Asianet Suvarna News Asianet Suvarna News

Rajinikanth vs Roja: ರಜನಿಕಾಂತ್‌ಗೆ ಆಂಧ್ರ ರಾಜಕೀಯದ ಜ್ಞಾನವಿಲ್ಲ, NTR ಆತ್ಮಕ್ಕೂ ನೋವಾಗಿದೆ; ರೋಜಾ ಕಿಡಿ

ರಜನಿಕಾಂತ್‌ಗೆ ಆಂಧ್ರ ರಾಜಕೀಯದ ಜ್ಞಾನವಿಲ್ಲ, ಅವರ ಮಾತಿನಿಂದ NTR ಆತ್ಮಕ್ಕೂ ನೋವಾಗಿದೆ ಎಂದು ಮಂತ್ರಿ, ನಟಿ ರೋಜಾ ಕಿಡಿಕಾರಿದ್ದಾರೆ. 

Minister Roja gives counter to Rajinikanth for praising Chandrababu and NTR sgk
Author
First Published Apr 29, 2023, 6:15 PM IST | Last Updated Apr 29, 2023, 6:15 PM IST

ಎನ್‌ಟಿಆರ್‌ ಶತಮಾನೋತ್ಸವ ಸಮಾರಂಭದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಹೊಗಳಿದ ಸೂಪರ್‌ಸ್ಟಾರ್ ರಜನಿಕಾಂತ್‌ ವಿರುದ್ಧ ಅಂಧ್ರ ಮಂತ್ರಿ, ನಟಿ ರೋಜಾ ಕಿಡಿ ಕಾರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರೋಜಾ, ರಜನಿಕಾಂತ್ ಅವರಿಗೆ ತೆಲುಗು ರಾಜ್ಯದ ರಾಜಕೀಯದ ಬಗ್ಗೆ ಯಾವುದೇ ಕಲ್ಪನೆಯಿಲ್ಲ, ಅವರ ಈ ಹೇಳಿಕೆಯಿಂದ ಎನ್‌ಟಿಆರ್ ಆತ್ಮಕ್ಕೂ ನೋವಾಗಿದೆ ಎಂದು ತಿರುಗೇಟು ನೀಡಿದರು. ಇತ್ತೀಚೆಗೆ ನಡೆದ ಎನ್‌ಟಿರ್ ಶತಮಾನೋತ್ಸವ ಸಂಭ್ರಮದಲ್ಲಿ ತಲೈವಾ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದ್ದರು.

ಎನ್‌ಟಿಆರ್‌ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ  ಸಾಧನೆ ಹಾಗೂ ಜನಪ್ರಿಯತೆ ಬಗ್ಗೆ ಹಾಡಿಹೊಗಳಿದರು. ಅದೇ ಸಮಯಕ್ಕೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ನಟ ಬಾಲಕೃಷ್ಣ ಕುರಿತು ಮೆಚ್ಚುಗೆಯ ಮಾತುಗಳನ್ನಾಗಿದರು. ಇದು ಜಗನ್ ನೇತೃತ್ವದ ವೈಆರ್‌ಎಸ್ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ರೋಜಾ, ಸೂಪರ್ ಸ್ಟಾರ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಾಧ್ಯಮಗಳ ಜೊತೆ ಮಾತನಾಡಿರುವ ನಟಿ ರೋಜಾ, 'ಚಂದ್ರಬಾಬು ನಾಯ್ಡು ಅವರು ಎನ್‌ಟಿಆರ್ ಅವರನ್ನು ವಿಧಾನಸಭೆಯಲ್ಲಿ ಹೇಗೆ ಅವಮಾನಿಸಿದ್ದರು ಎಂಬುದನ್ನು ತೋರಿಸುವ ದಾಖಲೆ ಮತ್ತು ವಿಡಿಯೋಗಳನ್ನು ನಾನು ರಜನಿಕಾಂತ್‌ಗೆ ಕಳುಹಿಸುತ್ತೇನೆ. ಚಂದ್ರಬಾಬು ನಾಯ್ಡು ಎನ್‌ಟಿಆರ್‌ಗೆ ಚಿತ್ರಗಳ ಮೂಲಕ ಹೇಗೆ ಅವಮಾನ ಮಾಡಿದ್ದಾರೆ ಎಂದು ಗೊತ್ತಾಗಲಿದೆ ಎಂದು ಹೇಳಿದರು. ನಟನಾಗಿ ರಜನಿಕಾಂತ್ ಅವರ ಬಗ್ಗೆ ಅಪಾರ ಗೌರವವಿದೆ, ಆದರೆ ಅವರ ಹೇಳಿಕೆಗಳು ರಾಜ್ಯ ಮತ್ತು ಟಿಡಿಪಿಯಲ್ಲಿರುವ ಎನ್‌ಟಿಆರ್ ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ' ಎಂದು ರೋಜಾ ಆಕ್ರೋಶ ವ್ಯಕ್ತಪಡಿಸಿದರು.  

