ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್ ತಮ್ಮ ಮುದ್ದು ಮಗ ಅಗಸ್ತ್ಯನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಮುದ್ದಾಗಿ ನಗುವ ಫೋಟೋ, ಬಾತ್‌ಟೈಂ ಫೋಟೋಗಳನ್ನು ಶೇರ್ ಮಾಡುವುದನ್ನು ಈ ಜೋಡಿ ಮಿಸ್ ಮಾಡುವುದೇ ಇಲ್ಲ.

ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗ ಅಗಸ್ತ್ಯನ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದು ನನ್ನ ಮಗನ ಮೊದಲ ವಿಮಾನ ಪ್ರಯಾಣದ ಫೊಟೋ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ಹಾರ್ದಿಕ್ ಪಾಂಡ್ಯಾ.

ಮಗನ ಐದನೇ ತಿಂಗಳ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ ಹಾರ್ದಿಕ್ ಪಾಂಡ್ಯ!

ವಿಮಾನದಲ್ಲಿ ಅಪ್ಪನ ಮಡಿಲಲ್ಲಿ ಕುಳಿತು ಮುದ್ದಾಗಿ ನಗುವ ಅಗಸ್ತ್ಯನನ್ನು ಫೊಟೋದಲ್ಲಿ ನೋಡಬಹುದು. ಹಾರ್ದಿಕ್ ಪಾಂಡ್ಯಾ ನೀಲಿ ಬಣ್ಣದ ಟೀಶರ್ಟ್ ಧರಿಸಿದ್ದರೆ ಟ್ರಾಕ್ ಪ್ಯಾಂಟ್‌ಗೆ ಮ್ಯಾಚ್ ಮಾಡಿಕೊಂಡಿದ್ದರು.

ಅಗಸ್ತ್ಯ ಬೂದಿ ಬಣ್ಣದ ವಿಂಟರ್ ಜಾಕೆಟ್ ಧರಿಸಿದ್ದ. ತಂದೆ ಮಗ ಇಬ್ಬರೂ ಕ್ಯಾಮೆರಾ ನೋಡಿ ಸ್ಮೈಲ್ ಕೊಟ್ಟಿದ್ದಾರೆ. ಅಗಸ್ತ್ಯ ಎಷ್ಟ್ಯ ಕಾನ್ಫಿಡೆನ್ಸ್ ಕಾಣಿಸ್ತಾನಂದ್ರೆ ತಾನೇ ವಿಮಾನ ಹಾರಿಸುವಷ್ಟು ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ ಕೊಮೆಡಿಯನ್ ಸುನಿಲ್ ಗ್ರೋವರ್.