Asianet Suvarna News Asianet Suvarna News

ಎಂಥಾ ವಿಪರ್ಯಾಸ, ಇಬ್ಬರಿಗೂ ಚಂದುನೇ ಕಾರಣ, ಆದ್ರೆ…? ಚಿನ್ನು ಗಂಡನ ಶಾಕಿಂಗ್ ಕಮೆಂಟ್!

ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ನೇಹಾ, ಕವಿತಾ ಹಾಗೂ ಚಂದನ್ ಕುಮಾರ್ ಮೂವರು ಜೊತೆಯಾಗಿ ನಟಿಸಿದ್ದರು. ಗೊಂಬೆ ಪಾತ್ರದಲ್ಲಿ ನೇಹಾ, ಚಿನ್ನು ಪಾತ್ರದಲ್ಲಿ ಕವಿತಾ ಹಾಗೂ ಚಂದು ರೋಲ್‌ನಲ್ಲಿ ಚಂದನ್ ನಟಿಸಿದ್ದರು.

Chinnu Husband Chandan kumar comment on Neha  Ramakrishhna And Kavitha Gowda  s Photos mrq
Author
First Published Aug 7, 2024, 10:34 PM IST | Last Updated Aug 7, 2024, 10:34 PM IST

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮಾ ಧಾರಾವಾಹಿಯ ಚೆಲುವೆಯರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮ್ಮನಾಗುತ್ತಿರುವ ವಿಷಯವನ್ನು ಅಭಿಮಾನಿಗಳನ್ನು ಹಂಚಿಕೊಂಡಿರುವ ನೇಹಾ ರಾಮಕೃಷ್ಣ, ಕವಿತಾ ಗೌಡ ಬೇಬಿ ಬಂಪ್ ಫೋಟೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ನೇಹಾ ರಾಮಕೃಷ್ಣ ಕೆಲ ದಿನಗಳ ಹಿಂದೆಯಷ್ಟೇ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇಂದು ಕವಿತಾ ಗೌಡ ಆಪ್ತ ಗೆಳತಿ ನೇಹಾ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡು, ನಾವು ಎಲ್ಲಿದ್ದೀವಿ ಅಂತ ಗೆಸ್ ಮಾಡಿ ಎಂದು ಬರೆದುಕೊಂಡಿದ್ದಾರೆ.

ನೇಹಾ ರಾಮಾಕೃಷ್ಣ ಬ್ಲ್ಯೂ ಮತ್ತು ಕವಿತಾ ಯೆಲ್ಲೋ ಡ್ರೆಸ್ ಧರಿಸಿದ್ದಾರೆ. ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಸುರಿಮಳೆಯೇ ಬರುತ್ತಿದೆ. ನೀವಿಬ್ಬರೂ ಸಿಹಿ ಕಹಿ ಚಂದ್ರು ಅವರು ನಡೆಸಿಕೊಡುವ ಬೊಂಬಾಟ ಭೋಜನ ಕಾರ್ಯಕ್ರಮಕ್ಕೆ ಹೋಗಿದ್ದೀರಿ ಎಂಬುವುದು ನಮಗೆ ಗೊತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದೇ ಫೋಟೋಗೆ ಕವಿತಾ ಗಂಡ ಚಂದನ್ ಕುಮಾರ್ ಮಾಡಿರುವ ಕಮೆಂಟ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹಾಗಾದ್ರೆ ಚಂದನ್ ಕುಮಾರ್ ಮಾಡಿದ ಕಮೆಂಟ್ ಏನು ಗೊತ್ತಾ? 

