ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣವಾತ್ ಉಡುಪಿಯ ಕಾಪು ಮಾರಿಯಮ್ಮನ ಸನ್ನಿಧಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ದಿಢೀರ್ ಕಂಗನಾ ಭೇಟಿ ಹಲವು ಅಚ್ಚರಿಗೆ ಕಾರಣವಾಗಿದೆ.
ಉಡುಪಿ(ಮಾ.03) ಬಾಲಿವುಡ್ ನಟಿ, ಮಂಡಿ ಸಂಸದೆ ಕಂಗನಾ ರಣಾವತ್ ಉಡುಪಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಡುಪಿಯ ಕಾಪು ಬಳಿ ಇರುವು ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮಾರಿಯಮ್ಮನ ಗುಡಿಗೆ ಕಂಗನಾ ರಣವಾತ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ವಿಶೇಷ ಅಂದರೆ ಬಹು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾರಿಗುಡಿ ದೇವಸ್ಥಾನ ಮರು ನಿರ್ಮಾಣಗೊಂಡಿದೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕಂಗನಾ ರಣವಾತ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಉಡುಪಿಗೆ ಕಂಗನಾ ರಣವಾತ್ ಭೇಟಿ ನೀಡಿದ್ದಾರೆ.
ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಾರಿಯಮ್ಮನ ದರ್ಶನ ಕೈಗೊಂಡ ಕಂಗನಾ ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಿರಿಯ ಆರ್‌ಎಸ್‌ಎಸ್ ಹಿರಿಯ ಮುಖಂಡ ಬಿಎಲ್ ಸಂತೋಷ್ ಭಾಗಿಯಾಗಿರುವ ಸಾರ್ವಜನಿಕ ಸಭೆಯಲ್ಲಿ ಕಂಗನಾ ರಣವಾತ್ ಭಾಗಿಯಾಗಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್ ಅವರ ಸುದೀರ್ಘ ಮಾನನಷ್ಟ ಮೊಕದ್ದಮೆಯೊಂದು ರಾಜೀ ಪಂಚಾಯಿತಿ ಮೂಲಕ ಕೊನೆಗೊಂಡಿತ್ತು. ಇದರ ಬೆನ್ನಲ್ಲೇ ದೇವಸ್ಥಾನ ದರ್ಶನದಲ್ಲಿ ಕಂಗನಾ ಬ್ಯೂಸಿಯಾಗಿದ್ದಾರೆ.
ಕಂಗನಾ 'ಎಮರ್ಜೆನ್ಸಿ'ಗೆ ಖರ್ಚಾಗಿದ್ದು 75 ಕೋಟಿ, ಕಲೆಕ್ಷನ್ ಮಾತ್ರ 21 ಕೋಟಿ! ನಿರ್ಮಾಪಕನಿಗೆ ದೊಡ್ಡ ಹೊಡೆತ!
ಇತ್ತೀಚೆಗೆ ಬಾಲಿವುಡ್ ನಟಿ-ರಾಜಕಾರಣಿ ಕಂಗನಾ ರನೌತ್ ಮತ್ತು ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ತಮ್ಮ ಐದು ವರ್ಷಗಳ ಹಳೆಯ ಮಾನನಷ್ಟ ಮೊಕದ್ದಮೆಯನ್ನು ಯಶಸ್ವಿಯಾಗಿ ಬಗೆಹರಿಸಿಕೊಂಡಿದ್ದರು. ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಖ್ತರ್ ಅವರೊಂದಿಗೆ ನ್ಯಾಯಾಲಯದ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇಬ್ಬರೂ ತಮ್ಮ ಕಾನೂನು ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇಂದು, ಜಾವೇದ್ ಜೀ ಮತ್ತು ನಾನು ಮಧ್ಯಸ್ಥಿಕೆಯ ಮೂಲಕ ನಮ್ಮ ಕಾನೂನು ಪ್ರಕರಣವನ್ನು (ಮಾನನಷ್ಟ ಮೊಕದ್ದಮೆ) ಬಗೆಹರಿಸಿಕೊಂಡಿದ್ದೇವೆ. ಮಧ್ಯಸ್ಥಿಕೆಯಲ್ಲಿ, ಜಾವೇದ್ ಜೀ ತುಂಬಾ ವಿನಮ್ರರಾಗಿದ್ದರು. ಅವರು ನನ್ನ ಮುಂದಿನ ನಿರ್ದೇಶನಕ್ಕೆ ಹಾಡುಗಳನ್ನು ಬರೆಯಲು ಸಹ ಒಪ್ಪಿಕೊಂಡಿದ್ದಾರೆ," ಎಂದು ಕಂಗನಾ ಪೋಸ್ಟ್‌ನೊಂದಿಗೆ ಬರೆದಿದ್ದರು.
2020 ರಲ್ಲಿ, ಅಖ್ತರ್, ಹೃತಿಕ್ ರೋಷನ್ ಅವರೊಂದಿಗಿನ ಜಗಳದಲ್ಲಿ ತಮ್ಮ ಹೆಸರನ್ನು ಎಳೆದು ತಂದಿದ್ದಾರೆ ಎಂಬ ಆರೋಪದ ಮೇಲೆ ನಟಿಯ ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದರು. ಕಂಗನಾ ಅಖ್ತರ್ ವಿರುದ್ಧ ಪ್ರತಿದೂರು ದಾಖಲಿಸಿದಾಗ ಕಾನೂನು ವಿವಾದ ತೀವ್ರಗೊಂಡಿತು.
ಕಂಗನಾ ಪ್ರಸ್ತುತ ಹೊಸ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಸೂಪರ್ ಹಿಟ್ ತನು ವೆಡ್ಸ್ ಮನು ಚಿತ್ರದಲ್ಲಿ ಕಂಗನ ಕಾಣಿಸಿಕೊಳ್ಳುತ್ತಿದ್ದಾರೆ. ಸಹನಟ ಆರ್ ಮಾಧವನ್ ಅವರೊಂದಿಗೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಯಶಸ್ವಿ ರೊಮ್ಯಾಂಟಿಕ್ ಕಾಮಿಡಿ ಸರಣಿಯಲ್ಲಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ್ದ ಇಬ್ಬರೂ ಕಲಾವಿದರು ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಕಂಗನಾ ರನೌತ್ ಅವರು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ನಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡುಗಡೆಯಾದ ನಂತರ ಈ ಘೋಷಣೆ ಹೊರಬಿದ್ದಿದೆ. ಮತ್ತೊಂದೆಡೆ, ಅಖ್ತರ್ ಕಳೆದ ವರ್ಷ ತಮ್ಮ ಸಾಕ್ಷ್ಯಚಿತ್ರ 'ಆಂಗ್ರಿ ಯಂಗ್ ಮೆನ್' ಬಿಡುಗಡೆ ಮಾಡಿದ್ದರು.
