ಧೋನಿ ನಿರ್ಮಾಣದ Lets Get Married ಚಿತ್ರದ ಟೀಸರ್​ ಬಿಡುಗಡೆ: ಫ್ಯಾನ್ಸ್​ ಫಿದಾ

ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ ಅವರ ಬಹು ನಿರೀಕ್ಷಿತ ಲೆಟ್ಸ್​ ಗೆಟ್​ ಮ್ಯಾರೀಡ್​ ಹಾಸ್ಯ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಸಕತ್​ ರೆಸ್​ಪಾನ್ಸ್​ ಸಿಕ್ಕಿದೆ. 
 

Mahendra Singh Dhoni  unveils teaser of  movie Lets Get Married on Facebook suc

ಭಾರತದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಾದ ಎಂಎಸ್ ಧೋನಿ ಅವರು ತಮ್ಮ ಮೊದಲ ಚಲನಚಿತ್ರ ತಮಿಳಿನಲ್ಲಿ ತಮ್ಮ ಮೊದಲ ಚಲನಚಿತ್ರ ನಿರ್ಮಾಣವನ್ನು ಘೋಷಿಸಿದ್ದಾರೆ. ಸಾಕ್ಷಿ ಧೋನಿ ಈ ಚಿತ್ರವನ್ನು ರಚಿಸಿದ್ದಾರೆ, ಇದು 'LGM' ಅರ್ಥಾತ್​ ಲೆಟ್ಸ್​ ಗೆಟ್​ ಮ್ಯಾರೀಡ್​ (ಮದುವೆಯಾಗೋಣ) ಎಂಬ ಕುತೂಹಲಕಾರಿ ಶೀರ್ಷಿಕೆಯನ್ನು ಹೊಂದಿದೆ. ಧೋನಿಯ ಮೊದಲ ಸಿನಿಮಾ ತಮಿಳಿನಲ್ಲಿ ಚಿತ್ರೀಕರಣವಾಗುತ್ತಿದೆ. ಪೋಸ್ಟರ್‌ನಲ್ಲಿ ನಾಯಕ ಹರೀಶ್ ಕಲ್ಯಾಣ್, ನಾಯಕಿ ಇವಾನಾ ಮತ್ತು ಹಿರಿಯ ನಟಿ ನದಿಯಾ ಮದುವೆಯ ಉಂಗುರದಲ್ಲಿ ಲಾಕ್ ಮಾಡಲಾಗಿದೆ.  ಎಂ.ಎಸ್​. ಧೋನಿ ಅವರು ತಮ್ಮ  ‘ಧೋನಿ ಎಂಟರ್​ಟೇನ್​ಮೆಂಟ್’ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದು, ಈಗ  ತಮಿಳು ಭಾಷೆಯಲ್ಲಿ  ‘ಲೆಟ್ಸ್ ಗೆಟ್ ಮ್ಯಾರೀಡ್​’ (Lets  Get Married) ಚಿತ್ರ ನೀಡುತ್ತಿದ್ದಾರೆ.  ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಏಕೆಂದರೆ ಇದು ಸಕತ್​  ಫನ್ನಿ ಆಗಿದೆ. ಇದನ್ನು ತಮ್ಮ ಫೇಸ್‌ಬುಕ್​ನಲ್ಲಿ ಹಂಚಿಕೊಂಡಿರುವ ಧೋನಿ,  'ನಾನು ಥ್ರಿಲ್ ಆಗಿದ್ದೇನೆ ಮತ್ತು 'ಎಲ್‌ಜಿಎಂ' ಟೀಸರ್ ಅನ್ನು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹೆಮ್ಮೆಪಡುತ್ತೇನೆ - ಧೋನಿ ಎಂಟರ್‌ಟೈನ್‌ಮೆಂಟ್‌ನ ಇಡೀ ತಂಡಕ್ಕೆ ಶುಭಾಶಯಗಳು' ಎಂದಿದ್ದಾರೆ. 

