ನವೆಂಬರ್ 2 ಅಂದರೆ ಸಿನಿ ಪ್ರೇಮಿಗಳಿಗೆ ಮೊದಲು ಜ್ಞಾಪಕ ಬರುವುದು ಶಾರುಖ್‌ ಖಾನ್‌ ಹುಟ್ಟುಹಬ್ಬ. ಮುಂಬೈನ ಮನ್ನತ್ ಬಂಗಲೆಯಲ್ಲಿ ಈ ದಿನವನ್ನು ಹಬ್ಬದಂತೆ ಆಚರಣೆ ಮಾಡಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮನೆ ಬಾಗಿಲಿಗೆ ಬಂದು ಭೇಟಿಯಾಗಿ, ಮಾತನಾಡಿಸೋವರೆಗೂ ಸ್ಥಳದಿಂದ ಕದಲುವುದಿಲ್ಲ. ಆದರೆ ಈ ಬಾರಿ ಕೊರೋನಾ ಭಯದಿಂದ ಅಭಿಮಾನಿ ಸಂಘಗಳು ಒಟ್ಟಾಗಿ ಸೇರಿ ಮಾಸ್ಟರ್ ಪ್ಲಾನ್ ಮಾಡಿತ್ತು. ಅದುವೇ ವರ್ಚುಯಲ್ ಮೀಟಿಂಗ್.

ಬಾಲಿವುಡ್ ಕಿಂಗ್ ಖಾನ್ ಶಾರೂಖ್‌ಗೆ ದಿಲ್ಲಿಯ ಹುಡುಗರು ಹೊಡೆದಿದ್ದೇಕೆ..?

'ಈ ವರ್ಷ ನಾವೆಲ್ಲರೂ ಎಲ್ಲಾ ಕೆಲಸಗಳನ್ನೂ ವರ್ಚುಯಲ್ ಆಗಿ ಮಾಡಬೇಕಿದೆ. ಈ ಬಾರಿ ವರ್ಚುಯಲ್ ಆಗಿರಬೇಕು ಹಾಗೇ ಗ್ರ್ಯಾಂಡ್ ಆಗಿರಬೇಕು.  ಅಭಿಮಾನಿಗಳಿಗೆ ಈ ದಿನ ಹಬ್ಬವಿದ್ದಂತೆ.  ಮಧ್ಯರಾತ್ರಿಯೇ ಅಭಿಮಾನಿಗಳು ಮನ್ನತ್ ಬಂಗಲೆಯಿಂದ ಲೈವ್‌‌ಗೆ ಬಂದ ಶಾರುಖ್ ಖಾನ್ ಸೆಲೆಬ್ರಿಷನ್‌ನಲ್ಲಿ ಭಾಗಿಯಾಗಬಹುದು,' ಎಂದು ಅಭಿಮಾನಿ ಯಶ್ ಪರ್ಯಾಣಿ ಹೇಳಿದ್ದರು. 

ಬರ್ತಡೇ ಅಂದ್ಮೇಲೆ ಕೇಕ್ ಇರಲೇ ಬೇಕಲ್ವಾ? ಈ ಕಾರಣಕ್ಕೆ ಅಭಿಮಾನಿಗಳು ಶಾರುಖ್ ಫೋಟೋವಿಟ್ಟು ಅಥವಾ ವಿಡಿಯೋ ಕಾಲ್‌ನಲ್ಲಿದ್ದು, ಕೇಕ್‌ ಕತ್ತರಿಸಬಹುದಾಗಿತ್ತು. ಆದರೆ ಕೆಲವರು ಮಾತ್ರ ಕೇಕನ್ನು ಮನ್ನತ್ ವಿಳಾಸಕ್ಕೆ ಪಾರ್ಸಲ್ ಮಾಡಿದ್ದಾರೆ. ಈ ಪ್ಲಾನ್‌ ಶಾರುಖ್‌ ತಂಡಕ್ಕೆ ಮುಂಚೆಯೇ ಗೊತ್ತಿತ್ತು. ಅದಕ್ಕೆ ವಿಡಿಯೋ ಕಾಲ್‌ಗೆ ಸೇರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗದ ಕಾರಣ ವೀಡಿಯೋ ಕಾಲ್‌ನಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಗೇಮ್‌ ಆಡಿಸಿದ್ದಾರೆ. 

"

ಕೊರೋನಾ ಮುಂಜಾಗೃತಾ ಕ್ರಮಗಳಿಂದ ಶಾರುಖ್ ನಿವಾಸದ ಬಳಿ ಯಾರೂ ಬಾರದಂತೆ, ಗುಂಪು ಸೇರದಂತೆ ಪೊಲೀಸರು ರಕ್ಷಣೆ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಇದೀಗ ಬಾಲಿವುಡ್ ಬಾದ್ ಶಾನ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ನೆಚ್ಚಿನ ನಟನ ಸೂಪರ್‌ ಹಿಟ್‌ ಪಾತ್ರಗಳನ್ನು ಒಂದಾಗಿಸಿ, ಕೊಲಾಜ್ ವಿಡಿಯೋ ಮಾಡಿದ್ದಾರೆ.

ಸಂಖ್ಯಾಶಾಸ್ತ್ರ ಕಾರಣದಿಂದ ಶಾರುಖ್‌ ಖಾನ್‌ ಸೋಪ್‌ ಬಳಸಲ್ವಂತೆ! 

'ನಮಗೆ ಕೊರೋನಾ ಭಯ ಇಲ್ಲವೇ ಇಲ್ಲ, ಖಾನ್ ಹುಟ್ಟು ಹಬ್ಬದಲ್ಲಿ ನಾವು ಭಾಗಿಯಾಗಲೇ ಬೇಕು. 55 ತುಂಬಾನೇ ಸ್ಪೆಷಲ್. ಮನೆಯಲ್ಲಿದದ್ರೂ ನಾವು ಕೇಕ್ ಕಳುಹಿಸುತ್ತೇವೆ. ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಇಂದಿನ ದಿನವನ್ನು ಟ್ರೆಂಡ್ ಮಾಡುತ್ತೇವೆ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.