ಚಿತ್ರದ ಒಂದು ನೋಟವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ ನಿತಿನ್ 2021 ರ ಹೊಸ ವರ್ಷದ ಟೀಸರ್ ಮೂಲಕ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ. ರಾಕುಲ್ ಟೀಸರ್‌ನಲ್ಲಿ ಜಸ್ಟ್ ಬಂದು ಹೋಗುತ್ತಾರೆ. ನಿತಿನ್ ತನ್ನ ಮನಸ್ಸಿನಲ್ಲಿ ಚೆಸ್ ಆಡುತ್ತಿರುವ ಕೈದಿಯಾಗಿ ಕಾಣುತ್ತಾನೆ.

ಟೀಸರ್ ಆರಂಭದಲ್ಲಿಯೇ ಅವರ ಪಾತ್ರವು ಭಯೋತ್ಪಾದಕ ಎಂದು ಆರೋಪಿಸಲ್ಪಟ್ಟಿರುವುದನ್ನು ನೋಡಬಹುದು. ರಾಕುಲ್ ಪ್ರೀತ್ ಪಾತ್ರ ಅವರು ನಿರಪರಾಧಿ ಎಂದು ಹೇಳಿಕೊಳ್ಳುತ್ತಾರೆ. ನಂತರ ನಾವು ನಿತಿನ್ ಜೈಲಿನಲ್ಲಿ ಒದೆಯುವುದು ಮತ್ತು ಜಗಳವಾಡುವುದನ್ನು ಕಾಣಬಹುದು.

ಜುಹುವಿನಲ್ಲಿ 39 ಕೋಟಿಯ ಮನೆ ತಗೊಂಡ ಬಾಲಿವುಡ್ ನಟಿ

ನಟ ತನ್ನ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಲಿಂಕ್ ಅನ್ನು ಟ್ವೀಟ್ ಮಾಡಿ, "ಕಾಯುವಿಕೆ ಅಂತಿಮವಾಗಿ ಮುಗಿದಿದೆ. ಚೆಕ್ ನ ಮೊದಲ ನೋಟ ಇಲ್ಲಿದೆ! ತುಂಬಾ ಉತ್ಸುಕವಾಗಿದೆ! ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.

ತೆಲುಗು ನಟ ನಿತಿನ್ ತಮ್ಮ ಹೊಸ ಸಿನಿಮಾ ಚೆಕ್ ನ ಟೀಸರ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ನಟಿಯರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ್ದಾರೆ. ಈ ಚಿತ್ರವನ್ನು ಚಂದ್ರ ಶೇಖರ್ ಯೆಲೆಟಿ ನಿರ್ದೇಶಿಸಿದ್ದಾರೆ.