ರಮ್ಯಾಕೃಷ್ಣ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಸಬರಲ್ಲ. ನಲವತ್ತೊಂಭತ್ತು ವರ್ಷ ವಯಸ್ಸಿನ ಈ ನಟಿ ತೆಲುಗು, ತಮಿಳು, ಕನ್ನಡ, ಮಲೆಯಾಳ, ಹಿಂದಿ ಚಿತ್ರಗಳಲ್ಲಿ ನಟಿಸಿ ಪಂಚಭಾಷಾ ತಾರೆ ಅನಿಸಿಕೊಂಡವರು. ೧೯೮೪ರಿಂದಲೇ ತಾವು ಹದಿನಾಲ್ಕು ವರ್ಷದವರಿದ್ದಾಗಲೇ ಸಿನಿಮಾ ಜಗತ್ತಿಗೆ ಎಂಟ್ರಿಕೊಟ್ಟವರು. ಇವರ ಮಾವ ಪ್ರಸಿದ್ಧ ಕಾಮಿಡಿ ಆಕ್ಟರ್ ಚೊ ರಾಮಸ್ವಾಮಿ. ಭರತನಾಟ್ಯ, ಕೂಚುಪುಡಿ ಡ್ಯಾನ್ಸರ್ ಆಗಿ ಅನೇಕ ಸ್ಟೇಜ್ ಶೋ ಗಳನ್ನು ನೀಡಿದ ರಮ್ಯಾ ಅವರ ಸಿನಿಮಾ ಬದುಕಿನ ಆರಂಭದ ದಿನಗಳು ಬಹಳ ಕಷ್ಟದಿಂದ ಕೂಡಿದ್ದವು. ಮಹಾನ್ ಪ್ರತಿಭಾವಂತೆಯಾದರೂ ಸರಿಯಾದ ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಕಮಲಹಾಸನ್, ರಜನೀಕಾಂತ್ ರಂಥಾ ನಟರ ಜೊತೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಮುನ್ನೆಲೆಗೆ ಬರೋದು ಸಾಧ್ಯವಾಗಲಿಲ್ಲ. ಆಮೇಲಾಮೇಲೆ ಈಕೆಯ ಪ್ರತಿಭೆ ತಿಳಿದು ಉತ್ತಮ ಪಾತ್ರಗಳು ಸಿಗಲಾರಂಭಿಸಿದವು. ಈಕೆಯ ನಟನೆಗೆ ರಾಷ್ಟ್ರಪ್ರಶಸ್ತಿಯೂ ಬಂತು.

ಕನ್ನಡದಲ್ಲಿ ವಿಷ್ಣವರ್ಧನ್ ಜೊತೆಗೆ ಕೃಷ್ಣ ರುಕ್ಮಿಣಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಗಡಿಬಿಡಿ ಗಂಡ, ಮಾಂಗಲ್ಯಂ ತಂತು ನಾನೇನ, ಏಕಾಂಗಿ ಇತ್ಯಾದಿ ಸಿನಿಮಾಗಳಲ್ಲಿ ನಟಿಸಿದರು. ಉಪೇಂದ್ರ ಜೊತೆಗೆ 'ರಕ್ತ ಕಣ್ಣೀರು' ಸಿನಿಮಾದಲ್ಲಿ 'ಬಾ ಬಾರೋ ರಸಿಕ..' ಎಂದು ಮಾದಕವಾಗಿ ಹಾಡಿ ಸಿನಿಮಾ ರಸಿಕರ ಎದೆ ಬೆಚ್ಚಗಾಗಿಸಿದರು.

ಆದರೆ ಈಗ ರಮ್ಯಾಕೃಷ್ಣ ಅಂದರೆ ಶಿವಗಾಮಿದೇವಿ ಅನ್ನುವ ಹಾಗಾಗಿದೆ. 'ಬಾಹುಬಲಿ' ಚಿತ್ರ ಶಿವಗಾಮಿದೇವಿ ಪಾತ್ರ ಅವರಿಗೆ ಆ ಮಟ್ಟದ ಯಶಸ್ಸು ತಂದುಕೊಟ್ಟಿತು. ಆ ಬಳಿಕ ಇವರ ರೇಟಿಂಗ್ ಹೆಚ್ಚಾಗುತ್ತಲೇ ಹೋಯ್ತು. ಇವರ ಅಭಿನಯಕ್ಕೆ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ ತಲೆಬಾಗಿತು. ಪ್ರಾಯ ಐವತ್ತು ಸಮೀಪದಲ್ಲಿದ್ದರೂ ಈಕೆಯ ಚೆಲುವಿಗೇನೂ ಕುಂದಾದ ಹಾಗಿಲ್ಲ. ಕಳೆದ ವರ್ಷ ಮಾದಕ ಉಡುಗೆಗಳಲ್ಲಿ ಈಕೆ ಫೋಟೋಶೂಟ್ ಮಾಡಿಸಿಕೊಂಡಾಗ ಈಕೆ ಹೀರೋಯಿನ್ ಪಾತ್ರಕ್ಕೂ ಬೆಸ್ಟ್ ಅಂದವರು ಬಹಳ ಮಂದಿ.

