Asianet Suvarna News Asianet Suvarna News

15 ದಿನದಿಂದ ಹೊಂಚು ಹಾಕಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದವರನ್ನು ಹಿಡಿದ ಎನ್‌ಸಿಬಿ!

* ಪ್ರಯಾಣಿಕರ ವೇಷದಲ್ಲಿ ಹಡಗು ಹತ್ತಿದ್ದ ಪೊಲೀಸರು

* 15 ದಿನದಿಂದ ಹೊಂಚು ಹಾಕಿ ಹಿಡಿದ ಎನ್‌ಸಿಬಿ

Drugs Party in Ship NCB Planned Drug Bust Over 15 days pod
Author
Bangalore, First Published Oct 4, 2021, 10:17 AM IST
  • Facebook
  • Twitter
  • Whatsapp

ಮುಂಬೈ(ಆ.04): ಮುಂಬೈ-ಗೋವಾ(Mumbai-Goa) ನಡುವೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಬರುವ ಐಷಾರಾಮಿ ಕಾರ್ಡೆಲಿಯಾ ಹಡಗಿನಲ್ಲಿ ಶನಿವಾರ ರಾತ್ರಿ ರೇವ್‌ ಪಾರ್ಟಿ(Rave Party) ನಡೆಯಲಿದೆ ಎಂಬ ಮಾಹಿತಿ ಮುಂಬೈ ಎನ್‌ಸಿಬಿಗೆ(NCB) 15 ದಿನಗಳ ಹಿಂದೆಯೇ ಬಂದಿತ್ತು. ಅಂದಿನಿಂದಲೇ ದಾಳಿಗೆ ಸಿದ್ಧತೆ ನಡೆಸಿದ್ದ ಅಧಿಕಾರಿಗಳು, ಹಡಗಿನ ಚಲನವಲನ ಹಾಗೂ ಪಾರ್ಟಿ ಆಯೋಜನೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಅದರಂತೆ ಶನಿವಾರ ರಾತ್ರಿ ದಾಳಿ ನಡೆಸಿ ಶಾರುಖ್‌(Shah Rukh Khan) ಪುತ್ರ ಸೇರಿದಂತೆ ಇನ್ನಿತರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಡಗಿನಲ್ಲಿ ತೆರಳಲು ಕೆಲ ಎನ್‌ಸಿಬಿ(NCB) ಅಧಿಕಾರಿಗಳು ಮೊದಲೇ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್‌ ಕಾಯ್ದಿರಿಸಿದ್ದರು. ಅದರಂತೆ ಶನಿವಾರ ಮಾರುವೇಷದಲ್ಲಿ ಹಡಗು ಹತ್ತಿದ್ದರು. ನಂತರ ರೇವ್‌ ಪಾರ್ಟಿ ಆರಂಭವಾದ ನಂತರ ದಾಳಿ ನಡೆಸಿ, ಎಲ್ಲರನ್ನೂ ಶೋಧಿಸಿದರು. ಈ ವೇಳೆ ಬಟ್ಟೆ, ಒಳ ಉಡುಪು, ಪರ್ಸ್‌ ಮುಂತಾದ ಕಡೆ ಡ್ರಗ್ಸ್‌ ಬಚ್ಚಿಟ್ಟುಕೊಂಡವರನ್ನು ಬಂಧಿಸಿದರು ಎಂದು ತಿಳಿದುಬಂದಿದೆ.

ಎಫ್‌ಟಿವಿ ಇಂಡಿಯಾ ವ್ಯವಸ್ಥಾಪಕ ಕಾಶಿಫ್‌ ಖಾನ್‌ ಹಾಗೂ ಇನ್ನೊಬ್ಬ ಗೋಪಾಲ್‌ ಆನಂದ್‌ ಎಂಬಾತ ಈ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ಬಂಧಿತರು ಹೇಳಿದ್ದಾರೆ. ಹೀಗಾಗಿ ಇವರ ಬಂಧನಕ್ಕೆ ಶೋಧ ನಡೆದಿದೆ. ಜೊತೆಗೆ, ಪಾರ್ಟಿಗೆ ಡ್ರಗ್ಸ್‌ ಪೂರೈಸಿದವನ ಹೆಸರನ್ನೂ ಶ್ರೀಮಂತರ ಮಕ್ಕಳು ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದು, ಅವನ ಬಂಧನಕ್ಕೆ ಬಲೆ ಬೀಸಲಾಗಿದೆ.

