ನಟ ಸಿದ್ಧಾರ್ಥ್ ಬದುಕಿದರೂ ನಿಧನ ಎಂದು ಪ್ರಕಟ ಮಾಡಿದ ಯುಟ್ಯೂಬ್ ಚಾನೆಲ್ ವಿರುದ್ಧ ದೂರು ದಾಖಲು.
ತಮಿಳು ಚಿತ್ರರಂಗ ಕಂಡಂತ ಅದ್ಭುತ ಕಲಾವಿದ, ಸ್ಟೈಲಿಶ್ ಮ್ಯಾನ್ ಸಿದ್ಧಾರ್ಥ್ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದನ್ನು ಯುಟ್ಯೂಬ್ ಚಾನೆಲ್‌ವೊಂದು ಪ್ರಕಟಿಸಿದ್ದು, ವಿಡಿಯೋ ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟನ ಗಮನಕ್ಕೂ ಬಂದಿರುವ ಕಾರಣ ಯುಟ್ಯೂಬ್ ಚಾನೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.
'ಅತಿ ಕಿಚ್ಚ ವಯಸ್ಸಿಗೆ ಪ್ರಾಣ ಕಳೆದುಕೊಂಡವರು,' ಎಂದು ಶೀರ್ಷಿಕೆ ನೀಡಿ ಚಿತ್ರರಂಗವನ್ನು ಚಿಕ್ಕ ವಯಸ್ಸಿಗೆ ಅಗಲಿದೆ ನಟ-ನಟಿಯರು ಫೋಟೋ ಹಾಗೂ ಅವರ ಮಾಹಿತಿ ಹೊಂದಿರುವ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ನಟಿ ಸೌಂದರ್ಯ ಮತ್ತು ಆರತಿ ಅಗರ್‌ವಾಲ್ ಫೋಟೋ ನಡುವೆ ಸಿದ್ಧಾರ್ಥ್ ಫೋಟೋ ಕೂಡ ಹಾಕಲಾಗಿದ್ದು. ಜುಲೈ 18 ದಕ್ಷಿಣ ಭಾರತೀಯ ನಟಿ ಸೌಂದರ್ಯ ನಿಧನರಾದ ದಿನ, ಈ ಹಿನ್ನೆಲೆಯಲ್ಲಿ '10 ಡಿಗ್ರಿ ಇಂಡಿಯನ್ ಫ್ರೆಂಡ್ಸ್' ಎಂಬ ಚಾನೆಲ್ ಕಿರಿಯ ವಯಸ್ಸಿನಲ್ಲಿಯೇ ನಿಧನರಾದ ಸುದ್ದಿಯೊಂದನ್ನು ಪೋಸ್ಟ್ ಮಾಡಿತ್ತು.
ತೆರೆಗೆ ಬರಲಿದೆ ರಾಹುಲ್ ದ್ರಾವಿಡ್ ಬಯೋಪಿಕ್!
'ನಾನು ಯುಟ್ಯೂಬ್ ವಿಡಿಯೋ ಗಮನಿಸಿ, ಅವರನ್ನು ಸಂಪರ್ಕಿಸಿದೆ. ನಾನು ಹಲವು ವರ್ಷಗಳ ಹಿಂದೆಯೇ ಸತ್ತಿರುವೆ ಎಂದು ತೋರಿಸುತ್ತಿದೆ ಈ ವೀಡಿಯೋ. ಆದರೆ, ಸಂಬಂಧಿಸಿದ ಚಾನೆಲ್ ಮಾಲೀಕರೂ ಕ್ಷಮಿಸಿ ಈ ವಿಡಿಯೋದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಅನಿಸುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ನನ್ನ ಮನಸ್ಸಿನಲ್ಲಿ ಅಡಾ ಪಾವಿ ಎಂದುಕೊಂಡೆ,' ಎಂದು ಸಿದ್ಧಾರ್ಥ್ ಟ್ಟೀಟ್ ಮಾಡಿದ್ದಾರೆ.
ಭಾರತದ ಲೆಜೆಂಡರಿ ಕ್ರಿಕೆಟರ್ ರಾಹುಲ್ ಡ್ರಾವಿಡ್ ಬಯೋಪಿಕ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ನಟ ಸಿದ್ಧಾರ್ಥ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಜಯ್ ಭೂಪತಿ ನಿರ್ದೇಶನಲ್ಲಿ ತಯರಾಗುತ್ತಿರುವ 'ಮಹಾ ಸಮುದ್ರಂ' ಚಿತ್ರದಲ್ಲಿ ಸಿದ್ಧಾರ್ಥ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಅವರ 'ನವರಸ' ನೆಟ್‌ಫ್ಲೆಕ್ಸ್‌ನಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ.
