ನವದೆಹಲಿ (ಫೆ. 01): ಬಂಡೀಪುರ ಅರಣ್ಯದಲ್ಲಿ ಬ್ರಿಟೀಷ್‌ ಸಾಹಸಿ ಬೆಯರ್‌ ಗ್ರಿಲ್ಸ್‌ ಜತೆಗೆ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಸೂಪರ್‌ ಸ್ಟಾರ್‌ ರಜನೀಕಾಂತ್‌ ಹಾಗೂ ಬಾಲಿವುಡ್‌ ಆ್ಯಕ್ಷನ್‌ ಹೀರೋ ಅಕ್ಷಯ್‌ ಕುಮಾರ್‌ ಭಾಗಿಯಾಗಿ ತೆರಳಿ ಬೆನ್ನಲ್ಲೇ, ಇನ್ನಿಬ್ಬರು ಖ್ಯಾತನಾಮರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುದ್ದಿ ಹೊರ ಬಿದ್ದಿದೆ.

ಬಂಡೀಪುರ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ತಲೈವಾ ವಾಪಸ್ ಹೋಗಿದ್ದೇಕೆ?

ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ದೀಪಿಕಾ ಮತ್ತು ಕೊಹ್ಲಿ ಭಾಗಿಯಾಗುವ ದೃಶ್ಯಗಳ ಚಿತ್ರೀಕರಣ ಬಂಡೀಪುರದಲ್ಲಿ ನಡೆಯಲಿದೆಯೇ? ಅಥವಾ ಬೇರೆ ಅರಣ್ಯದಲ್ಲಿ ನಡೆಯಲಿದೆಯೇ? ಎಂಬುದರ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಈ ಚಿತ್ರದ ಶೂಟಿಂಗ್‌ಗಾಗಿ ಬಂಡೀಪುರಕ್ಕೆ ಆಗಮಿಸಿದ್ದರು. ಇಲ್ಲಿ ಮೂರು ದಿನಗಳ ಕಾಲ ತಂಗಿದ್ದು ದಿಢೀರನೇ ಶೂಟಿಂಗ್ ಸ್ಥಗಿತಗೊಳಿಸಿ ಚೆನ್ನೈಗೆ ತೆರಳಿದ್ದಾರೆ.