ಮದುವೆಗೆ ಮುಂಚೆಯೇ ಗರ್ಭಿಣಿಯಾಗಿ ಶಾಕ್ ಕೊಟ್ರು ಆ್ಯಮಿ ಜಾಕ್ಸನ್ | ಸ್ನೇಹಿತ ಜಾರ್ಜ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ | ಅಭಿಮಾನಿಗಳಿಗೆ ಇನ್ನೊಂದು ಸಪ್ರೈಸ್ ನೀಡಿದ್ದಾರೆ.
ಬೆಂಗಳೂರು (ಏ. 10): ಮದುವೆಗೆ ಮುಂಚೆಯೇ ಗರ್ಭಿಣಿಯಾಗಿರುವ ಶಾಕಿಂಗ್ ನ್ಯೂಸ್ ಕೊಟ್ಟು ಸುದ್ದಿಯಾಗಿದ್ದರು ನಟಿ ಆ್ಯಮಿ ಜಾಕ್ಸನ್. ಇದೀಗ ಇನ್ನೊಂದು ಸರ್ಪ್ರೈಸ್ ನೀಡಿದ್ದಾರೆ.

ಗೆಳೆಯ ಜಾರ್ಜ್ ಜೊತೆ ಮೇ 5 ರಂದು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ ಆ್ಯಮಿ. ಲಂಡನ್ ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ. ಕುಟುಂಬದ ಆಪ್ತರು, ಸ್ನೇಹಿತರನ್ನು ನಿಶ್ಚಿತಾರ್ಥಕ್ಕೆ ಆಹ್ವಾನಿಸಲಾಗಿದೆ. 2020 ರಲ್ಲಿ ಮದುವೆಯಾಗುವ ಪ್ಲಾನ್ ಇದೆಯಂತೆ!

ಆ್ಯಮಿ ಜಾಕ್ಸನ್ ಕಿಚ್ಚ ಸುದೀಪ್, ಶಿವಣ್ಣ ಅಭಿನಯದ ’ದಿ ವಿಲನ್’ ನಲ್ಲಿ ನಾಯಕಿಯಾಗಿ ನಟಿಸಿದ್ದರು. ರಜನೀಕಾಂತ್ ಅಭಿನಯದ 2.0 ದಲ್ಲಿಯೂ ಅಭಿನಯಿಸಿದ್ದರು.
