ನವದೆಹಲಿ(ಮೇ 14)  ರಾಮಾಯಣ ಪ್ರಸಾರದ ನಂತರ ದೂರದರ್ಶನ ನಂಬರ್  ಒನ್  ಆಗಿ ವಿಶ್ವ ದಾಖಲೆಯನ್ನು ಮಾಡಿದ್ದು ಗೊತ್ತೇ ಇದೆ. ಈಗ ಮತ್ತೊಂದು ಪೌರಾಣಿಕ ಧಾರಾವಾಹಿ ಪ್ರಸಾರರಕ್ಕೆ ಮುಂದಾಗಿದೆ. ಮಹಾಭಾರತದ  ನಂತರ ಆ ಜಾಗದಲ್ಲಿ ವಿಷ್ಣು ಪುರಾಣ ಪ್ರಸಾರವಾಗಲಿದೆ.

ಏಪ್ರಿಲ್ 18ರಂದು ರಾಮಾಯಣ ಧಾರಾವಾಹಿಯ ಕೊನೆಯ ಕಂತು ಪ್ರಸಾರವಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ದೂರದರ್ಶನದ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿದೆ. ಮಹಾಭಾರತ ಮುಗಿದ ಮೇಲೆ ಅಲ್ಲಿಯತೇ ವಿಷ್ಣು ಪುರಾಣ ಕಾಣಿಸಿಕೊಳ್ಳಲಿದೆ.

ನಿತೀಶ್ ಭಾರಧ್ವಜ್ ಅವರ ಮೇಲೆ ವಿಷ್ಟು ಪುರಾಣ ನಿಂತಿದೆ. 2000ನೇ ಇಸವಿಯಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ವಿಷ್ಣುವಿನ 10 ಅವತಾರಗಳನ್ನು ಧಾರಾವಾಹಿಯಲ್ಲಿ ಚಿತ್ರಿಸಲಾಗಿದೆ.  ರವಿ ಚೋಪ್ರಾ ನಿರ್ದೇಶನ ಮಾಡಿದ್ದು ಬಿಆರ್ ಚೋಪ್ರಾ ಪ್ರೋಡಕ್ಷನ್ ನಲ್ಲಿ ಮೂಡಿಬಂದಿದೆ.   ರವಿ ಕಿಶನ್, ವಿಂಧು ಧಾರಾ ಸಿಂಗ್, ಶ್ವೇತಾ ತಿವಾರಿ, ಶ್ರುತಿ ಉಲ್ಫಾಟ್, ಸುಧಾ ಚಂದ್ರನ್, ಕಿಂಶುಕ್ ವೈದ್ಯ, ನಿಮೈ ಬಾಲಿ  ಪ್ರಮುಖ ಪಾತ್ರದಲ್ಲಿ ಇದ್ದಾರೆ. 

ರಾಮಾಯಣದ ಲವನಿಗೆ ಈಗ 44, ಏನ್ ಮಾಡುತ್ತಾ ಇದ್ದಾರೆ?

ಏಪ್ರಿಲ್ 16 ರಂದು ರಾತ್ರಿ 9  ಗಂಟೆಗೆ ಪ್ರಸಾರಗೊಂಡ ರಾಮಾಯಣವನ್ನು ವಿಶ್ವದಾದ್ಯಂತ ಸುಮಾರು 7.7 ಕೋಟಿ ಜನರು ವೀಕ್ಷಿಸಿದ್ದಾರೆ. ಆ ಮೂಲಕ ಬಹು ಸಂಖ್ಯೆಯಲ್ಲಿ ಹೆಚ್ಚಿನ ವೀಕ್ಷಕರನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿರುವುದಾಗಿ ಡಿಡಿ ತಿಳಿಸಿದೆ. ಭಾರತೀಯ ಟಿವಿ ಮಾಧ್ಯಮಗಳಲ್ಲಿಯೇ ಅತೀ ಹೆಚ್ಚಿನ ಜನರಿಂದ  ವೀಕ್ಷಣೆಗೊಳಪಟ್ಟ ಚಾನೆಲ್ ಆಗಿಯೂ ದೂರದರ್ಶನ ಪಾತ್ರವಾಗಿದೆ. ರಾಮಾಯಣ ಮರು ಪ್ರಸಾರ ಆರಂಭಿಸಿದ ಬಳಿಕ ಹಿಂದಿ ಮಾಧ್ಯಮಗಳ ಪೈಕಿ ಡಿಡಿ ಅತೀ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ ಎಂದೂ ವರದಿಗಳು ಹೇಳಿವೆ. 

ಧಾರಾವಾಹಿಗಳಲ್ಲಿ ರಾಮಾಯಣ ವೀಕ್ಷಕರ ಸಂಖ್ಯೆ ಅತೀ ಹೆಚ್ಚು . ಮೊದಲ ದಿನದ ಮೊದಲ ಸಂಚಿಕೆ 38 ಮಿಲಿಯನ್ ಜನ ವೀಕ್ಷಣೆ ಮಾಡಿದ್ದರು. ರಾತ್ರಿಯ ಮರು ಪ್ರಸಾರದಲ್ಲಿ ಈ ಸಂಖ್ಯೆ 45 ಮಿಲಿಯನ್ ಗೆ ಏರಿಕೆ ಕಂಡಿತ್ತು. ಮರುದಿನ ಬೆಳಗ್ಗಿನ ಪ್ರಸಾರ  40 ದಶಲಕ್ಷ ಮತ್ತು ಸಂಜೆಯ ಶೋ 51 ದಶಲಕ್ಷ ವೀಕ್ಷಕರಿಂದ ವೀಕ್ಷಿಸಲ್ಪಟ್ಟಿದೆ. ಒಟ್ಟಾಗಿ ರಾಮಾಯಣವನ್ನು 91 ಮಿಲಿಯನ್ ಜನರು ವೀಕ್ಷಣೆ ಮಾಡಿರುವುದಾಗಿ ಪ್ರಸಾರ ಭಾರತಿ ಹೇಳಿತ್ತು.