ಬೆಂಗಳೂರು (ಮಾ. 24): ಇವರಿಬ್ಬರು ಸಂಗೀತ ಲೋಕದ ದಂತಕಥೆಗಳು. ಇವರ ಹಾಡುಗಳೆಂದರೆ ಸಾಕು ಎಂಥದೋ ಮಾಂತ್ರಿಕ ಶಕ್ತಿ ಇರುತ್ತದೆ. ಅದ್ಭುತ ಕಂಠಸಿರಿಗೆ ಮಾರು ಹೋಗದವರೇ ಇಲ್ಲ. ಹೌದು ಗಾನ ಗಾರುಡಿಗರಾದ ಎಸ್ ಪಿಬಿ ಹಾಗೂ ಕೆಜೆ ಯೇಸುದಾಸ್ ಒಂದಾಗಿದ್ದಾರೆ. 

27 ವರ್ಷಗಳ ಬಳಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಯೇಸುದಾಸ್ ಒಟ್ಟಿಗೆ ಹಾಡಿದ್ದಾರೆ. ಮಲಯಾಳಂನ ’ಕಿನಾರ್’ ಎನ್ನುವ ಚಿತ್ರಕ್ಕೆ ಇವರಿಬ್ಬರೂ ದನಿ ನೀಡಿದ್ದಾರೆ. 

’ಕಿನಾರ್’ ಚಿತ್ರ ತಮಿಳು-ಮಲಯಾಳಂನಲ್ಲಿ ತೆರೆಕಂಡ ದ್ವಿಭಾಷಾ ಚಿತ್ರ. ತಮಿಳುನಾಡು ಹಾಗೂ ಕೇರಳ ನಡುವಿನ ನೀರಿನ ಕೊರತೆ ಬಗ್ಗೆ ಈ ಚಿತ್ರ ಹೇಳುತ್ತದೆ. ಜಯಪ್ರದಾ, ರೇವತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ ಎ ನಿಶಾದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

"