ಧರ್ಮೇಂದ್ರ ಜೊತೆಗಿನ ಆ ದಿನಗಳ ನೆನೆದ ಜಯಾ! ಈ ವಯಸ್ಸಲ್ಲೂ ಅಮಿತಾಭ್ ಪತ್ನಿಗೆ ಇದೆಂಥ ಆಸೆ ನೋಡಿ...
ವಯಸ್ಸು 76 ಆದರೂ ಮೊದಲ ಕ್ರಷ್ ಧರ್ಮೇಂದ್ರರನ್ನು ಮರೆಯದ ಜಯಾ ಬಚ್ಚನ್! ಹೇಮಾ ಮಾಲಿನಿ ಎದುರೇ ಆ ದಿನಗಳ ಮೆಲುಕು ಹಾಕಿದ್ದಾರೆ ನೋಡಿ...
ವಯಸ್ಸು ಎಷ್ಟಾದರೇನು? ಮೊದಲ ಪ್ರೇಮವನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಅದೇ ರೀತಿ ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಅವರಿಗೂ ಆದಂತಿದೆ. ಕಾಫಿ ವಿತ್ ಕರಣ್ ಷೋನ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಜಯಾ ಬಚ್ಚನ್ ತಮಗೆ ಧರ್ಮೇಂದ್ರ ಮೇಲೆ ಇದ್ದ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಪಕ್ಕದಲ್ಲಿಯೇ ಧರ್ಮೇಂದ್ರ ಪತ್ನಿ ಹೇಮಾ ಮಾಲಿನಿ ಇದ್ದರೂ, ಧರ್ಮೇಂದ್ರ ಅವರ ಹೆಸರು ಹೇಳುತ್ತಿದ್ದಂತೆಯೇ ಜಯಾ ಅವರ ಕಣ್ಣಲ್ಲಿ ಹೊಳಪು ಕಾಣಬಹುದು. ಬಸಂತಿ ಪಾತ್ರವನ್ನು ಹೇಮಾ ಮಾಲಿನಿ ಬದ್ಲು ನಾನು ಮಾಡಬೇಕಿತ್ತು. ಏಕೆಂದ್ರೆ, ಧರ್ಮೇಂದ್ರ ಎಂದ್ರೆ ನನಗೆ ಸಿಕ್ಕಾಪಟ್ಟೆ ಪ್ರೀತಿ ಎಂದು ನಟನನ್ನು ಜಯಾ ವರ್ಣಿಸಿದ್ದಾರೆ. ಮೊದಲು ಅವರನ್ನು ಭೇಟಿಯಾದ ದಿನ ಇನ್ನೂ ನೆನಪಿದೆ. ಆ ದಿನ ಬಿಳಿಯ ಬಣ್ಣದ ಡ್ರೆಸ್ ಹಾಕಿಕೊಂಡಿದ್ದರು ಎನ್ನುತ್ತಲೇ ಹಳೆಯ ಪ್ರೇಮಿಯನ್ನು ನೆನಪಿಸಿಕೊಂಡಂತೆ ಧರ್ಮೇಂದ್ರ ಅವರನ್ನು ನೆನಪಿಸಿಕೊಂಡಿದ್ದಾರೆ.
ಪಕ್ಕದಲ್ಲಿಯೇ ಇದ್ದ ಹೇಮಾ ಮಾಲಿನಿ ಮುಖ ಸ್ವಲ್ಪ ಸಪ್ಪಗಾದ ಹಾಗೆ ಸ್ಪಷ್ಟವಾಗಿ ಈ ವಿಡಿಯೋದಲ್ಲಿ ನೋಡಬಹುದು. ಮೇಲ್ನೋಟಕ್ಕೆ ಹೇಮಾ ನಗುತ್ತಿದ್ದರೂ, ತಮ್ಮ ಪತಿಯನ್ನು ಈ ವಯಸ್ಸಿನಲ್ಲಿ ಈ ಪರಿ ಗುಣಗಾನ ಮಾಡುತ್ತಿರುವ ಜಯಾರನ್ನು ಕಂಡು ಹೇಮಾಗೆ ಅಸೂಯೆ ಆದಂತೆಯೂ ಇದರಲ್ಲಿ ಗೋಚರಿಸುತ್ತಿದೆ. ಅಷ್ಟಕ್ಕೂ ಈ ಹಿಂದೆಯೇ ಧರ್ಮೇಂದ್ರ ಅವರು ಜಯಾ ಅವರಿಗೆ ತಮ್ಮ ಮೇಲೆ ಕ್ರಷ್ ಇರುವ ವಿಷಯವನ್ನು ಬಹಿರಂಗಪಡಿಸಿದ್ದರು. ಅಂದಹಾಗೆ ಹಾಗೆ, ಕಳೆದ ವರ್ಷ ಬಿಡುಗಡೆಯಾದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' (Rocky Aur Rani Kii Prem Kahani) ಚಿತ್ರದಲ್ಲಿ ಧರ್ಮೇಂದ್ರ ಮತ್ತು ಜಯಾ ಜೊತೆಯಾಗಿ ನಟಿಸಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತಾಭ್ ಬಚ್ಚನ್ ಹೆಸರು ಹೇಳಿ ಪೇಚಿಗೆ ಸಿಲುಕಿದ ಜಯಾ: ಬಿದ್ದೂ ಬಿದ್ದೂ ನಕ್ಕ ಸ್ಪೀಕರ್!
