Asianet Suvarna News Asianet Suvarna News

ಮೇಘನಾರನ್ನು ಭೇಟಿಯಾದ ಇಂದ್ರಜಿತ್..! ಜೂ.ಚಿರುವನ್ನು ಮುದ್ದು ಮಾಡಿದ ಮಾಲಿವುಡ್ ನಟ

ಮೇಘನಾ ರಾಜ್‌ನನ್ನು ಭೇಟಿ ಮಾಡಿದ ಮಾಲಿವುಡ್ ನಟ ಇಂದ್ರಜಿತ್ | ಪುಟ್ಟ ಕಂದನ ಎತ್ತಿ ಆಡಿಸಿದ ನಟ

Mollywood Actor Indrajith meets Meghana Raj and Junior Chiru dpl
Author
Bangalore, First Published Apr 3, 2021, 1:42 PM IST | Last Updated Apr 3, 2021, 1:48 PM IST

ಕೆಲವು ದಿನಗಳ ಹಿಂದೆ ಮೇಘನಾ ರಾಜ್ ಅವರ ಆಪ್ತರಾಗಿರುವ ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್ ಅವರು ನಟಿಯ ಬೆಂಗಳೂರಿನ ಮನೆಗೆ ಭೇಟಿ ನೀಡಿ ಮಾತನಾಡಿದ್ದಾರೆ.

ಅವರು ಮೇಘನಾ ಅವರ ಪೋಷಕರು ಮತ್ತು ಅವರ ಮಗನೊಂದಿಗೆ ಸ್ವಲ್ಪ ಸಮಯವನ್ನು ಕಳೆದರು. ಚಿರಂಜೀವಿ ಸರ್ಜಾ ಅವರು ಜೂನ್ 7, 2020 ರಂದು ನಿಧನರಾದ ನಂತರ ಇದು ಅವರ ಮೊದಲ ಭೇಟಿ.

ಚಿರು-ಮೇಘನಾರ ಹಳೆ ಫೋಟೋ ವೈರಲ್: ನೋಡಿ ಖುಷಿ ಪಟ್ಟ ನಟಿ

ಮೀಟ್-ಅಪ್‌ನಿಂದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ ಮೇಘನಾ. ಬರೆದರು, ಇದನ್ನು ಸ್ವಲ್ಪ ತಡವಾಗಿ ಶೇರ್ ಮಾಡುತ್ತಿದ್ದೇನೆ. ಬಹಳಷ್ಟು ಸಮಯದ ನಂತರ ನಾವು ಕೊನೆಗೂ ಇಂದ್ರು ಅವರನ್ನು ಭೇಟಿಯಾಗುತ್ತಿದ್ದೇನೆ! ಶೀಘ್ರದಲ್ಲೇ ಪೂರ್ಣಿಮಾ ಅವರನ್ನೂ ನೋಡುತ್ತೇನೆ ಎಂದು ಆಶಿಸುತ್ತೇನೆ! ಅದ್ಭುತ ಸಮಯ ಸಿಕ್ಕಿತು.... ಬಿರಿಯಾನಿ ಇಷ್ಟವಾಯಿತು ಎಂದುಕೊಳ್ಳುತ್ತೇನೆ. ಜೂನಿಯರ್ ಚಿರು ನಿಮ್ಮ ಕಂಪನಿಯನ್ನು ಎಂಜಾಯ್ ಮಾಡಿದ ಎಂದು ಬರೆದಿದ್ದಾರೆ.

ಮೇಘನಾ ಮತ್ತು ಇಂದ್ರಜಿತ್ ಸುಕುಮಾರನ್ ಪಾಪ್ಪಿನ್ಸ್, ಅಪ್ & ಡೌನ್: ಮುಗಳಿಲ್ ಒರಾಳುಂಡ್, ಮುಲ್ಲಮೊಟ್ಟುಂ ಮುಂದಿರಿಚಾರುಂ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

Latest Videos
Follow Us:
Download App:
  • android
  • ios