'ಸ್ಟ್ರೀಟ್‌ ಡ್ಯಾನ್ಸ್‌ 3D'ಚಿತ್ರದಲ್ಲಿ ಕಾಣಿಸಿಕೊಂಡ ನಂತರ ನಟ ವರುಣ್ ಧವನ್ 'ಕೂಲಿ ನಂ. 1' ಚಿತ್ರದ ಶೂಟಿಂಗ್ ಶುರು ಮಾಡಿದ್ದಾರೆ. ಕೂಲಿ ಚಿತ್ರದ ಬಹುತೇಕ ಚಿತ್ರೀಕರಣ ಫೆಬ್ರವರಿಯಲ್ಲಿ ಪೂರ್ಣಗೊಂಡಿದ್ದು, ಉಳಿದಿರುವ ಕೆಲವೊಂದು ದೃಶ್ಯಗಳನ್ನು ಇದೀಗ  ಚಿತ್ರೀಕರಿಸಲಾಗುತ್ತಿದೆ. ಶೂಟಿಂಗ್‌ಗೆ ಹಿಂದಿರುಗಿದ ವರುಣ್ ಶೇರ್ ಮಾಡಿಕೊಂಡ ಫೋಟೊ ಅಭಿಮಾನಿಗಳ ಗಮನ ಸೆಳೆದಿವೆ.

ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ? 

ಕೋವಿಡ್‌19 ಟೆಸ್ಟ್:
ಶೂಟಿಂಗ್‌ಗೆ ಹಿಂದಿರುಗಿದ ವರುಣ್ ಸೆಟ್‌ನಲ್ಲಿ ಕೋವಿಡ್‌19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ವೈದ್ಯ ಸಿಬ್ಬಂದಿ ಜೊತೆ ಫೋಟೋ ಶೇರ್ ಮಾಡಿಕೊಂಡು, ಆ ನಂತರ ಟೆಸ್ಟ್‌ ಮಾಡಿಸಿಕೊಳ್ಳುವುದು ಎಷ್ಟು ಕಷ್ಟ ಎಂದು ತೋರಿಸಿದ್ದಾರೆ.  'ಕೆಲಸಕ್ಕೆ ಹಿಂದಿರುಗಿರುವೆ. ಎಲ್ಲಾ ಜಾಗೃತ ಕ್ರಮಗಳನ್ನು ಕೈಗೊಂಡು. ಎರಡು ಗಜ ಅಂತರ ಇಟ್ಟು ಕೊಂಡು ಕೆಲಸ ಮಾಡುತ್ತಿದ್ದೇವೆ. ಮಾಸ್ಕ್‌ ಅತಿ ಅಗತ್ಯ. ಟಿಸ್ಟ್‌ ಮಾಡಿಸಿಕೊಳ್ಳುವುದು ಕಷ್ಟ. ಕೆಟ್ಟ ವಾಸನೆ ಬೇರೆ ಬರುತ್ತದೆ. ವೈದ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಒಂದು ಸಲಾಂ,' ಎಂದು ಬರೆದುಕೊಂಡಿದ್ದಾರೆ.

 

ವರುಣ್‌ ಧವನ್ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಸದ್ದು ಮಾಡುವುದು ಇನ್‌ಸ್ಟಾಗ್ರಾಂ ಪೋಸ್ಟ್‌ಗಳ ಮೂಲಕ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಇನ್ನಿತರ ಸೆಲೆಬ್ರಿಟಿಗಳು ಹೆಚ್ಚಾಗಿ ಫಾಲೋ ಮಾಡಲು ಹಾಗೂ ಹೆಚ್ಚಾಗಿ ಪೋಸ್ಟ್‌ ನೋಡಲು ಬಯಸುವುದು ವರುಣ್ ಧವನ್ ಅವರದ್ದು ಎಂದು ಒಮ್ಮೆ ಹೇಳಿದ್ದರು.