ಎವರ್ಗ್ರೀನ್‌ ನಟಿ ಶ್ರೀದೇವಿ ಬಾಲಿವುಡ್‌ ಚಿತ್ರರಂಗದ ಬೋಲ್ಡ್‌ ನಟಿ. ಪಾತ್ರ ಆಯ್ಕೆ ಮತ್ತು ಜೀವನ ಶೈಲಿ ಬಗ್ಗೆ ಸದಾ ಶಿಸ್ತುನಿಂದ ಇರುತ್ತಿದ್ದರು. ಯಾರಿಗೂ ಅಂಜದ ನಟಿ ಬಾಲಿವುಡ್‌ನ ಈ ಒಬ್ಬ ನಟನಿಗೆ ಮಾತ್ರ ಸಿಕ್ಕಾಪಟ್ಟೆ ಹೆದರುತ್ತಿದ್ದರಂತೆ. ಈ ಭಯಕ್ಕೆ ಕಾರಣವೇ  'ಹಿಮ್ಮತ್' ಚಿತ್ರೀಕರಣದ ವೇಳೆ ನಡೆದ ಆ ಒಂದು ಘಟನೆ.

ಸಂಜಯ್-ಶ್ರೀದೇವಿ:

1983ರಲ್ಲಿ ತೆರೆ ಕಂಡ ತೆಲುಗು ರಿಮೇಕ್ ಸಿನಿಮಾ 'ಹಿಮ್ಮತ್' ಬಾಕ್ಸ್ ಆಫೀಸ್‌ ಕಲೆಕ್ಷನ್ ಮುಟ್ಟಿತ್ತು. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಶ್ರೀದೇವಿಯೂ ತಾನು ಇರುವ ನಗರದಲ್ಲಿ ಇದ್ದಾರೆ ಎಂದು ತಿಳಿದ ಸಂಜಯ್‌ ದತ್‌ ಭೇಟಿಯಾಗಲು ರಾತ್ರೋರಾತ್ರಿ ಹೊರಟು. ಶ್ರೀದೇವಿ ಇದ್ದ ಹೋಟೆಲ್‌ ಕೋಣೆಯನ್ನು ದಡ-ದಡ ಎಂದು ಬಡಿಯಲು ಆರಂಭಿಸಿದ್ದರು. ವಿಪರೀತ ಕುಡಿದಿದ್ದ ಸಂಜಯ್ ದತ್ ತಾವು ಏನು ಮಾಡುತ್ತಿದ್ದೇನೆ  ಎಂಬ ಅರಿವು ಇರಲಿಲ್ಲವಂತೆ. ಶ್ರೀದೇವಿ ಬಾಗಿಲು  ತೆರೆದಾಗ ನುಗ್ಗಲು ಪ್ರಯತ್ನಿಸಿದ್ದಾರೆ. ಸಂಜಯ್ ವಿಪರೀತ ಕುಡಿದು ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ ಶ್ರೀದೇವಿ ಕಷ್ಟ ಪಟ್ಟು ಬಾಗಿಲು  ಹಾಕಿ ಒಳಗೆ ಬರದಂತೆ ನೋಡಿಕೊಂಡಿದ್ದಾರೆ. ಅಂದಿನಿಂದ ಶ್ರೀದೇವಿ ನಟ ಸಂಜಯ್ ದತ್‌ಗೆ ಹೆದರುತ್ತಿದ್ದರಂತೆ.

ರಚಿತಾ ರಾಮ್ ಸ್ಯಾಂಡಲ್‌ವುಡ್ ಶ್ರೀದೇವಿ ಅಂದ್ರು ಖ್ಯಾತ ನಿರ್ದೇಶಕ!

ಈ ಘಟನೆಯನ್ನು ಶ್ರೀದೇವಿ ಅಗಲಿದ ನಂತರ ಸಂದರ್ಶನವೊಂದರಲ್ಲಿ ಸಂಜಯ್ ದತ್ ಮಾತನಾಡಿದ್ದಾರೆ. 'ನಾನು ಕುಡಿದು ಹೇಗೆ ವರ್ತಿಸಿದೆ ಎಂದು ಈಗಲೂ ಜ್ಞಾಪಕ ವಿಲ್ಲ ಆದರೆ ಆ ಘಟನೆ ಶ್ರೀದೇವಿ ಮೇಲೆ ಗಾಢ ಪರಿಣಾಮ ಬೀರಿತ್ತು. ಇದರಿಂದ ನನ್ನೊಟ್ಟಿಗೆ ಸಿನಿಮಾ ಮಾಡಲು ಹೆದರುತ್ತಿದ್ದರು' ಎಂದು ಹೇಳಿದ್ದಾರೆ.

ಘಟನೆಯಾದ ಹತ್ತು ವರ್ಷದ ಬಳಿಕ ಸಂಜಯ್ ಜೊತೆ ಸಿನಿಮಾ ಮಾಡಲು ಅದ್ಭುತ ಕತೆಯೊಂದು ಬಂದಾಗ ಶ್ರೀದೇವಿ ಅಭಿನಯಿಸಲು ಒಪ್ಪಿಕೊಂಡರಂತೆ. ಮಹೇಶ್ ಭಟ್ ನಿರ್ದೇಶನದ  'ಗುಮ್ರಾ' ಚಿತ್ರದಲ್ಲಿ ತೆರೆ ಹಂಚಿಕೊಂಡರು, ಚಿತ್ರದ ಹಾಡುಗಳು ಸೂಪರ್ ಹಿಟ್ ಆದವೂ. ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಇದ್ದ  ಭಿನ್ನ ಅಭಿಪ್ರಾಯಗಳಿಗೆ ಮುಕ್ತಿ ನೀಡಿ ಉತ್ತಮ ಸ್ನೇಹಿತರಾಗಿದ್ದರು.