ದಯವಿಟ್ಟು ಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡಬೇಡಿ; ಮೀನಾ ಪುತ್ರಿಯ ಮನವಿ ಕೇಳಿ ಕಣ್ಣೀರಿಟ್ಟ ರಜನಿಕಾಂತ್

'ಚಂದ್ರಬಾಬು ನಾಯ್ಡು ಅವರ ಅವಧಿಯಲ್ಲಿ ಹೈದರಾಬಾದ್ ಅಭಿವೃದ್ಧಿಯಾಗಲಿಲ್ಲ. ಮಾಜಿ ಸಿಎಂ ವೈಎಸ್ ರಾಜಶೇಖರ್ ರೆಡ್ಡಿ ಅವರು ಶುಲ್ಕ ಮರುಪಾವತಿಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಅವರ ಕನಸುಗಳನ್ನು ನನಸಾಗಿಸಲು ಅವಕಾಶವನ್ನು ಒದಗಿಸಿದರು. ತೆಲುಗು ಜನರು ವಿದೇಶಗಳಲ್ಲಿ ಕೆಲಸ ಮಾಡಲು ವೈಎಸ್ ರಾಜಶೇಖರ್ ರೆಡ್ಡಿ ಕಾರಣ' ಎಂದು ರೋಜಾ ಹೇಳಿದರು.

'ಇಷ್ಟೆಲ್ಲಾ ಮಾತನಾಡುವವರು 27 ವರ್ಷಗಳಲ್ಲಿ ಎನ್‌ಟಿಆರ್‌ಗೆ ಭಾರತರತ್ನ ಯಾಕೆ ಕೊಡಿಸಲಿಲ್ಲ. ಎನ್‌ಟಿಆರ್ ಯುಗಪುರುಷ ಎಂದವರು ಬೆನ್ನಿಗೆ ಚೂರಿ ಹಾಕಿದ್ದೇಕೆ? ಎನ್‌ಟಿಆರ್‌ಗೆ ಅಸೆಂಬ್ಲಿಯಲ್ಲಿ ಹೇಗೆ ಅವಮಾನ ಮಾಡಿದರು ಎನ್ನುವುದನ್ನು ನಾನು ರಜನಿಕಾಂತ್‌ಗೆ ದಾಖಲೆ ಸಮೇತ ಮನವರಿಕೆ ಮಾಡಿಕೊಡುತ್ತೇನೆ' ಎಂದು ಹೇಳಿದ್ದಾರೆ. 

ಸೌಂದರ್ಯದ ಘನಿ ಸಿಲ್ಕ್​ ಸ್ಮಿತಾರನ್ನು ಮೋಹಿಸಿದ್ರಂತೆ ಸೂಪರ್​ಸ್ಟಾರ್​ ರಜನೀಕಾಂತ್!​

'ಚಂದ್ರಬಾಬು ನಾಯ್ಡು ಅವರ ವಿಷನ್ 2020ರ ಕಾರಣದಿಂದಾಗಿ ಟಿಡಿಪಿ 23 ಸ್ಥಾನಗಳನ್ನು ಪಡೆದುಕೊಂಡಿದೆಟ ಎಂದು ರೋಜಾ ಅವರು ವ್ಯಂಗ್ಯವಾಡಿದರು. ವಿಷನ್ 2047 ರಲ್ಲಿ ಚಂದ್ರಬಾಬು ಯಾವ ಹಂತದಲ್ಲಿರುತ್ತಾರೆ ಎಂದು ಪ್ರತಿಕ್ರಿಯಿಸಿದರು. ರಜನಿಕಾಂತ್ ಹೇಳಿದ ಹಾಗೆ 2024 ರಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗಲ್ಲ ಎಂದು ರೋಜಾ ಗುಡುಗಿದರು. 
 

Latest Videos
Follow Us:
Download App:
  • android
  • ios