ಎರಡು ಬಾರಿ ರಾಜ್ಯಸಭಾ ಸೀಟ್ ತಿರಸ್ಕರಿಸಿದ ಸೋನು ಸೂದ್ ನಟನ ಈ ನಿರ್ಧಾರಕ್ಕೆ ಕಾರಣವೇನು ?
ಬಾಲಿವುಡ್ ನಟ ಸೋನು ಸೂದ್ ಎರಡು ಬಾರಿ ರಾಜ್ಯಸಭಾ ಸೀಟ್ ತರಿಸ್ಕರಿಸಿರುವುದಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋ ಬಗ್ಗೆ ಈಗಾಗಲೇ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದ್ದು ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಜೊತೆಗೂ ಕಾಣಿಸಿಕೊಂಡಿದ್ದರು. ಆ ಸಂದರ್ಭ ನಟ ರಾಜಕೀಯ ಎಂಟ್ರಿಯ ಇರಾದೆ ಇಲ್ಲ ಎಂದಿದ್ದರು. ಇತ್ತೀಚೆಗೆ ಪ್ರತಿಕ್ರಿಯಿಸಿದ ನಟ ನಾನಿನ್ನೂ ರೆಡಿಯಾಗಿಲ್ಲ ಎಂದಿದ್ದಾರೆ.
ಸೂದ್ ಹೆಚ್ಚು ವಿವರಗಳನ್ನು ನೀಡದಿದ್ದರೂ, ಎರಡು ವಿಭಿನ್ನ ರಾಜಕೀಯ ಪಕ್ಷಗಳಿಂದ ಆಫರ್‌ಗಳು ಬಂದಿವೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಮಾನಸಿಕವಾಗಿ ನಾನು ಸಿದ್ಧವಾಗಿರಲಿಲ್ಲ. ನಾನು ಈಗ ನನ್ನ ಸ್ಥಾನದಲ್ಲಿ ಸಂತೋಷವಾಗಿದ್ದೇನೆ. ನಾನು ಯಾವಾಗ ರೆಡಿ ಎನಿಸುತ್ತದೋ ಆಗ ನಾನು ಸಿದ್ಧ ಎಂದು ಗಟ್ಟಿಯಾಗಿ ಹೇಳುತ್ತೇನೆ ಎಂದಿದ್ದಾರೆ.
ಓದದೆ ಬಾಕಿ ಇದೆ 54 ಸಾವಿರ ಮೇಲ್: 18 ಕೊಟಿ ಮುಗಿಯೋಕೆ 18 ಗಂಟೆಯೂ ಬೇಡ ಎಂದ ಸೋನು
ಆದಾಯ ತೆರಿಗೆ ಇಲಾಖೆಯು ಸೋನು ಸೂದ್ ಮುಂಬೈ ಮನೆ ಹಾಗೂ ಇತರ ಪ್ರದೇಶದಲ್ಲಿ ರೈಡ್ ಮಾಡಿದ ಕೆಲವು ದಿನಗಳ ನಂತರ ಈ ಹೇಳಿಕೆ ನೀಡಿದ್ದಾರೆ ನಟ. ಕಳೆದ ವಾರ ಅವರ ಮನೆ ಮತ್ತು ಕಚೇರಿ ಆವರಣದಲ್ಲಿ ನಟ ಹಾಗೂ ನಟನನ ಸಹಚರರಿಗೆ ಸಂಬಂಧಿಸಿದ ಅನೇಕ ರೈಡ್ ಮಾಡಲಾಗಿದೆ ನಡೆಸಲಾಯಿತು.
