ಸೋಶಿಯಲ್ ಮೀಡಿಯಾದಲ್ಲಿ ಮಲಯಾಳಂ ನಟಿ ಹನಿ ರೋಸ್‌ಗೆ ಅಶ್ಲೀಲ ನಿಂದನೆ: ಓರ್ವ ಅಂದರ್, 30 ಜನರ ವಿರುದ್ಧ ಕೇಸ್

ಸಾಮಾಜಿಕ ಜಾಲತಾಣದಲ್ಲಿ ನಟಿ ಹನಿ ರೋಸ್‌ಗೆ ಅಶ್ಲೀಲ ಟೀಕೆ ಮಾಡಿದ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದೆ. ನಟಿ ನೀಡಿದ ದೂರಿನನ್ವಯ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಚ್ಚಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

One arrested for teasing obscenely to Malayalam actress Honey Rose

ತಿರುವನಂತಪುರಂ: ‘ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಟೀಕೆ ಮಾಡಿ, ನನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ’ಎಂದು ಮಲಯಾಳಂ ನಟಿ ಹನಿ ರೋಸ್‌ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ನಟಿಗೆ ನಿಂದನೆ ಮಾಡಿದ ಆರೋಪದಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದು, 30 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಟಿ ರೋಸ್‌ ಭಾನುವಾರ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕೊಚ್ಚಿ ಸೆಂಟ್ರಲ್ ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ನಟಿ, ಆ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ತನ್ನನ್ನು ಹಿಂಬಾಲಿಸಿದ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ.

ಪಾಯಲ್ ಕಪಾಡಿಯಾ ಚಿತ್ರಕ್ಕೆ ಕೈ ತಪ್ಪಿದ ಜಾಗತಿಕ ಮಟ್ಟದ ‘ಗೋಲ್ಡನ್ ಗ್ಲೋಬ್ಸ್‌’ ಪ್ರಶಸ್ತಿ

ನವದೆಹಲಿ: ಜಾಗತಿಕ ಮಟ್ಟದ ‘ಗೋಲ್ಡನ್‌ ಗ್ಲೋಬ್ಸ್‌’ ಪ್ರಶಸ್ತಿಯಲ್ಲಿ ಎರಡು ವಿಭಾಗದಲ್ಲಿ ನಾಮನಿರ್ದೇಶನಗೊಂಡು ನಿರೀಕ್ಷೆ ಹುಟ್ಟಿಸಿದ ಭಾರತದ ಪಾಯಲ್ ಕಪಾಡಿಯಾ ನಿರ್ದೇಶನ ‘ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್‌’ ಚಿತ್ರಕ್ಕೆ ಪ್ರಶಸ್ತಿ ಕೈತಪ್ಪಿದೆ.ಪಾಯಲ್ ಕಪಾಡಿಯಾ ನಿರ್ದೇಶನ ಈ ಸಿನಿಮಾ 82ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯಲ್ಲಿ ನಿರ್ದೇಶನ ವಿಭಾಗ ಮತ್ತು ಇಂಗ್ಲೀಷೇತರ ಸಿನಿಮಾದಲ್ಲಿ ನಾಮನಿರ್ದೇಶನಗೊಂಡಿತ್ತು. ಆದರೆ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿದೆ. ಈ ಬಗ್ಗೆ ಪಾಯಲ್ ತಮ್ಮ ಇನ್‌ಸ್ಟಾಗ್ರಾಮ್‌ಲ್ಲಿ ಹಂಚಿಕೊಂಡಿದ್ದು, ‘ನಾವು ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ’ ಎಂದಿದ್ದಾರೆ. ಇನ್ನು ನಿರ್ದೇಶನ ವಿಭಾಗದಲ್ಲಿ ‘ದಿ ಬ್ರೂಟಲಿಸ್ಟ್’ ಖ್ಯಾತಿಯ ಬ್ರಾಡಿ ಕಾರ್ಬೆಟ್‌ ಪ್ರಶಸ್ತಿ ಪಡೆದಿದ್ದರೆ, ಇಂಗ್ಲೀಷೇತರ ವಿಭಾಗದಲ್ಲಿ ‘ಎಮಿಲಿಯಾ ಪೆರೆಜ್’ ಸಿನಿಮಾ ಗೆದ್ದಿದೆ.

ಜ.17ಕ್ಕೆ ಕಂಗನಾ ನಟನೆಯ ‘ಎಮರ್ಜೆನ್ಸಿ’ ಬಿಡುಗಡೆ

ನವದೆಹಲಿ: ಬಿಜೆಪಿ ಸಂಸದೆ, ನಟಿ ಕಂಗನಾ ರಾಣಾವತ್‌ ಅಭಿನಯದ ಬಹು ನಿರೀಕ್ಷಿತ ‘ಎಮರ್ಜೆನ್ಸಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜ.17ರಂದು ಸಿನಿಮಾ ತೆರೆಗೆ ಬರಲಿದೆ.ನಟಿ ಕಂಗನಾ ಈ ಸಿನಿಮಾದಲ್ಲಿ ಅಭಿನಯದ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತಿದ್ದಾರೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಾಧರಿತ ಈ ಸಿನಿಮಾ ಕಳೆದ ವರ್ಷದ ಸೆ.6ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಗೆ ಸೆಂಟ್ರಲ್ ಬೋರ್ಡ್‌ ಆಫ್ ಫಿಲ್ಮ್‌ ಸರ್ಟಿಫಿಕೇಶನ್ ಸಿಗದ ಕಾರಣ ಮುಂದೂಡಿಕೆಯಾಗಿತ್ತು. ಅಲ್ಲದೇ ಬಿಡುಗಡೆಗೆ ಶಿರೋಮಣಿ ಅಕಾಲಿದಳ ಸೇರಿದಂತೆ ಸಿಖ್‌ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು.

ಟ್ರೇಲರ್‌ ರಿಲೀಸ್‌ ಬಳಿಕ ಕಂಗನಾ ಈ ಬಗ್ಗೆ ತಮ್ಮ ಖುಷಿ ಹಂಚಿಕೊಂಡಿದ್ದು, ‘ಕೊನೆಗೂ ಜ.17ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ಸಂತೋಷವಾಗಿದೆ. ಇದು ಕೇವಲ ವಿವಾದಾತ್ಮಕ ನಾಯಕಿ ಬಗ್ಗೆಗಿನ ಕಥೆಯಲ್ಲ. ಪ್ರಸ್ತುತ ವಿಷಯಗಳ ಬಗ್ಗೆಯೂ ಹೇಳುತ್ತದೆ. ರಾಜಕೀಯ ನಾಟಕದ ನಡುವೆ ಸಿನಿಮಾ ಬಿಡುಗಡೆ ಸವಾಲಿನಿಂದ ಕೂಡಿತ್ತು’ ಎಂದಿದ್ದಾರೆ.

ನೀಲಿ ಗೌನ್‌ನಲ್ಲಿ ಮೈಮಾಟ ತೋರಿಸಿದ ಹನಿ ರೋಸ್, ಮಲಯಾಳಿ ಕುಟ್ಟಿಯ ಹಾಟ್ ಅವತಾರಕ್ಕೆ ಪಡ್ಡೆ ಹುಡುಗರು ಸುಸ್ತು!

ಸೀರೆಯುಟ್ಟು ಮೈಮಾಟ ತೋರಿಸಿದ ಮಲ್ಲು ಬೆಡಗಿ, ಫಿಗರ್ ನೋಡಿ ಸುಸ್ತಾದ್ವಿ ಎಂದ ನೆಟ್ಟಿಗರು!

Latest Videos
Follow Us:
Download App:
  • android
  • ios