗೆ ನೋಟವನ್ನು ಪೂರ್ಣಗೊಳಿಸಿದ್ದಾರೆ.
