ಬಾಲಿವುಡ್ ನಟಿ ಮೌನಿ ರಾಯ್ ಹೊಸ ಸ್ಪರ್ಧೆಗಿಳಿದಿದ್ದಾರೆ. ಅದೂ ಜೀವಂತ ಲೈಗರ್ ಜೊತೆ. ಇದೀಗ ನಟಿಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಲೈಗರ್‌ ಜೊತೆ ಹಗ್ಗಜಗ್ಗಾಟವಾಡಿದ್ದು ಫನ್ನಿ ವಿಡಿಯೋವನ್ನು ಫ್ಯಾನ್ಸ್ ಜೊತೆ ನಟಿ ಶೇರ್ ಮಾಡಿಕೊಂಡಿದ್ದಾರೆ. ದಪ್ಪದ ಹಗ್ಗದ ಒಂದು ಬದಿಯನ್ನು ಲೈಗರ್, ಇನ್ನೊಂದು ಬದಿಯನ್ನು ಮೌನಿ ಹಿಡಿದುಕೊಂಡಿದ್ದಾರೆ.

KGF ನಟಿಯ ಬೀಚ್ ಫನ್: ಮರಳಲ್ಲಿ ಬಿದ್ದ ಮೌನಿ ರಾಯ್

ಲೈಗರ್ ಹಗ್ಗದ ಒಂದು ಬದಿಯನ್ನು ಬಾಯಲ್ಲಿ ಕಚ್ಚಿಕೊಂಡಿದ್ದರೆ, ಮೌನಿ ರಾಯ್ ಎರಡೂ ಕೈಗಳಿಂದ ಹಗ್ಗ ಹಿಡಿದು ಜಗ್ಗಿದ್ದಾರೆ. ಆದ್ರೂ ಲೈಗರ್ ದರದರನೆ ಮೌನಿಯನ್ನು ಎಳೆದಿದೆ.

ಲೈಗರ್ ಎಂದರೆ ಸಿಂಹದ ಮುಖವಿರುವ, ಹುಲಿಯ ದೇಹವಿರುವಂತ ಪ್ರಾಣಿ. ಇದು ಗಂಡು ಸಿಂಹ ಮತ್ತು ಹೆಣ್ಣು ಹುಲಿ ಹೈಬ್ರೀಡ್  ತಳಿ.

 
 
 
 
 
 
 
 
 
 
 
 
 
 
 

A post shared by mon (@imouniroy)