ಸದ್ಯ ಹಲವೆಡೆ ಲಾಕ್‌ಡೌನ್ ತೆರವಾಗುತ್ತಿದ್ದು ಎಲ್ಲಾ ಕೆಲಸ ಕಾರ್ಯಗಳು ಮೊದಲಿನಂತೆ ಆರಂಭ ಸಿನಿಮಾ ಇಂಡಸ್ಟ್ರಿಯ ಹಲವು ಕೆಲಸ ಕಾರ್ಯಗಳು ಮತ್ತೆ ಶುರು ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಕೆಲಸಗಳು ಮುಂದುವರಿಕೆ

ಸದ್ಯ ಹಲವೆಡೆ ಲಾಕ್‌ಡೌನ್ ತೆರವಾಗುತ್ತಿದ್ದು ಎಲ್ಲಾ ಕೆಲಸ ಕಾರ್ಯಗಳು ಮೊದಲಿನಂತೆ ನಿಧಾನವಾಗಿ ಆರಂಭವಾಗುತ್ತಿವೆ. ಇತ್ತ ಸಿನಿಮಾ ಇಂಡಸ್ಟ್ರಿಯ ಹಲವು ಕೆಲಸ ಕಾರ್ಯಗಳು ಮತ್ತೆ ಶುರುವಾಗಿವೆ.

ಸದ್ದಿಲ್ಲದೆ ದಾಖಲೆ ಮೇಲೆ ದಾಖಲೆ ಸೃಷ್ಟಿಸುತ್ತಿರೋ ನಟ ಯಶ್! ..

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ, ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಕೆಲಸಗಳು ಮುಂದುವರಿದಿದೆ. 

ಪ್ರಮುಖ ಪಾತ್ರಧಾರಿಯಾದ ಮಾಳವಿಕಾ ಅವಿನಾಶ್ ಡಬ್ಬಿಂಗ್‌ನಲ್ಲಿ ಪಾಲ್ಗೊಂಡಿದ್ದಲ್ಲದೇ, ಡಬ್ಬಿಂಗ್ -ಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
50 ದಿನಗಳ ನಂತರ ಕೆಲಸಕ್ಕೆ ಮರಳಿದ್ದೇನೆ ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ.