'ಆಟೋಗ್ರಾಫ್' ಸಿನಿಮಾ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ಗಾಯಕ ಕೋಮಗನ್ ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಪ್ರೈವೇಟ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದು ನಂತರ ಕಳೆದ 12 ದಿನಗಳಿಂದ ಚೆನ್ನೈನ ಆಯಾನವರಂನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಯಾವುದೇ ರೀತಿಯ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. 

congenital cognitive disability ಹೊಂದಿದ್ದ ಕೋಮಗನ್ Differently Abled in Chennai ಸಂಸ್ಥೆಗೆ ಸದಸ್ಯರಾಗಿದ್ದರು. 2019ರಲ್ಲಿ ತಮಿಳುನಾಡು ಸರ್ಕಾರದಿಂದ ತಲೈಮಾಮಣಿ ಪ್ರಶಸ್ತಿ ಪಡೆದಿದ್ದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಲೇ ಬೇಕೆಂದು ಕೋಮಗನ್‌ ತಮ್ಮದೇ ಆರ್ಕೆಸ್ಟ್ರಾ ತಂಡ ರೂಪಿಸಿಕೊಂಡು, ಕಾರ್ಯಕ್ರಮದಲ್ಲಿ ಹಾಡುತ್ತಿದ್ದರು. ತಂಡದಲ್ಲಿದ್ದ ಪ್ರತಿಯೊಬ್ಬರಿಗೂ cognitive disability ಇತ್ತು. 

ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾಗೆ ಬಲಿ 

ಗಾಯಕಿ ಸ್ನೇಹಾ ಜೊತೆ 'ಒವ್ವೊರು ಪೂಕಲಮ್' ಚಿತ್ರಕ್ಕೆ ಹಾಡಿದ್ದಾರೆ. 2010ರಲ್ಲಿ ಬಿಡುಗಡೆಯಾದ ವಿಜಯ್‌ ಚಿತ್ರದ 'ಸೂರ' ಚಿತ್ರದಲ್ಲಿ ಕೋಮಗನ್ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ಕೋಮಗನ್‌ಗೆ ವಿಶೇಷವಾದ ಪ್ರೀತಿ ಸಿಗುತ್ತಿತು. ಚಿತ್ರರಂಗದ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ.