ಬಾಲಿವುಡ್‌ 'ದಬಾಂಗ್' ಹುಡುಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಿನದಿಂದಲೂ ಟ್ರೋಲಿಗರಿಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಕೌನ್ ಬನೇಗಾ ಕರೋಡ್ಪತಿಯಲ್ಲಿ ನಡೆದ ಆ ಒಂದು ಘಟನೆ ಈಗಲೂ  ನಟಿಯ ಜೀವನದಲ್ಲಿ ಮುಳುವಾಗಿದೆ.

ಲಾಕ್‌ಡೌನ್‌ನಲ್ಲಿ ಶೂಟಿಂಗ್ ಮಾಡಿದ ನಟಿ; ಫೋಟೋ ಹಾಕಿದ ನಿರ್ದೇಶಕನ ವಿರುದ್ಧ ದೂರು!

ಹೌದು! ಬೋಲ್ಡ್‌ ಹಾಗೂ ಬ್ಯೂಟಿಫುಲ್ ನಟಿ ಸೋನಾಕ್ಷಿ ಸಿನ್ಹಾ  ಟ್ರೋಲಿಗರ ಕಾಟ ಸಹಿಸಿಕೊಳ್ಳಲಾಗದೆ ಶನಿವಾರ ತಮ್ಮ ಟ್ಟಿಟ್ಟರ್ ಖಾತೆ ಡಿಲೀಟ್‌ ಮಾಡಿದ್ದಾರೆ.  33 ವರ್ಷದ  ನಟಿ ಶನಿವಾರ 'ಜೀವನದಲ್ಲಿ ನೆಮ್ಮದಿಯಾಗಿರಬೇಕೆಂದರೆ ಮೊದಲು ನೆಗೆಟಿವಿಟಿಯಿಂದ ದೂರ ಉಳಿಯಬೇಕು ಅದರಲ್ಲೂ  ಟ್ಟಿಟ್ಟರ್ ನಿಂದ ತುಂಬಾನೇ ದೂರವಿರಲೇಬೇಕು. ನಾನು ಖಾತೆ ಡಿಲೀಟ್‌ ಮಾಡುತ್ತಿರುವೆ' ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿ ಬೈ ಹೇಳಿದ್ದಾರೆ.

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುವಾಗ  ಸೋನಾಕ್ಷಿ ಟ್ರೋಲಿಗರ ಬಗ್ಗೆ ಉತ್ತರಿಸಿದ್ದಾರೆ. 'ನಾನು ತಿಳಿಯದೆ ಮಾಡಿದ ತಪ್ಪಿಗೆ ಜನರು ಈಗಲೂ ಟ್ರೋಲ್ ಮಾಡುತ್ತಿದ್ದಾರೆ. ಸುಮಾರು  5-6 ತಿಂಗಳೇ ಕಳೆದಿದೆ ಆದರೂ ಅವರ ಬಾಯಿ ಸುಮ್ಮನಾಗಿಲ್ಲ ' ಎಂದು ಹೇಳಿದ್ದರು. ಈ ಮಧ್ಯೆ  ಸೋನಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಮಾತನಾಡಿದ್ರೂ ಅಥವಾ ಮಾತನಾಡದಿದ್ರೂ ಟ್ರೋಲಿಗರಿಗೆ ಅಹಾರವಾಗುತ್ತಿರುವುದರಿಂದ ಬೇಸತ್ತು ಟ್ವಿಟ್ಟರ್ ಖಾತೆ ಮಾಡಿದ್ದಾರೆ. 

ಲಾಕ್‌ಡೌನ್‌ ಪ್ರಾರಂಭದಿಂದಲೂ ನಟ-ನಟಿಯರು ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ನಿರ್ದೇಶಕ ವಿವೇಶ್‌ ಸೋನಾಕ್ಷಿ ಶೂಟಿಂಗ್‌ಗೆ ತೆರಳುತ್ತಿರುವ ಫೋಟೋವನ್ನು ಶೇರ್ ಮಾಡಿ ' ಈ ಸಮಯದಲ್ಲಿ ಯಾರು ಶೂಟಿಂಗ್ ಮಾಡುತ್ತಾರೆ?' ಎಂದು ಪ್ರಶ್ನಿಸಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ ಸೋನಾಕ್ಷಿ ಫೇಕ್‌ ನ್ಯೂಸ್‌ ಬಗ್ಗೆ ಸ್ಪಷ್ಟನೇ ನೀಡಿದ್ದಾರೆ ಹಾಗೂ ನಿರ್ದೇಶಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.