ಈ ಸಮಯದಲ್ಲಿ ನಡೆದ ಸಂದರ್ಶನಲ್ಲಿ, ತಮ್ಮ ಮೇಲೆ ಜಯಾ ಅವರಿಗೆ ಸಕತ್ ಕ್ರಶ್ ಇತ್ತು ಎನ್ನುವುದನ್ನು ಬಹಿರಂಗಪಡಿಸಿದ್ದರು. ಏನಾಗಬೇಕೋ ಅದೇ ಆಗುತ್ತದೆ, ಸರಿಯಾದ ಸಮಯಕ್ಕೂ ಆಗುತ್ತದೆ ಎನ್ನುವಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಏನು ಆಗಿದೆಯೋ ಎಲ್ಲವೂ ಒಳ್ಳೆಯದ್ದಕ್ಕೇ ಆಗಿದೆ. ಆದರೆ ಆ ಸಮಯದಲ್ಲಿ ಮಾತ್ರ ಜಯಾ ಅವರಿಗೆ ನನ್ನ ಮೇಲೆ ಮೇಲೆ ಸಕತ್ ಕ್ರಷ್ ಇದದ್ದು ನಿಜ ಎಂದಿದ್ದರು. 70ರ ದಶಕದಲ್ಲಿ ನಡೆದ ಘಟನೆಯನ್ನು ಅವರು ವಿವರಿಸಿದ್ದರು. ಗುಡ್ಡಿ ಚಿತ್ರದ ಚಿತ್ರೀಕರಣದ ವೇಳೆ ನಡೆದ ಕ್ರಷ್ (Crush) ವಿಷಯವನ್ನು ಧರ್ಮೇಂದ್ರ ಹೇಳಿದ್ದರು. 1971ರಲ್ಲಿ ಬಿಡುಗಡೆಗೊಂಡ ಗುಡ್ಡಿ ಚಿತ್ರವಿದು. ಇದರಲ್ಲಿ ಜಯಾ ಬಚ್ಚನ್ ಮತ್ತು ಧರ್ಮೇಂದ್ರ ಒಟ್ಟಾಗಿ ನಟಿಸಿದ್ದರು. ಅಸಲಿಗೆ ಇದು ಜಯಾ ಅವರ ಚೊಚ್ಚಲ ಚಿತ್ರ ಕೂಡ. ಇದರಲ್ಲಿ ಜಯಾ ಬಚ್ಚನ್ ಶಾಲಾ ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡಿರೋ ಧರ್ಮೇಂದ್ರ ಅವರು, ಗುಡ್ಡಿ ದಿನಗಳಲ್ಲಿ ಜಯಾ ಬಚ್ಚನ್ ಅವರ ಕ್ರಶ್ ಕುರಿತು ಮಾತನಾಡಿದ್ದರು.
ಗುಡ್ಡಿಯ ಹೊರತಾಗಿ, ಧರ್ಮೇಂದ್ರ (Dharmendra) ಮತ್ತು ಜಯಾ ಇಬ್ಬರೂ ಚುಪ್ಕೆ ಚುಪ್ಕೆ (1975), ಶೋಲೆ (1975), ಮತ್ತು ಸಮಾಧಿ (1972) ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಜಯಾ ಅವರ ಮೊದಲ ಚಿತ್ರದಲ್ಲಿಯೇ ವ್ಯಾಮೋಹ ಹುಟ್ಟಿದ್ದನ್ನು ಹೇಳಿದ್ದರು. ಜಯಾ ಅವರು ಶೂಟಿಂಗ್ ಸೆಟ್ನಲ್ಲಿ ನನ್ನನ್ನು ನೋಡಿದ ಕೂಡಲೇ ಸೋಫಾದ ಹಿಂದೆ ಅಡಗಿಕೊಂಡು ಬಿಡುತ್ತಿದ್ದರು. ಆ ದಿನಗಳನ್ನು ನೆನಪಿಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ ಎಂದಿದ್ದರು. ನಾನು ಜಯಾ ಮತ್ತು ಅಮಿತಾಭ್ ಅವರನ್ನು ಬಹಳ ಸಮಯದಿಂದ ಬಲ್ಲೆ. ಶೋಲೆ ಚಿತ್ರೀಕರಣದ ಸಮಯದಲ್ಲಿ ನಾವು ಅನುಭವಿಸಿದ ಮೋಜಿನ ಸಮಯಗಳನ್ನು ನೆನಪಿಸಿಕೊಳ್ಳುವುದೇ ಒಂದು ರೀತಿಯ ಖುಷಿ ಕೊಡುತ್ತದೆ. ಅದು ಸುವರ್ಣ ದಿನಗಳು ಎಂದಿದ್ದರು ಧರ್ಮೇಂದ್ರ. ಈಗಲೂ ಜಯಾ ಅವರಿಗೆ ಅದೇ ರೀತಿ ಕ್ರಷ್ ಇರುವುದು ತಿಳಿಯುತ್ತದೆ. ಅಂದಹಾಗೆ ಧರ್ಮೇಂದ್ರ ಅವರಿಗೆ ಈಗ 88 ವರ್ಷ ವಯಸ್ಸು. ಜಯಾ ಬಚ್ಚನ್ಗೆ 76 ವರ್ಷ ವಯಸ್ಸಾದರೆ, ಹೇಮಾ ಮಾಲಿನಿಗೆ 75 ಹಾಗೂ ಅಮಿತಾಭ್ಗೆ 81 ವರ್ಷ ವಯಸ್ಸು.
ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!