ಮಾಲಿವುಡ್‌ ನಿರ್ದೇಶಕ ಸಚ್ಚಿ (48) ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ಜೂನ್‌ 18ರ ರಾತ್ರಿ ಕೊನೆ ಉಸಿರೆಳೆದಿದ್ದಾರೆ. 

ಮಲಯಾಳಂ ಚಿತ್ರರಂಗದ ಸೂಪರ್‌ ಸ್ಕ್ರಿಪ್ಟ್ ರೈಟರ್ ಹಾಗೂ ಹಿಟ್‌ ಡೈರೆಕ್ಟರ್‌ ಎಂದು ಗುರುತಿಸಿಕೊಂಡಿದ್ದ ಸಚ್ಚಿ ಮೂರು ದಿನಗಳ ಹಿಂದೆ ತ್ರೀವ ಹೃದಯಾಘಾತಕ್ಕೆ ಒಳಗಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ವಿಫಲವಾಗಿ ಇಹಲೋಕ ತ್ಯಜಿಸಿದ್ದಾರೆ.

ಜೂನ್ 16ರಂದು ಆದ ಲಘು ಹೃದಯಾಘಾತದಿಂದ ಸಚ್ಚಿ ಅವರನ್ನು ತ್ರಿಸ್ಸೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿತ್ತು ಆದರೆ ಗುರುವಾರ ರಾತ್ರಿ ಸುಮಾರು 9.30ಕ್ಕೆ ನಿಧನರಾಗಿದ್ದಾರೆ. ಕೇರಳದ ತ್ರಿಸ್ಸೂರ್‌ನಲ್ಲಿ ಜನಿಸಿದ್ದ ಸಚ್ಚಿ ತಮ್ಮ ಹುಟ್ಟೂರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಹಾರ್ಟ್‌ ಅಟ್ಯಾಕ್‌ ತಡೆಯುವ 10 ಸಂಗತಿಗಳು!

1972ರಲ್ಲಿ ಜನಿಸಿದ ಸಚ್ಚಿ ಪೂರ್ತಿ ಹೆಸರು ಕೆ ಆರ್‌ ಸಚ್ಚಿದಾನಂದ್. ಚಿತ್ರರಂಗಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡಿದ್ದ ಇವರಿಗೆ ಸಿನಿ ವೃತ್ತಿಯಲ್ಲಿ ಬ್ರೇಕ್‌ ಕೊಟ್ಟ ಸಿನಿಮಾ 'ಅಯ್ಯಪ್ಪನುಮ್ ಕೋಶಿಯುಮ್'. ಚಿತ್ರ ತೆರೆ ಕಂಡ ಕೆಲವೇ ದಿನಗಳಲ್ಲಿ 60 ಕೋಟಿ ರೂ ಗಳಿಸಿತ್ತು. ಸಚ್ಚಿ ಅವರ ಸಾವಿಗೆ ಮಾಲಿವುಡ್ ಸೇರಿದಂತೆ ದಕ್ಷಿಣಭಾರತ ಸಿನಿ ಕ್ಷೇತ್ರದ ಅನೇಕರು ಸಂತಾಪ ಸೂಚಿಸಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"