'ಅನುರಾಗ ಕರಿಕಿನ್ ವೆಲ್ಲಂ' ಚಿತ್ರದ ಮೂಲಕ ಮಾಲಿವುಡ್‌ ಲಕ್ಕಿ  ಗರ್ಲ್‌ ಎಂದೆನಿಸಿಕೊಂಡ ರಜಿಶಾ ವಿಜಯನ್ ಇಂಡಸ್ಟ್ರಿಯಲ್ಲಿ ಗ್ಲಾಮರ್‌ಗೆ ಇರುವ ಬೆಲೆ ಮತ್ತು ಬ್ಯೂಟಿ ಪ್ರಾಡಕ್ಟ್‌ಗಳ ಬಗ್ಗೆ ನಿಷ್ಠೂರವಾಗಿ ಮಾತನಾಡಿದ್ದಾರೆ. ವಿಭಿನ್ನ ಪಾತ್ರಗಳ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರ ಮನೆ ಮಗಳಾಗಿರುವ ರಜಿಶಾಳ ಮಾತು ಮಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.

ಅವಕಾಶಕ್ಕೆ ಏನು ಬೇಕಾದರೂ ಮಾಡುವ ನಟಿಯರಿಗೆ ಮಾದರಿಯಾಗಲಿ ಸಾಯಿ ಪಲ್ಲವಿ!

ಬ್ಯೂಟಿ ಪ್ರಾಡಕ್ಟ್‌:

ಫೇರ್‌ನೆಸ್‌ ಕ್ರೀಮ್‌ ಬಳಸಿದರೆ ಮಾತ್ರ ಬ್ಯೂಟಿ ಎಂಬ ಮಾತನನ್ನು ವಿರೋಧಿಸುವ ರಜಿಶಾ ತಮ್ಮ ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ. 'ಪಾತ್ರಕ್ಕೆ ಅಗತ್ಯವಿದ್ದರೆ ಮಾತ್ರ ನಾನು ಮುಖದಲ್ಲಿರುವ ಮಚ್ಚೆಯನ್ನು ಕವರ್ ಮಾಡುತ್ತೇನೆ ಇಲ್ಲವಾದರೆ ಇದಕ್ಕೆ ಯಾವುದೇ ಬಣ್ಣ ಹಚ್ಚುವುದಿಲ್ಲ. ಇದು ನನ್ನ ವ್ಯಕ್ತಿತ್ವ, ನನ್ನ ಗುರುತು ಇದರಿಂದ ನನಗೆ  ಯಾವುದೇ ಅವಮಾನವಿಲ್ಲ, ಇದು ನನ್ನ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ' ಎಂದು ಹೇಳಿದ್ದಾರೆ.

'ಕಪ್ಪು ಬಣ್ಣ ಸುಂದರವಾಗಿರುತ್ತದೆ. ನಾವು ನಟಿಯರು ಎಲ್ಲಾ ಬ್ಯೂಟಿ ಪ್ರಾಡೆಕ್ಟ್‌ಗಳು ಮುಖದ ಕಾಂತಿ ಹೆಚ್ಚಿಸುತ್ತದೆ ಎಂದು ಸುಮ್ಮನೆ ಪ್ರಚಾರ ನೀಡುತ್ತೇವೆ ಹಾಗೂ ನಿಮ್ಮ ಹೆಸರು ಬದಲಾಯಿಸಿಕೊಳ್ಳಲು ಮೊದಲು ಮುಖ ಅಂದ ಹೆಚ್ಚಿಸಿ ಎಂದು ಸುಳ್ಳು ಹೇಳುತ್ತೇವೆ. ನಿಮ್ಮ ಚರ್ಮದಲ್ಲಿ ಮೆಲನಿನ್ ಅಂಶವಿರುತ್ತದೆ ಅದು ನೈಜ ಸೌಂದರ್ಯ. ಬೇರೆ ಯಾವುದೂ ನಮ್ಮ ಯಶಸ್ಸಿಗೆ ಕಾರಣವಾಗುವುದಿಲ್ಲ' ಎಂದು ನೇರವಾಗಿ ಮಾತನಾಡಿದ್ದಾರೆ.

ಶೇ. 85ರಷ್ಟು ಸುಟ್ಟೋದ್ರು ಈ ಮಾಡೆಲ್, ನ್ಯೂಡ್ ಫೋಟೋಶೂಟ್ ಮಾಡಿ ತೋರ್ಸಿದ್ರು ಸುಟ್ಟ ದೇಹ!

ಜನರ ಮಾತು ಕೇಳಬೇಡಿ:

'ನಾನು ಬಾಲ್ಯದಿಂದಲೂ ಸಿನಿಮಾದಲ್ಲಿ ಅಭಿನಯಿಸಬೇಕೆಂದು ಕನಸು ಕಟ್ಟಿಕೊಂಡವಳು.ನಾನು ಕುಳ್ಳಗೆ ಇದ್ದ ಕಾರಣ ನಾನು ನಟಿಯಾದರೆ ಜನರು ನನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಭಾವನೆ ಇತ್ತು. ಅನೇಕರು ಮುಖಕ್ಕೆ ಹೊಡೆದಂತೆ ಇದರ ಬಗ್ಗೆ ಮಾತನಾಡಿದ್ದಾರೆ. ನನ್ನ ಅದೃಷ್ಟಕ್ಕೆ ನನ್ನ ಅಭಿಮಾನಿಗಳು ನನ್ನನ್ನು ಒಪ್ಪಿಕೊಂಡಿದ್ದಾರೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಅಷ್ಟೇ ಅಲ್ಲದೆ ಚಿತ್ರರಂಗಕ್ಕೆ ಕಾಲಿಡುವ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. 'ನೀವು ನೋಡಲು ಚೆನ್ನಾಗಿದ್ದರೇ ಕುಳ್ಳಗಿರಲಿ, ಉದ್ದವಿರಲಿ, ಕಪ್ಪು ಇರಲಿ ನೀವು ಸರಿಯಾದ ಮಾರ್ಗದಲ್ಲಿದ್ದರೆ ನಿಮ್ಮಗೆ ಯಶಸ್ಸು ಖಂಡಿತಾ. ರಿಲ್ಯಾಕ್ಸ್‌ ಮಾಡಿ ಜೀವನ ತುಂಬಾ ಸುಂದರವಾಗಿದೆ'ಎಂದಿದ್ದಾರೆ.