ಶವವಾಗಿ ಪತ್ತೆಯಾದ ನಟ-ನಿರ್ದೇಶಕ ರವೀಂದ್ರ ಮಹಾಜನಿ
ಮರಾಠಿ ಸಿನಿಮಾರಂಗದ ಖ್ಯಾತ ನಟ, ನಿರ್ದೇಶಕ ರವೀಂದ್ರ ಮಹಾಜನಿ ಶವವಾಗಿ ಪತ್ತೆಯಾಗಿದ್ದಾರೆ. ಪುಣೆಯ ಪುಣೆಯ ತಾಲೇಗಾಂವ್ ನಲ್ಲಿರುವ Xrbia ಸೊಸೈಟಿಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಮರಾಠಿ ಸಿನಿಮಾರಂಗದ ಖ್ಯಾತ ನಟ, ನಿರ್ದೇಶಕ ರವೀಂದ್ರ ಮಹಾಜನಿ ಶವವಾಗಿ ಪತ್ತೆಯಾಗಿದ್ದಾರೆ. ಪುಣೆಯ ಪುಣೆಯ ತಾಲೇಗಾಂವ್ ನಲ್ಲಿರುವ Xrbia ಸೊಸೈಟಿಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ನಟ ರವೀಂದ್ರ ಮಹಾಜನಿ ಸುಮಾರು ಎಂಟು ತಿಂಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರ ಪ್ರಕಾರ ರವೀಂದ್ರ ಮಹಾಜನಿ ಏಕಾಂಗಿ ಇದ್ದ ಕಾರಣ ಖಿನ್ನತೆ ಜಾರಿದ್ದರು ಎನ್ನಲಾಗಿದೆ. ಶುಕ್ರವಾರ ಸಂಜೆ 4.30ರ ಸುಮಾರಿಗೆ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರನ್ನು ಸಂಪರ್ಕಿಸಿದ್ದಾರೆ.
ತಕ್ಷಣ ತಾಲೆಗಾಂವ್ ಎಂಐಡಿಸಿ ಪೊಲೀಸ್ ಠಾಣೆಯ ತಂಡ ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಅಪಾರ್ಟ್‌ಮೆಂಟ್ ಒಳಗಿನಿಂದ ಬೀಗ ಹಾಕಲಾಗಿತ್ತು. ಬಳಿಕ ಪೊಲೀಸರು ಸ್ಥಳೀಯರ ಸಮ್ಮುಖದಲ್ಲಿ ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ಮಹಜನಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮಹಾಜನಿ ಎಂದು ಅಪಾರ್ಟ್‌ಮೆಂಟ್ ಮಾಲೀಕರು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru: ಸ್ನೇಹಿತನಿಗಾಗಿ ಆನ್ಲೈನ್ ಲೋನ್ ಪಡೆದು ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ!
ಶವನೋಡಿದ ಪೊಲೀಸರು ಎರಡು ಮೂರು ದಿನಗಳ ಮೊದಲೇ ನಿಧನರಾಗಿದ್ದಾರೆ ಎಂದು ಶಂಕಿಸಲಾಗಿದೆ. ಬಳಿಕ ಮಹಾಜನಿ ಕುಟುಂಬಕ್ಕೆ ಪೊಲೀಸರು ಮಾಹಿತಿ ತಿಳಿಸಿದರು. ಸಾವಿನ ಕಾರಣವನ್ನು ಖಚಿತಪಡಿಸಲು ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕುಡಿದು ಗಲಾಟೆ ಮಾಡ್ತಿದ್ದ ಮಗನನ್ನು ಹೊಡೆದು ಮಲಗಿಸಿದ ತಂದೆ: ಬೆಳಗ್ಗೆ ನೋಡಿದ್ರೆ ಸತ್ತೇ ಹೋಗಿದ್ದ
ಮಹಾಜನಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಬೈಚಾ ಫೌಜ್ದರ್ (1984) ಮತ್ತು ಕಲಾತ್ ನಕಲತ್ (1990) ನಂತಹ ಪ್ರಸಿದ್ಧ ಸಿನಿಮಾಗಳಿಂದ ಹೆಸರುವಾಸಿಯಾಗಿದ್ದರು. ಅವರು 1970 ರ ದಶಕದಿಂದ ಅನೇಕ ವರ್ಷಗಳ ಕಾಲ ಮರಾಠಿ ಚಲನಚಿತ್ರೋದ್ಯಮದಲ್ಲಿ ಸಕ್ರೀಯರಾಗಿದ್ದರು. ಮರಾಠಿ ಮಾತ್ರವಲ್ಲದೇ ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೊನೆಯದಾಗಿ ಹಿಂದಿಯಲ್ಲಿ ಪಾಣಿಪತ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ 2019ರಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದ ಖ್ಯಾತಿಗಳಿಸಿತ್ತು.