ನೇಹಾ ರಾಮಕೃಷ್ಣ ಮತ್ತು ಕವಿತಾ ಫೋಟೋಗೆ ಕಮೆಂಟ್ ಮಾಡಿರುವ ಚಂದನ್ ಕುಮಾರ್, ಎಂಥಾ ವಿಪರ್ಯಾಸ, ಇಬ್ಬರಿಗೂ ಚಂದುನೇ ಕಾರಣ, ಆದ್ರೆ ಬೇರೆ ಬೇರೆ  ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಹೌದು, ನೇಹಾ ರಾಮಕೃಷ್ಣ ಪತಿಯ ಹೆಸರು ಸಹ ಚಂದನ್ ಗೌಡ. ಬಾಲ್ಯದ ಗೆಳೆಯನನ್ನೇ ನೇಹಾ ಮದುವೆಯಾಗಿದ್ದಾರೆ. ಸದ್ಯ  ನೇಹಾ ಪತಿ ಚಂದನ್, ಕಲರ್ಸ್ ಕನ್ನಡ ವಾಹಿನಿಯ 'ಅಂತರಪಟ' ಸೀರಿಯಲ್‌ನಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. 

ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ನೇಹಾ, ಕವಿತಾ ಹಾಗೂ ಚಂದನ್ ಕುಮಾರ್ ಮೂವರು ಜೊತೆಯಾಗಿ ನಟಿಸಿದ್ದರು. ಗೊಂಬೆ ಪಾತ್ರದಲ್ಲಿ ನೇಹಾ, ಚಿನ್ನು ಪಾತ್ರದಲ್ಲಿ ಕವಿತಾ ಹಾಗೂ ಚಂದು ರೋಲ್‌ನಲ್ಲಿ ಚಂದನ್ ನಟಿಸಿದ್ದರು. ಈ ಧಾರಾವಾಹಿ ಮುಗಿದು ವರ್ಷಗಳೇ ಕಳೆದ್ರೂ ಜನರು ಇದೇ ಪಾತ್ರಗಳಿಂದ ಈ ಮೂವರನ್ನು ಗುರುತಿಸುತ್ತಾರೆ.

ಸೀರೆಯಲ್ಲಿ ಗರ್ಭಿಣಿ ನೇಹಾ ಫೋಟೋಶೂಟ್; ಬೇಬಿ ಬಂಪ್ ನೋಡಿ ತಾಯಿ ಕಳೆ ಕಾಣಿಸ್ತಿದೆ ಎಂದ ಫ್ಯಾನ್ಸ್

ಕೆಲ ದಿನಗಳ ಹಿಂದೆಯಷ್ಟೇ ನೇಹಾ ಕುಟುಂಬಸ್ಥರ ಜೊತೆಯಲ್ಲಿ ಕೊಡಗು ಪ್ರವಾಸ ಕೈಗೊಂಡಿದ್ದರು. ಕೊಡಗು ಪ್ರವಾಸದಲ್ಲಿ ಕುಟುಂಬಸ್ಥರ ಜೊತೆ ಕಳೆದ ಸುಂದರ ಕ್ಷಣದ ಫೋಟೋಗಳನ್ನು ಸಹ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ನೇಹಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ನಿರಂತರವಾಗಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಸರಳವಾದ ಸೀರೆ ಧರಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋದಲ್ಲಿ ಅಮ್ಮನ ಕಳೆ ಕಾಣ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಕನ್ನಡ ಜೊತೆಯಲ್ಲಿ ತಮಿಳು, ತೆಲುಗು ಸೀರಿಯಲ್ ಗಳಲ್ಲಿಯೂ ನೇಹಾ ರಾಮಕೃಷ್ಣ ನಟಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಲಚ್ಚಿ ಧಾರಾವಾಹಿಯಲ್ಲಿ ನೇಹಾ ನಟಿಸಿದ್ದರು. ವಿಶ್ವ ಯೋಗ ದಿನದಂದು ವಿಶೇಷ ಆಸನಗಳನ್ನು ಮಾಡಿದ್ದ ನೇಹಾ ಫೋಟೋಗಳು ವೈರಲ್ ಆಗಿದ್ದವು.

ಗೊಂಬೆ ಬಳಿಕ ಬೇಬಿ ಬಂಪ್ ವಿಡಿಯೋ ಹಂಚಿಕೊಂಡ ಚಿನ್ನು; ಜಸ್ಟ್ ಕಿಡ್ಡಿಂಗ್ ಅಂತ ಅಂದಿದ್ಯಾರಿಗೆ?

Latest Videos
Follow Us:
Download App:
  • android
  • ios