1. ಹಿಂದೆ ‘ಸೆಕ್ಸಿ ಸೆಕ್ಸಿ ಮುಜೆ ಲೋಗ್‌ ಬೋಲೆ’ ಎನ್ನುವ ಹಾಡಿಗೆ ಡ್ಯಾನ್ಸ್‌ ಮಾಡಿದ ತಮ್ಮ ಅನುಭವ ಹಂಚಿಕೊಳ್ಳುವುದರೊಂದಿಗೆ ಆ ಕಾಲದಲ್ಲಿ ತಾವು ತೊಟ್ಟಉಡುಗೆ, ಇಂದು ನಟಿಯರು ಹಾಕುತ್ತಿರುವ ಬಿಕಿನಿ, ಬೋಲ್ಡ್‌ ಆಗಿರುವ ಐಟಂ ಸಾಂಗ್‌ಗಳ ಬಗ್ಗೆ ಮಾತನಾಡಿದ್ದಾರೆ. ‘ನನಗಿನ್ನೂ ನೆನಪಿದೆ. ಆಗ ನಾನು ತುಂಬಾ ಯಂಗ್‌ ಆಗಿದ್ದೆ. ಆ ಸಾಂಗ್‌ನಲ್ಲಿ ಇದ್ದ ಸೆಕ್ಸಿ ಎನ್ನುವ ಪದವೇ ಹೊಸದಾಗಿತ್ತು. ಕಡೆಗೆ ಅಭಿಮಾನಿಗಳು ನನ್ನ ಡ್ಯಾನ್ಸ್‌ ಮೆಚ್ಚಿಕೊಂಡರು. ಇಂದು ಆ ಸಾಂಗ್‌ ಎಲ್ಲಾ ಕಡೆಯೂ ಇದೆ’ ಎಂದು ತಮ್ಮ ಸಂತೋಷ ತೋಡಿಕೊಂಡಿದ್ದಾರೆ.

ಕರಿಷ್ಮಾ, ಕರೀನಾ ಒಂದಾಗೋ ಕಾಲ ಬಂತು!

2. ಇನ್ನು ಅಮೀರ್‌ ಖಾನ್‌ ಜೊತೆಗೆ ‘ರಾಜಾ ಹಿಂದೂಸ್ಥಾನಿ’ ಚಿತ್ರದಲ್ಲಿ ನಟಿಸಿದ ಅನುಭವ, ಊಟಿಯ ಶೂಟಿಂಗ್‌, ಅಲ್ಲಿನ ಕಿಸ್ಸಿಂಗ್‌ ಸೀನ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ಆ ಕಾಲಕ್ಕೆ ಕಿಸ್ಸಿಂಗ್‌ ಸೀನ್‌ ಚಿತ್ರೀಣಕಣ ಸಾಕಷ್ಟುಚರ್ಚೆಯಾಗಿತ್ತು’ ಎಂದು ಹೇಳುವುದರೊಂದಿಗೆ ಆ ದೃಶ್ಯ ಚಿತ್ರೀಕರಣದ ವೇಳೆ ತಾವು ಮತ್ತು ಅಮೀರ್‌ ಅನುಭವಿಸಿದ ತಳಮಳವನ್ನೂ ತೆರೆದಿಟ್ಟಿದ್ದಾರೆ.

ಹೀಗೆ ಹೇಳುತ್ತಾ ಹೋದರೆ ಕರೀಷ್ಮಾ ಬಳಿ ಸಾಕಷ್ಟುಕತೆಗಳು, ಅನುಭವದ ರಾಶಿ ಇದ್ದೇ ಇರುತ್ತದೆ. ಇವು ಮುಂದಿನ ದಿನಗಳಲ್ಲಿ ಹೊರ ಬರಲಿಕ್ಕೂ ಸಾಕು.