ಹಡಗಿನಲ್ಲಿ ಡ್ರಗ್ಸ್‌ ಹೊಂದಿದ್ದವರನ್ನು ಬಂಧಿಸಿ, ಇನ್ನುಳಿದ ಪ್ರಯಾಣಿಕರ ಜೊತೆಗೆ ಹಡಗನ್ನು ಗೋವಾಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ‘ಕೆಲ ಪ್ರಯಾಣಿಕರ ಬಳಿ ಡ್ರಗ್ಸ್‌ ಪತ್ತೆಯಾಗಿದೆ. ಅವರನ್ನು ಕೂಡಲೇ ಹಡಗಿನಿಂದ ಇಳಿಸಲಾಗಿದೆ. ಹೀಗಾಗಿ ಹಡಗು ತಡವಾಗಿ ಗೋವಾಕ್ಕೆ ತೆರಳಿದೆ’ ಎಂದು ಕಾರ್ಡೆಲಿಯಾ ಕ್ರೂಸಸ್‌ ಕಂಪನಿಯ ಸಿಇಒ ಜರ್ಗನ್‌ ಬೈಲೋಮ್‌ ಹೇಳಿದ್ದಾರೆ.

ಹಡಗಿನಲ್ಲಿ 3 ದಿನದ ಪಾರ್ಟಿ:

ಅ.2ರ ಮಧ್ಯಾಹ್ನ ಕಾರ್ಡೆಲಿಯಾ ಹಡಗು 2 ಗಂಟೆಗೆ ಮುಂಬೈನಿಂದ ಗೋವಾಕ್ಕೆ ಹೊರಟಿತ್ತು. ಅ.4ರಂದು ಮರಳಿ ಮುಂಬೈಗೆ ಬರುವುದು ಪ್ಲಾನ್‌ ಆಗಿತ್ತು. ಈ ಮೂರೂ ದಿನ ಹಡಗು ಅರಬ್ಬಿ ಸಮುದ್ರದಲ್ಲಿ ತೇಲುತ್ತಲೇ ಇರುತ್ತಿತ್ತು. ಆ ವೇಳೆ ವಿವಿಧ ರೀತಿಯ ಪಾರ್ಟಿಗಳನ್ನೂ, ಸಂಗೀತ ಕಾರ್ಯಕ್ರಮಗಳನ್ನೂ, ನೃತ್ಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಕುತೂಹಲಕರ ಸಂಗತಿಯೆಂದರೆ, ಕಾರ್ಯಕ್ರಮದ ಬಗ್ಗೆ ಹಡಗಿನ ಪ್ರಯಾಣಿಕರಿಗೆ ಕಳಿಸಿದ ನೋಟ್‌ನಲ್ಲಿ ‘ಡ್ರಗ್ಸ್‌ ಮತ್ತು ಅಕ್ರಮ ಪದಾರ್ಥಗಳಿಗೆ ಅವಕಾಶವಿಲ್ಲ’ ಎಂದು ತಿಳಿಸಲಾಗಿತ್ತು.

ಹಡಗಿನಲ್ಲಿ ಮೊದಲ ದಿನ ಮಯಾಮಿಯ ಡಿಜೆ ಸ್ಟ್ಯಾನ್‌ ಕೋಲೆವ್‌ನ ಸಂಗೀತ ಕಾರ್ಯಕ್ರಮ, ಎರಡನೇ ದಿನ ಎಫ್‌ಟಿವಿಯಿಂದ ಪೂಲ್‌ ಪಾರ್ಟಿ, ಸಂಗೀತ ಕಾರ್ಯಕ್ರಮ, ರಾತ್ರಿ 8ರ ನಂತರ ಎಫ್‌ಟಿವಿಯಿಂದ ವಿಶೇಷ ಅತಿಥಿಗಳಿಗಾಗಿ ಶಾಂಪೇನ್‌ ಪಾರ್ಟಿ ಆಯೋಜಿಸಲಾಗಿತ್ತು. ಅಂದು ರಾತ್ರಿ 10ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಎಲೆಕ್ಟ್ರಾನಿಕ್‌ ಮ್ಯೂಸಿಕ್‌ ಪಾರ್ಟಿಯಿತ್ತು

Follow Us:
Download App:
  • android
  • ios