ಬಾಲಿವುಡ್‌ ಹೆಸರಾಂತ ನಟ ಅನುಪಮ್ ಖೇರ್‌ ಭಾನುವಾರ ತಮ್ಮ ಟ್ಟಿಟರ್‌ ಖಾತೆಯಲ್ಲಿ ತಮ್ಮ ತಾಯಿ ದುಲಾರಿ, ಸಹೋದರ ರಾಜು, ನಾದಿನಿ ರೀಮಾ ಮತ್ತು ಅವರ ಮಗಳು ವೃಂದಾ ಅವರಿಗೆ ಕೊರೋನಾ ಪಾಟಿಸಿವ್ ಇರುವುದಾಗಿ ಟ್ಟೀಟ್‌ ಮಾಡಿದ್ದಾರೆ.

ಬಾಲಿವುಡ್‌ ನಟಿ ರೇಖಾ ಮನೆ ಸೀಲ್‌ಡೌನ್‌; ಸ್ವಯಂ ಕ್ವಾರಂಟೈನ್‌ಗೆ ಒಳಗಾದ ನಟಿ!

ನಟ ಅನುಪಮ್ ಖೇರ್‌ ಕೊರೋನಾ ಪರೀಕ್ಷೆ ಮಾಡಿಸಿದ್ದು ವರದಿ ನೆಗೆಟಿವ್ ಬಂದಿದೆ. ಕುಟುಂಬಸ್ಥರಿಗೆ ಹೆಚ್ಚಿನ ಲಕ್ಷಣಗಳು ಕಂಡು ಬಂದಿಲ್ಲ ಆದರೂ ಚಿಕಿತ್ಸೆ ಪಡೆಯುತ್ತಿದ್ದಾರೆ. 'ನಿಮ್ಮಗೆಲ್ಲಾ ಒಂದು ವಿಚಾರ ತಿಳಿಸಬೇಕು. ತಾಯಿ ಮತ್ತು ಸಹೋದರನ ಕುಟುಂಬದವರು ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಷ್ಟೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡರೂ ಪಾಸಿಟಿವ್ ಬಂದಿದೆ. ನೀವೆಲ್ಲರೂ ಸುರಕ್ಷಿತವಾಗಿರಿ. ಈ ವಿಚಾರವನ್ನು ಮುಂಬೈ ಮಹಾನಗರ ಪಾಲಿಕೆ ಅವರಿಗೆ ತಿಳಿಸಲಾಗಿದೆ' ಎಂದು ಟ್ಟೀಟ್ ಮಾಡಿದ್ದಾರೆ.

 

ಅನುಪಮ್ ತಾಯಿ ದುಲಾರಿ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಆಹಾರ ಸೇವಿಸಲು ಕಷ್ಟ ಪಡುತ್ತಿದ್ದಾರೆ. ರಕ್ತ ಪರೀಕ್ಷೆ ಮತ್ತು ಸಿಟಿ ಸ್ಕ್ಯಾನ್ ಮಾಡಿದ ನಂತರ ಕೋವಿಡ್‌-19 ಲಕ್ಷಣಗಳು ಇರುವುದಾಗಿ ತಿಳಿದು ಬಂದಿದೆ. ಅನುಪಮ್‌ ಖೇರ್ ಬಾಂಬೆ ವೈದ್ಯರಿಗೆ ಮತ್ತು ಮಹಾನಗರ ಪಾಲಿಕೆ ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.