ಬಾಲಿವುಡ್‌ ವರ್ಸಟೈಲ್‌ ಆ್ಯಕ್ಟರ್ ನವಾಜುದ್ದೀನ್ ಸಿದ್ದಿಕಿ ಪ್ರೀತಿಯ 26 ವರ್ಷದ ಸಹೋದರಿ ಶ್ಯಾಮಾ 8 ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶನಿವಾರ ಪುಣೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇದಪ್ಪಾ ಲಕ್ ಅಂದ್ರೆ..! ಬಾಲಿವುಡ್ ಖ್ಯಾತ ನಟನ ಜೊತೆ ಬಿಗ್‌ಬಾಸ್ ಸ್ಪರ್ಧಿ!

ಸಹೋದರಿ ಸಾವಿನ ವಿಚಾರವನ್ನು ಮತ್ತೊಬ್ಬ ಸಹೋದರ ಅಯಾಜುದ್ದೀನ್ ಸಿದ್ದಿಕಿ ಮಾಧ್ಯಮದವರಿಗೆ ತಿಳಿಸಿದ್ದಾರೆ.  ಈ ವೇಳೆ  ನವಾಜುದ್ದೀನ್ ಸಿದ್ದಿಕಿ USA ನಲ್ಲಿದ್ದರು.  ಉತ್ತರ ಪ್ರದೇಶದ ಭುದಾನದಲ್ಲಿ ಸಿದ್ದಿಕಿ ಕುಟುಂಬದವರು ವಾಸವಿರುವ ಸ್ಥಳದಲ್ಲೇ ಆಕೆಯ ಅಂತ್ಯಕ್ರಿಯೆ ಭಾನುವಾರ ನಡೆಸಲಾಗಿದೆ.

'ನನ್ನ ಸಹೋದರಿ 18ನೇ ವಯಸ್ಸಿನಲ್ಲಿ ಅಡ್ವಾನ್ಸ್‌ ಸ್ಟೇಟ್‌ ಆಫ್‌ ಬ್ರೆಸ್ಟ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು.  ಆಕೆಯ ವಿಲ್ ಪವರ್ ಮತ್ತು ಕರೇಜ್‌ನಿಂದ ಇಷ್ಟು ವರ್ಷ ಹೋರಾಡಿದ್ದಾರೆ. ಎರಡು ದಿನಗಳ ಹಿಂದೆ ಆಕೆಗೆ 25 ವರ್ಷವಾಗಿತ್ತು. ಆಕೆಗೆ ಸ್ಫೂರ್ತಿ ತುಂಬುತ್ತಾ ಧೈರ್ಯ ನೀಡಿದ ಇಬ್ಬರು ವೈದ್ಯರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು' ಎಂದು ಟ್ಟಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.