ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ರಾನು ಮೊಂಡಾಲ್ ಗರಂ; ಸೆಲಬ್ರಿಟಿ ಹುಚ್ಚು ತಲೆಗೇರಿದ್ಯಾ?
ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ರಾನು ಮೊಂಡಾಲ್ ಗರಂ | ರಾನು ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ | ಸೆಲಬ್ರಿಟಿ Attitude ತಲೆಗೇರಿದೆ? ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಕಲ್ಕತ್ತಾ ರೈಲ್ವೇ ಸ್ಟೇಷನ್ ನಲ್ಲಿ 'ಏಕ್ ಪ್ಯಾರ್ ಕ ನಗ್ಮಾ ಹೇ' ಹಾಡಿನ ಮೂಲಕ ರಾತ್ರೋರಾತ್ರಿ ಮನೆ ಮಾತಾದವರು ರಾನು ಮೊಂಡಾಲ್. ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು.
ರಾನು ಮೊಂಡಾಲ್ ಪ್ರತಿಭೆ ನೋಡಿ ಹಿಮೇಶ್ ರೇಶಮಿಯಾ ತಮ್ಮ ಸಿನಿಮಾಗಳಲ್ಲಿ ಅವಕಾಶಗಳನ್ನು ಕೊಟ್ಟು ಇನ್ನಷ್ಟು ಬೆಂಬಲ ನೀಡಿದರು. ಅಲ್ಲಿಯವರೆಗೆ ರಾನು ಯಾರು ಎಂದು ಗೊತ್ತಿಲ್ಲದಿದ್ದವರು ಇದ್ದಕ್ಕಿದ್ದಂತೆ ಸೆನ್ಸೇಶನ್ ಆದರು. ಸೋಷಿಯಲ್ ಮೀಡಿಯಾದಲ್ಲಿ ಇವರ ಹಾಡು ಹರಿದಾಡಲು ಶುರುವಾಯಿತು. ರಿಯಾಲಿಟಿ ಶೋಗಳಿಗೂ ಬರುತ್ತಾರೆ.
ರಾನು ಮೊಂಡಾಲ್ ಹೊರಗೆ ಹೋಗಿದ್ದಾಗ ಅಭಿಮಾನಿಯೊಬ್ಬರು ಭುಜ ಮುಟ್ಟಿ ಮಾತನಾಡಿಸಿ ಸೆಲ್ಫಿ ತೆಗೆದುಕೊಳ್ಳೋಣ ಎಂದು ಕೇಳಿಕೊಂಡರು. ಇದರಿಂದ ಅಸಮಾಧಾನಗೊಂಡ ರಾನು ಸಿಟ್ಟಿನಿಂದ ಏನು? ಎಂದು ಕೇಳುತ್ತಾರೆ. ಅಭಿಮಾನಿ ಮೈ ಮುಟ್ಟಿ ಮಾತಾಡಿದ್ದು ರಾನುಗೆ ಇಷ್ಟವಾದಂತೆ ಕಾಣಿಸಿಲ್ಲ.
ಸಾರ್ವಜನಿಕವಾಗಿ ಓಡಾಡುವಾಗ ಈ ರೀತಿ ಸೆಲ್ಫಿ ತೆಗೆಸಿಕೊಳ್ಳುವುದು, ಮಾತನಾಡುವುದು ಸಹಜ. ಇದರಿಂದ ಸ್ವಲ್ಪ ಕಿರಿಕಿರಿಯಾಗಿ ಅಭಿಮಾನಿಗೆ ಆ ರೀತಿ ಹೇಳಿರುವ ಸಾಧ್ಯತೆ ಇದೆ.
ಆದರೆ ಸೋಷಿಯಲ್ ಮೀಡಿಯಾದಲ್ಲಿ ಬೇರೆ ರೀತಿಯಲ್ಲೇ ಚರ್ಚೆಯಾಗುತ್ತಿದೆ. ರಾನು ಮೊಂಡಾಲ್ ಫೇಮಸ್ ಆಗಲು ಕಾರಣ ಅವರಿಗೆ ಬೆಂಬಲ ನೀಡಿದ ಜನ. ಜನರ ಬೆಂಬಲದಿಂದಲೇ ರಾನು ಸ್ಟಾರ್ ಆಗಲು ಸಾಧ್ಯವಾಯಿತು. ಯಶಸ್ಸು ಸಿಕ್ಕ ತಕ್ಷಣ ಬೆಳೆದು ಬಂದ ಹಾದಿಯನ್ನು ಮರೆಯುವುದು ಸರಿಯಲ್ಲ. ಸೆಲ್ಫಿ ಕೇಳಲು ಅಭಿಮಾನಿ ಭುಜ ಮುಟ್ಟಿದಾಕ್ಷಣ ತಾನೊಬ್ಬ ಸೆಲಬ್ರಿಟಿ ಅನ್ನುವ ಹಾಗೆ ವರ್ತಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗುತ್ತಿದೆ.