ಚಪಾಕ್ ಸಿನಿಮಾದ ನಂತರ ದೀಪಿಕಾ ಪಡುಕೋಣೆ ಮಧು ಮಂಟೇನಾ ಜೊತೆಗೆ ಕೈ ಜೋಡಿಸಿ ಮಹಾಭಾರತದ ಕಥಾಭಾಗವನ್ನು ಪರದೆ ಮೇಲೆ ತರೋಕೆ ಸಿನಿಮಾ ನಿರ್ಮಿಸಿ ನಟಿಸಲು ಸಿದ್ದರಾಗಿದ್ದರು. ತಾನೇ ಸಿನಿಮಾದಲ್ಲಿ ದ್ರೌಪದಿಯಾಗಿ ನಟಿಸೋದು ಎಂದು ದೀಪಿಕಾ ಪಡುಕೋಣೆ ತಿಳಿಸಿದ್ದರು.

ಆದರೆ ಇದೀಗ ಸಿನಿಮಾ ನಿರ್ಮಾಣಕ್ಕೆ ತಡೆ ಬಿದ್ದಿದೆ ಎನ್ನಲಾಗಿದೆ. ಮಹಾಭಾರತ ಕಥೆಯನ್ನು ಮಾಡರ್ನ್‌ ಸಿನಿಮಾವಾಗಿ ನೋಡುವ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿತ್ತು. ಆದರೆ ಕಳೆದ ಎರಡು ವರ್ಷದಲ್ಲಿ ನಿರ್ದೇಶಕರನ್ನು ಫಿಕ್ಸ್ ಮಾಡೋಕೆ ಆಗದೆ ಸಮಸ್ಯೆಯಾಗಿದೆ ಎನ್ನಲಾಗಿದೆ.

ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಶ್ರೀದೇವಿ ಎರಡನೇ ಪುತ್ರಿ ಖುಷಿ

ನಿರ್ದೇಶಕರ ವ್ಯೂ ಮತ್ತು ದ್ರೌಪದಿ ಸಿನಿಮಾ ಮೂಡಿ ಬರಬೇಕಾದ ರೀತಿ ಮ್ಯಾಚ್ ಆಗದಿರುವುದು ಚಿತ್ರತಂಡಕ್ಕೆ ಸಮಸ್ಯೆಯಾಗಿದೆ. ವಿಶಾಲ್ ಬಾರಧ್ವಾಜ್ ಕೂಡಾ ನಿರ್ದೇಶಕರ ಸಾಲಿನಲ್ಲಿದ್ದರು. ಇಷ್ಟೆಲ್ಲ ಗೊಂದಲದ ನಂತರವೂ ಸಿನಿಮಾ ಹೋಲ್ಡ್ ಆಗಿದೆ.

ನಟಿ ದೀಪಿಕಾ ಪಡುಕೋಣೆಯೂ ಸದ್ಯ ದ್ರೌಪತಿಯಿಂದ ದೃಷ್ಟಿ ಬದಿಗೆ ಸರಿಸಿ ದಿ ಇಂಟರ್ನ್, ಶಾರೂಖ್ ಅಭಿನಯದ ಪಠಾಣ್ ಕಡೆ ಗಮನ ಹರಿಸಿದ್ದಾರೆ. ಆದರೂ ದ್ರೌಪತಿ ಸಿನಿಮಾ ಕುರಿತ ಕುತೂಹಲ ಮತ್ತು ನಿರೀಕ್ಷೆ ಹಾಗೇ ಇದೆ.