'LGM' ನ ಮೊದಲ ನೋಟವು ನಾಯಕ ಹರೀಶ್ ಕಲ್ಯಾಣ್, ನಾಯಕಿ ಇವಾನಾ ಮತ್ತು ಹಿರಿಯ ನಟಿ ನದಿಯಾ ಅವರನ್ನು ಮದುವೆಯ ಉಂಗುರದಲ್ಲಿ ಲಾಕ್ ಮಾಡಿರುವುದನ್ನು ನೋಡಬಹುದು.  ತಮಿಳ್ಮಣಿ ಅವರ ನಿರ್ದೇಶನದ ಈ ಚಿತ್ರವನ್ನು ಮೋಜಿನ ತುಂಬಿದ ಕೌಟುಂಬಿಕ ಚಿತ್ರ ಎಂದು ಹೇಳಲಾಗಿದೆ.  'ಎಲ್‌ಜಿಎಂ' ಚಿತ್ರದಲ್ಲಿ ಯೋಗಿ ಬಾಬು ಮತ್ತು ಆರ್‌ಜೆ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಚಿತ್ರೀಕರಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗುವುದು. ಸಿನಿಮಾ ಕಥೆ ಬಗ್ಗೆ ರಮೇಶ್ ಹೇಳಿದ್ದರು.  ‘ಧೋನಿ ಪತ್ನಿ ಸಾಕ್ಷಿ ಅವರು ಒಂದು ಕಥೆಯ ಪರಿಕಲ್ಪನೆಯನ್ನು ಹೇಳಿದ್ದರು. ಇದು ಧೋನಿಗೆ ಇಷ್ಟವಾಗಿತ್ತು. ಇದೇ ವಿಚಾರದ ಮೇಲೆ ಸಿನಿಮಾ ಮಾಡಿದ್ದೇವೆ. ಫ್ಯಾಮಿಲಿ ಎಂಟರ್​ಟೇನ್​ಮೆಂಟ್ ಮಾದರಿಯಲ್ಲಿ ಈ ಸಿನಿಮಾ ಮೂಡಿ ಬರಲಿದೆ’ ಎಂದು ರಮೇಶ್ ಅವರು ಈ ಮೊದಲು ಮಾಹಿತಿ ಹಂಚಿಕೊಂಡಿದ್ದರು.  ಚಿತ್ರದ ಟೈಟಲ್ ಅನ್ನು ಕಳೆದ ಜನವರಿಯಲ್ಲಿ ರಿಲೀಸ್ ಮಾಡಲಾಗಿತ್ತು. ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ವ್ಯಾನ್ ಒಂದು ಸಾಗುವ ರೀತಿಯಲ್ಲಿ ಗ್ರಾಫಿಕ್ಸ್ ಮಾಡಿರುವುದನ್ನು ತೋರಿಸಲಾಗಿತ್ತು.  ಈಗ ಟೀಸರ್​ ಬಿಡುಗಡೆಯಾಗಿದೆ. 

 ಪ್ರಭಾಸ್​, ಕೃತಿ ಫ್ಯಾನ್ಸ್​ಗೆ ಬಂಪರ್​: ಆದಿಪುರುಷ್​ ಚಿತ್ರಕ್ಕೆ 10 ಸಾವಿರ ಉಚಿತ ಟಿಕೆಟ್​

ಅಂದಹಾಗೆ ತಮಿಳಿನಲ್ಲಿ ಧೋನಿ ಚಿತ್ರ ನಿರ್ಮಿಸಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಎಂ.ಎಸ್​ ಧೋನಿ ಅವರಿಗೂ ತಮಿಳುನಾಡಿಗೂ ಉತ್ತಮ ನಂಟಿದೆ. ಇದಕ್ಕೆ ಕಾರಣ ಐಪಿಎಲ್. ಧೋನಿ ಅವರು ಈ ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ (Channai Super kings) ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ದೋನಿ ಅವರ 'ಧೋನಿ ಎಂಟರ್‌ಟೈನ್‌ಮೆಂಟ್' ಹೆಸರಿನ ನಿರ್ಮಾಣ ಸಂಸ್ಥೆಯು  ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಬ್ಬರ ಒಡೆತನದಲ್ಲಿದೆ. ಪ್ರೊಡಕ್ಷನ್ ಹೌಸ್ 'ರೋರ್ ಆಫ್ ದಿ ಲಯನ್', 'ಬ್ಲೇಜ್ ಟು ಗ್ಲೋರಿ' ಮತ್ತು 'ದಿ ಹಿಡನ್ ಹಿಂದೂ' ನಂತಹ ಸಣ್ಣ-ಪ್ರಮಾಣದ ಚಲನಚಿತ್ರಗಳನ್ನು ನಿರ್ಮಿಸಿದೆ. ಇದೀಗ ತಮಿಳು ಹಾಸ್ಯ ಚಿತ್ರಕ್ಕೆ ಕೈ ಹಾಕಿದೆ. 

‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಈ ಟೀಸರ್ ಫ್ಯಾಮಿಲಿ ಎಂಟರ್​ಟೇನರ್ ರೀತಿಯಲ್ಲಿ ಮೂಡಿಬರಲಿದೆ ಎಂಬುದು  ಟೀಸರ್ ನೋಡಿದರೆ ತಿಳಿದುಬರುತ್ತಿದೆ.   ರಮೇಶ್ ತಮಿಳ್​ಮಣಿ ಅವರು ಚಿತ್ರವನ್ನು ನಿರ್ದೇಶನ ಮಾಡಿದರೆ, ಸಾಕ್ಷಿ ಸಿಂಗ್ ಧೋನಿ (Sakshi Singh Dhoni) ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಮಿಳು ಸಿನಿಮಾ ಮಾತ್ರವಲ್ಲದೆ ಇನ್ನೂ ಹಲವು ನಿರ್ದೇಶಕರ ಜತೆ ಧೋನಿ ಮಾತುಕತೆಯಲ್ಲಿ ಇದ್ದಾರೆ. ಧೋನಿಗೆ ಈ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ. ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಬಳಿಕ ಅವರು ಈ ಬಗ್ಗೆ ಗಮನಹರಿಸುತ್ತಿದ್ದಾರೆ. ಮೂಲಗಳ ಪ್ರಕಾರ ವೆಬ್​ ಸೀರಿಸ್​ಗಳನ್ನು ನಿರ್ಮಾಣ ಮಾಡುವತ್ತವೂ ಧೋನಿ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. 

ಚಪ್ಪಲಿ ಬಿಟ್ಟು ಫ್ಯಾನ್ಸ್​ ಮೀಟ್ ಆದ ಬಿಗ್ ಬಿ ಕಾರಣವೂ ಹೇಳಿದ್ದಾರೆ!

 

Latest Videos
Follow Us:
Download App:
  • android
  • ios