ಇಂಥಾ ನಟಿ ಈಗ ಸ್ಟೇಶನ್‌ನಲ್ಲಿ ಪೊಲೀಸರಿಂದ ಪಾಠ ಹೇಳಿಸಿಕೊಂಡು ತಂಗಿಯ ಜೊತೆಗೆ ಮನೆಗೆ ಬಂದಿದ್ದಾರೆ. ಕಾರಣ ಕೇಳಿದರೆ ನೀವು ದಂಗಾಗುತ್ತೀರ!

ಶಾರುಖ್‌ ಪಿಗ್ಗಿ ಅಫೇರ್‌ ವಿಷಯ ಕೇಳಿದಾಗ ಗೌರಿ ಮಾಡಿದ್ದೇನು? ...

ನಟಿ ರಮ್ಯಾಕೃಷ್ಣ ತಂಗಿ ವಿನಯಕೃಷ್ಣ ಜೊತೆಗೆ ಮಮ್ಮಲಪುರಂನಿಂದ ಚೆನ್ನೈಗೆ ಬರುತ್ತಿದ್ದರು. ಲಾಕ್‌ಡೌನ್‌ ಆದ ಕಾರಣ ಚೆಕ್‌ ಪೋಸ್ಟ್‌ ನಲ್ಲಿ ಪೊಲೀಸರು ಕಾರು ನಿಲ್ಲಿಸಿ ಚೆಕ್ ಮಾಡಿದ್ದಾರೆ. ತಮಿಳ್ನಾಡಿನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಇದ್ದರೂ, ಚೆನ್ನೈನಲ್ಲಿ ಆಲ್ಕೊಹಾಲ್ ಸೇಲ್‌ ಬ್ಯಾನ್ ಆಗಿತ್ತು. ಹೀಗಾಗಿ ಪೊಲೀಸರು ಹೊರಗಿನಿಂದ ಬರುವವರ ಕಾರ್‌ ಗಳಲ್ಲಿ ಮದ್ಯದ ಬಾಟಲ್‌ಗಳಿವೆಯಾ ಅಂತ ಚೆಕ್‌ ಮಾಡುತ್ತಿದ್ದರು. ಆ ಟೈಮ್‌ನಲ್ಲಿ ನಟಿ ರಮ್ಯಾಕೃಷ್ಣ ರೆಡ್‌ಹ್ಯಾಂಡ್‌ ಆಗಿ ಸಿಕ್ಕಾಕಿಕೊಂಡಿದ್ದಾರೆ. ಒಂದೆರಡಲ್ಲ, ಸುಮಾರು ೧೦೪ ಲಿಕ್ಕರ್ ಬಾಟಲ್‌ಗಳು ಇವರ ಕಾರಲ್ಲಿ ಪತ್ತೆಯಾಗಿದೆ.

ಪ್ರಿಯಾಂಕ ಚೋಪ್ರಾ ಕಪ್ಪೆಂದು ಬಂಧುಗಳೇ ಹೀಯಾಳಿಸಿದ್ದರು! ...

ಕೂಡಲೇ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಈ ನಟಿಯನ್ನು ಪ್ರಶ್ನಿಸಿದ್ದಾರೆ, ಚೆನ್ನಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಆಮೇಲೆ ಬೇಲ್ ಮೇಲೆ ಎಲ್ಲರೂ ಹೊರಬಂದು ಮನೆ ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ. ಜೂ.೧೧ಕ್ಕೆ ಪ್ರಕರಣ ದಾಖಲಾಗಿದ್ದರೂ ತುಸು ತಡವಾಗಿ ಸುದ್ದಿ ಹೊರಬಿದ್ದಿದೆ. ಸ್ಥಳೀಯ ಮೀಡಿಯಾಗಳಲ್ಲಿ ರಮ್ಯಾಕೃಷ್ಣ ಬಗ್ಗೆ ಟ್ರೋಲ್‌ಗಳು ಹೆಚ್ಚಾಗುತ್ತಿವೆ. ಶಿವಗಾಮಿ ದೇವಿ ಈ ಪರಿ ಎಣ್ಣೆ ಹೊಡೀತಾರಾ ಅಂತೆಲ್ಲ ನೆಟಿಜನ್ಸ್ ಪ್ರಶ್ನೆ ಮಾಡೋದಕ್ಕೆ ಶುರು ಮಾಡಿದ್ದಾರೆ.

ಖ್ಯಾತ ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ನಟ ವಿನಾಯಕ್ ಜೋಶಿ ಮದುವೆ ಫಿಕ್ಸ್ ! ...